ಮಂಗಳೂರು: ಕ್ವಾರಂಟೈನ್‌ನಲ್ಲಿದ್ದ ಮಹಿಳೆಯ ಮಗು ಗರ್ಭದಲ್ಲೇ ಸಾವು

ಮಂಗಳೂರು : ವಿದೇಶದಿಂದ‌ ಬಂದು ಕ್ವಾರಂಟೈನ್‌ನಲ್ಲಿದ್ದ ಮಹಿಳೆಯೋರ್ವರ ಮಗು ಗರ್ಭದಲ್ಲೇ ಮೃತಪಟ್ಟ ಘಟನೆ ಕುರಿತು ವರದಿಯಾಗಿದೆ.

ಮೇ.12 ರಂದು ದುಬೈಯಿಂದ ಮಹಿಳೆಯೋರ್ವರು ಕ್ವಾರಂಟೈನ್‌ನಲ್ಲಿದ್ದು ಇದೀಗ ಅವರ ಮಗು ಗರ್ಭದಲ್ಲೇ ಮೃತಪಟ್ಟಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ.

ಮಹಿಳೆಯ ಗಂಟಲ ದ್ರವ ಕೊರೊನಾ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದ್ದು, ಆ ಬಳಿಕವೂ ಗರ್ಭಿಣಿಯ ತಪಾಸಣೆಗೆ ಖಾಸಗಿ ಆಸ್ಪತ್ರೆಯ ವೈದ್ಯರು ನಿರಾಕರಿಸಿದ್ದಾರೆ. ಅಲ್ಲದೆ ದುಬೈಯಿಂದ ಬಂದ ದಿನ ವಿಮಾನ‌ ನಿಲ್ದಾಣದಲ್ಲಿ ಸುಮಾರು 3 ಗಂಟೆಗಳ‌ ಕಾಲ ಸುತ್ತಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಅವರು, ಜಿಲ್ಲಾಡಳಿತದಿಂದ ನಿರ್ಲಕ್ಷ್ಯ ಆಗಿದ್ದರೆ ದೂರು ನೀಡಬಹುದಿತ್ತು. ಚಿಕಿತ್ಸೆಗೆ‌ ನಿರಾಕರಿಸಿದ ಖಾಸಗಿ ವೈದ್ಯರ ಕುರಿತು ದೂರು‌ ನೀಡಲು ಅವಕಾಶವಿತ್ತು. ಈವರೆಗೂ ಅಂತಹ ಯಾವುದೇ ದೂರು ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Leave A Reply

Your email address will not be published.