Day: April 18, 2021

ಪುತ್ತೂರು | ಶ್ರೀ ದುರ್ಗಾ ಬಾಡಿ ವರ್ಕ್ಸ್ ಶುಭಾರಂಭ

ಪುತ್ತೂರು: ನಗರ ಹೊರವಲಯದ ಮುಕ್ರಂಪಾಡಿ ಮುಖ್ಯರಸ್ತೆಯಲ್ಲಿ ಗಗನ್ ಭಟ್ ಮಾಲಕತ್ವದ ಶ್ರೀ ದುರ್ಗಾ ಬಾಡಿವರ್ಕ್ಸ್ ಸಂಸ್ಥೆ ಎಪ್ರಿಲ್ 14ರಂದು ಶುಭಾರಂಭಗೊಂಡಿದೆ. ನಮ್ಮಲ್ಲಿ ಅತ್ಯಂತ ಸುಧಾರಿತ, ವಿನೂತನ ಶೈಲಿಯಲ್ಲಿ ಎಲ್ಲಾ ನಾಲ್ಕು ಚಕ್ರ ವಾಹನಗಳ ಡೆಂಟಿಂಗ್ ಅಂಡ್ ಪೈಂಟಿಂಗ್ ಮತ್ತು ಎಲ್ಲಾ ತರಹದ ಬಾಡಿ ವರ್ಕ್ಸ್ ಗಳನ್ನು ಕಡಿಮೆ ದರದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ. ಸಂಪರ್ಕಿಸಿ : 9945268194

“ಲೋ ಮಚ್ಚಾ ಸಗಣಿ ನೋಡಿದ್ಯೇನೋ” ಅಂತ ನಿಮ್ಮನ್ನು ಗೆಳೆಯರು ಕೇಳಿದರೆ ಏನಿರುತ್ತೆ ನಿಮ್ಮ ರಿಯಾಕ್ಷನ್ ?!

“ಲೋ ಮಚ್ಚಾ ಸಗಣಿ ನೋಡಿದ್ಯೇನೋ” ಅಂತ ನಿಮ್ಮನ್ನು ಗೆಳೆಯರು ಕೇಳಿದರೆ ಏನಿರುತ್ತೆ ನಿಮ್ಮ ರಿಯಾಕ್ಷನ್ ? ಹೋಗಲಿ, ನಿಮಗೆ ಇನ್ನೊಂದು ಪ್ರಶ್ನೆ. ” ಗೆಳೆಯಾ, ಸಗಣಿ ನೋಡ್ಕೊಂಡು ಬರೋಣ, ಟಿಕೆಟ್ ರೆಡಿ ಇದೆ ” ಅಂತ ಯಾರಾದ್ರೂ ನಿಮ್ಮನ್ನು ಕೇಳಿದರೆ ಆಗ ಏನನ್ನಿಸುತ್ತದೆ ?” ಖಚಿತವಾಗಿ ನೀವು ತಡಬಡಾಯಿಸುವುದಂತೂ ಸತ್ಯ. ಅಷ್ಟಕ್ಕೂ ಏನಿದು ಸಗಣಿಯ ಕಥೆ?! ಸಿನಿಮಾ ಟೈಟಲ್‌ಗಳ ವಿಷಯಕ್ಕೆ ಬಂದರೆ ಒಂಟಿ ಅಕ್ಷರಗಳು, ಸಂಖ್ಯೆಗಳು, ಚಿಹ್ನೆಗಳು, ಹಾಡಿನ ಸಾಹಿತ್ಯ, ಸಿನಿಮಾ ಡೈಲಾಗ್ಸ್, ಊರಿನ ಹೆಸರು, ಪ್ರಾಣಿಯ …

“ಲೋ ಮಚ್ಚಾ ಸಗಣಿ ನೋಡಿದ್ಯೇನೋ” ಅಂತ ನಿಮ್ಮನ್ನು ಗೆಳೆಯರು ಕೇಳಿದರೆ ಏನಿರುತ್ತೆ ನಿಮ್ಮ ರಿಯಾಕ್ಷನ್ ?! Read More »

