” ಗಡಿಯಲ್ಲಿ ಬಿಡದಿದ್ದರೇನಂತೆ ನದಿಯಲ್ಲಿ ಈಜಿ ಬರುತ್ತೇವೆ ” ಕುಡುಕರಿಂದ ಪೊಲೀಸರಿಗೇ ಚಾಲೆಂಜ್…!

ಮೈಸೂರು: ಕುಡುಕರ ಸ್ವಭಾವವೇ ಹಾಗೆ ಒಂದು ಔನ್ಸ್ ಮದ್ಯಕ್ಕಾಗಿ ನಡೆದುಕೊಂಡು ನೂರು ಕಿಲೋಮೀಟರ್ ಹೋಗಲು ಸಿದ್ಧ ಎನ್ನುವವರಿದ್ದಾರೆ.
ಹಾಗೆ ಇಲ್ಲೊಂದೆಡೆ ಮದ್ಯಪ್ರಿಯರು ನದಿಯಲ್ಲಿ ಈಜಿಕೊಂಡು ಬಂದು ಮದ್ಯ ಕುಡಿದು ವಾಪಸಾದ ಘಟನೆ ವರದಿಯಾಗಿದೆ.

ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ದಿನಗಳಲ್ಲಿ ದೇಶದಾದ್ಯಂತ ