ಕದ್ದ ರಿವಾಲ್ವರ್ ತೋರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಖದೀಮರ ತಂಡವನ್ನು ಬಂಧಿಸಿ ಪೊಲೀಸರು

ಕಳ್ಳತನ ಮಾಡಿದ ರಿವಾಲ್ವರ್ ತೋರಿಸಿ ದರೋಡೆ ಮಾಡುತ್ತಿದ್ದವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

2020 ರಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಅರೆಹಳ್ಳಿಯಲ್ಲಿ ಮನೆಗೆ ಕಳ್ಳತನ ಮಾಡಲು ನುಗ್ಗಿದ್ದ ಕಳ್ಳರ ಗುಂಪೊಂದು ಬುಲೆಟ್ಗಳ ಸಮೇತ ಲೈಸೆನ್ಸ್ ಇರುವ ಪಿಸ್ತೂಲ್ ಅನ್ನು ಅಪಹರ ಮಾಡಿತ್ತು.

ಕದ್ದ ರಿವಾಲ್ವಾರ್‌ನ್ನೇ ಬಂಡವಾಳವಾಗಿಸಿಕೊಂಡ ಕಳ್ಳರ ತಂಡ ಹೆದ್ದರಿ, ಮನೆ ದರೋಡೆ ಹೀಗೆ ಸಾಕಷ್ಟು ಕೃತ್ಯಗಳನ್ನು ನಡೆಸಿತ್ತು.ಒಂದೇ ಒಂದು ರಿವಾಲ್ವರ್ ನಿಂದ ನಾಲ್ಕೈದು ಜನರ ತಂಡ ಸುಮರು 50 ಕ್ಕೂ ಹೆಚ್ಚು ಜನರ ದರೋಡೆ ಗುಂಪಾಗಿ ಬೆಳೆದಿತ್ತು.

ನಾಲ್ಕು ತಂಡಗಳಾಗಿ ಕಳ್ಳತನಕ್ಕೆ ಇಳಿಯುತ್ತಿದ್ದ ಇವರು ಹೆದ್ದಾರಿ ದರೋಡೆ, ಮನೆ ದರೋಡೆ, ಕಳ್ಳತನ ಸೇರಿದಂತೆ ವಿವಿಧ ಕೃತ್ಯದಲ್ಲಿ ತೊಡಗಿದ್ದರು.

ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ ಸೇರಿದಂತೆ ಮಂಗಳೂರಿನ 12 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿದ್ದವು. ಈ ತಂಡವನ್ನು ಬಂಧಿಸುವ ಮೂಲಕ ಮಂಗಳೂರು ಪೊಲೀಸರು ಒಟ್ಟು 28 ಪೊಲೀಸ್ ಠಾಣೆಗಳಿಗೆ ಬೇಕಾದ ಈ ಕಳ್ಳರ ಗುಂಪನ್ನು ಬಂಧಿಸಿದಂತಾಗಿದೆ.

Leave A Reply

Your email address will not be published.