ಮರ್ಕಂಜ : ಗಂಡ ಹೆಂಡತಿ ಜಗಳ ,ಹೆಂಡತಿಗೆ ಗಂಡನಿಂದ ಕತ್ತಿಯೇಟು

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಹೈದಂಗೂರು ಎಂಬಲ್ಲಿ ಗಂಡ ಹೆಂಡತಿಯ ನಡುವೆ ಜಗಳವಾಗಿ ಪತಿಯು ಪತ್ನಿಗೆ ಕತ್ತಿಯಿಂದ ಕಡಿದಿರುವ ಬಗ್ಗೆ ವರದಿಯಾಗಿದೆ. ಹೈದಂಗೂರು ನಿವಾಸಿ ಸುಂದರ ಮತ್ತು ಅವರ ಪತ್ನಿ ಯಶೋದಾ ಎಂಬವರ ಮಧ್ಯೆ ನಿನ್ನೆ ರಾತ್ರಿಯಿಂದ ಜಗಳ ನಡೆಯುತ್ತಿತ್ತೆನ್ನಲಾಗಿದೆ. ಈ ಮಧ್ಯೆ ಸುಂದರ ತನ್ನ ಪತ್ನಿ ಯಶೋದಾಗೆ ಕತ್ತಿಯಿಂದ ಕಡಿದಿದ್ದಾರೆ ಎನ್ನಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಯಶೋಧಾ ಅವರನ್ನು ಅಂಬ್ಯುಲೆನ್ಸ್ ಮೂಲಕ ಸುಳ್ಯ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದು ಬಂದಿದೆ.

ಜಲಪಾತಕ್ಕೆ ಬಿದ್ದು ಇಬ್ಬರ ದಾರುಣ ಸಾವು

ಜಲಪಾತಕ್ಕೆ ಬಿದ್ದು ಇಬ್ಬರು ದಾರುಣವಾಗಿ ಸಾವು ಕಂಡಿದ್ದಾರೆ.ಮೃತರನ್ನು ಸುಂಟಿಕೊಪ್ಪದ ಶಶಿಕುಮಾರ್ (32) ಮತ್ತು ದಿವ್ಯ (20) ಎಂದು ಗುರುತಿಸಲಾಗಿದೆ. ಸೋಮವಾರಪೇಟೆ ತಾಲೂಕಿನ ಮಲ್ಲಳ್ಲಿ ಜಲಪಾತ ವೀಕ್ಷಣೆಯ ಸಂದರ್ಭ ಈ ದುರ್ಘಟನೆ ನಡೆದಿದೆ. ಇಂದು ಬೆಳಗ್ಗೆ 9.30 ಗಂಟೆ ಸುಮಾರಿಗೆ ವೀಕೆಂಡ್ ಹಿನ್ನೆಲೆಯಲ್ಲಿ ಆರು ಜನರ ತಂಡ ಜಲಪಾತಕ್ಕೆ ಹೊರಟಿತ್ತು. ಅಲ್ಲಿ ಮೈಮರೆತು, ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಜಲಪಾತದ ಕೆಳಗೆ ದಿವ್ಯಾ ಜಾರಿದ್ದಾಳೆ. ಆಕೆಯನ್ನು ರಕ್ಷಿಸಲು ಹೋಗಿ ಶಶಿಕುಮಾರ್ ಸಹ ನೀರಿನೊಳಗೆ ಬಿದ್ದು ಬಿಟ್ಟಿದ್ದಾರೆ. ಅನಿರೀಕ್ಷಿತವಾಗಿ …

ಜಲಪಾತಕ್ಕೆ ಬಿದ್ದು ಇಬ್ಬರ ದಾರುಣ ಸಾವು Read More »

ಕೈ ಮೀರಿದ ಕೊರೊನಾ ಇಂದು ದೇಶದಲ್ಲಿ  2,61,500 ಮಂದಿಗೆ ಕೋವಿಡ್ ದೃಢ‌, 1,501 ಮಂದಿ ಸಾವು

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತವು 2,61,500 ಹೊಸ ಕೊರೊನ ಪ್ರಕರಣಗಳನ್ನು ಕಂಡಿದ್ದು, 1,501 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 1,38,423 ಮಂದಿಯನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ. 24 ಗಂಟೆಯೊಳಗೆ ವರದಿ ನೀಡಲು ಹೈಕೋರ್ಟ್ ಸೂಚನೆ ಕೋವಿಡ್ ಪರೀಕ್ಷೆ ವರದಿ ನೀಡುವುದರಲ್ಲಿ ವಿಳಂಬವಾಗುತ್ತಿದೆ. ಎಸ್ಎಂಎಸ್, ವಾಟ್ಸಾಪ್ ಮೂಲಕ ಶೀಘ್ರ ವರದಿಗೆ ಸೂಚನೆ ನೀಡಲಾಗಿದೆ. 24 ಗಂಟೆಯೊಳಗೆ ವರದಿ ನೀಡಲು ಹೈಕೋರ್ಟ್ ಸೂಚನೆ ನೀಡಿದ್ದು, ಟೆಸ್ಟ್ ಮಾಡಿಸಿದವರು ಹೋಮ್ ಕ್ವಾರಂಟೈನ್ ನಲ್ಲಿ …

ಕೈ ಮೀರಿದ ಕೊರೊನಾ ಇಂದು ದೇಶದಲ್ಲಿ  2,61,500 ಮಂದಿಗೆ ಕೋವಿಡ್ ದೃಢ‌, 1,501 ಮಂದಿ ಸಾವು Read More »

ಎಷ್ಟೇ ಪ್ರತಿಕೂಲ ವಾತಾವರಣದಲ್ಲೂ, ಸೂರ್ಯ-ಚಂದ್ರ ಇರುವ ವರೆಗೂ ಬದುಕುಳಿಯಬಲ್ಲ ಜೀವಿ ಯಾವುದು ಗೊತ್ತಾ?!

ಭೂಮಿಯ ಮೇಲೆ ಇರುವ ಜೀವಿಗಳಲ್ಲಿ ಅತ್ಯಂತ ಕಠಿನತಮ ಜೀವಿ ಯಾವುದು? ಇದೀಗ ಜೀವಂತ ಇರುವ ಪ್ರಾಣಿಗಳಲ್ಲಿ ಯಾವ ಜೀವಿ ವಿಶ್ವದ ಎಕ್ಸ್ಟ್ರೀಮ್ ಅನ್ನುವಂತಹ ವಾತಾವರಣಗಳನ್ನು ಕೂಡ ತಾಳಿಕೊಂಡು ಮತ್ತೆ ಜೀವಂತವಾಗಿ ಬರಬಲ್ಲದು ? ಯಾವುದೇ ಉತ್ಪಾತಗಳಾದರೂ ಬದುಕುಳಿಯಬಲ್ಲ ಜೀವಿ ಯಾವುದಾದರೂ ಇದೆಯಾ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅಂತಹ ಜೀವ ಪ್ರಭೇದವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮುಖ್ಯವಾಗಿ ಈ ಜೀವಿಯನ್ನು ​ಸೂರ್ಯ-ಚಂದ್ರ ಇರುವ ವರೆಗೂ ಉಳಿಯುವ ಜೀವಿ ಎನ್ನಲಾಗುತ್ತಿದೆ. ಭೂಮಿ ಮೇಲಿನ ಜೀವಿಗಳೆಲ್ಲ ನಾಶವಾದ ಬಳಿಕವೂ …

ಎಷ್ಟೇ ಪ್ರತಿಕೂಲ ವಾತಾವರಣದಲ್ಲೂ, ಸೂರ್ಯ-ಚಂದ್ರ ಇರುವ ವರೆಗೂ ಬದುಕುಳಿಯಬಲ್ಲ ಜೀವಿ ಯಾವುದು ಗೊತ್ತಾ?! Read More »

ಕನಕಮಜಲು | ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ

ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮವು ಜೆಸಿಐ ಸುಳ್ಯ ಸಿಟಿ ಹಾಗೂ ಕನಕಮಜಲು ಗ್ರಾಮ ಪಂಚಾಯತ್ ಇದರ ಸಹಭಾಗಿತ್ವದಲ್ಲಿ ಎ.16 ರಂದು ಕನಕಮಜಲು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೆಸಿಐ ಸುಳ್ಯ ಸಿಟಿಯ ಘಟಕಾಧ್ಯಕ್ಷರಾದ ಜೆಸಿ ಚಂದ್ರಶೇಖರ ಕನಕಮಜಲು ವಹಿಸಿದರು. ಕಾರ್ಯಕ್ರಮ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಕನಕಮಜಲು ಇದರ ಅಧ್ಯಕ್ಷ ಶ್ರೀ ಶ್ರೀಧರ್ ಕುತ್ಯಾಳ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕನಕಮಜಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಉಪಸ್ಥಿತರಿದ್ದರು. ಕೋವಿಡ್ ಲಸಿಕಾ ಬಗ್ಗೆ ಮಾಹಿತಿಯನ್ನು …

ಕನಕಮಜಲು | ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ Read More »

ಬೆಂಗಳೂರಿನಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದೆ – ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ | ಲಾಕ್ ಡೌನ್ ಒಂದೇ ಪರಿಹಾರನಾ ?!

ಬೆಂಗಳೂರಿನಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರಕ ಸ್ಥಿತಿ ಇರುವುದನ್ನು ಒಪ್ಪಿಕೊಂಡಿದ್ದು, ಬೆಂಗಳೂರು ನಗರದಲ್ಲಿ ವಿಶೇಷ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಇಲ್ಲದೇ ಹೋದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ನಾಳೆಯ ಸಭೆಯಲ್ಲಿ ಚರ್ಚೆ ಮಾಡಿ ಕಠಿಣ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಐಸಿಯು ಬೆಡ್ ಗಳ ಸಮಸ್ಯೆ ಇದೆ. ಐಸಿಯು ಬೆಡ್ ಗಳ ಸಮಸ್ಯೆ ಇಲ್ಲವೆಂದು ನಾನು ಹೇಳಲ್ಲ. ಜೋನಲ್ ನೋಡಲ್ ಅಧಿಕಾರಿಗಳನ್ನು ನೇಮಕ …

ಬೆಂಗಳೂರಿನಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದೆ – ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ | ಲಾಕ್ ಡೌನ್ ಒಂದೇ ಪರಿಹಾರನಾ ?! Read More »

ನಟಿ ರಶ್ಮಿಕಾ ಅಂದು ಸಾಲು ಮರದ ತಿಮ್ಮಕ್ಕನ ಬಗ್ಗೆ ವಿವರಿಸಲು ತಡಬಡಾಯಿಸಿದ ಸಂದರ್ಭ ತಿಮ್ಮಕ್ಕನ ಸಾಧನೆ ಬಗ್ಗೆ ಹೇಳಿದ್ದ ನಟ ವಿವೇಕ್ | ವಿಡಿಯೋ ವೈರಲ್​

ಮೊನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟ ತಮಿಳು ಚಿತ್ರರಂಗದ ಹಾಸ್ಯ ದಿಗ್ಗಜ ವಿವೇಕ್​ ಕೇವಲ ಕಲಾವಿದ ಮಾತ್ರ ಆಗಿರಲಿಲ್ಲ. ಸಾವಿರಾರು ಗಿಡಗಳನ್ನು ನೆಟ್ಟು ಪರಿಸರ ಬೆಳೆಸಲೂ ಸಹಕಾರಿಯಾಗಿದ್ದರು. ಇಂದು ವಿವೇಕ್​ ಮೃತಪಡುತ್ತಿದ್ದಂತೆ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅವರು ಸಾಲು ಮರದ ತಿಮ್ಮಕ್ಕನ ಸಾಧನೆಯ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟದ್ದರು. ಎರಡು ವರ್ಷಗಳ ಹಿಂದಿನ ಕಾರ್ಯಕ್ರಮವೊಂದರಲ್ಲಿ ಸಾಲು ಮರದ ತಿಮ್ಮಕ್ಕಗೆ ಸನ್ಮಾನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ, ವಿವೇಕ್​ ಇಬ್ಬರೂ ಪಾಲ್ಗೊಂಡಿದ್ದರು. ಈ …

ನಟಿ ರಶ್ಮಿಕಾ ಅಂದು ಸಾಲು ಮರದ ತಿಮ್ಮಕ್ಕನ ಬಗ್ಗೆ ವಿವರಿಸಲು ತಡಬಡಾಯಿಸಿದ ಸಂದರ್ಭ ತಿಮ್ಮಕ್ಕನ ಸಾಧನೆ ಬಗ್ಗೆ ಹೇಳಿದ್ದ ನಟ ವಿವೇಕ್ | ವಿಡಿಯೋ ವೈರಲ್​ Read More »

ಕದ್ದ ರಿವಾಲ್ವರ್ ತೋರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಖದೀಮರ ತಂಡವನ್ನು ಬಂಧಿಸಿ ಪೊಲೀಸರು

ಕಳ್ಳತನ ಮಾಡಿದ ರಿವಾಲ್ವರ್ ತೋರಿಸಿ ದರೋಡೆ ಮಾಡುತ್ತಿದ್ದವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 2020 ರಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಅರೆಹಳ್ಳಿಯಲ್ಲಿ ಮನೆಗೆ ಕಳ್ಳತನ ಮಾಡಲು ನುಗ್ಗಿದ್ದ ಕಳ್ಳರ ಗುಂಪೊಂದು ಬುಲೆಟ್ಗಳ ಸಮೇತ ಲೈಸೆನ್ಸ್ ಇರುವ ಪಿಸ್ತೂಲ್ ಅನ್ನು ಅಪಹರ ಮಾಡಿತ್ತು. ಕದ್ದ ರಿವಾಲ್ವಾರ್‌ನ್ನೇ ಬಂಡವಾಳವಾಗಿಸಿಕೊಂಡ ಕಳ್ಳರ ತಂಡ ಹೆದ್ದರಿ, ಮನೆ ದರೋಡೆ ಹೀಗೆ ಸಾಕಷ್ಟು ಕೃತ್ಯಗಳನ್ನು ನಡೆಸಿತ್ತು.ಒಂದೇ ಒಂದು ರಿವಾಲ್ವರ್ ನಿಂದ ನಾಲ್ಕೈದು ಜನರ ತಂಡ ಸುಮರು 50 ಕ್ಕೂ ಹೆಚ್ಚು ಜನರ ದರೋಡೆ ಗುಂಪಾಗಿ …

ಕದ್ದ ರಿವಾಲ್ವರ್ ತೋರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಖದೀಮರ ತಂಡವನ್ನು ಬಂಧಿಸಿ ಪೊಲೀಸರು Read More »

error: Content is protected !!
Scroll to Top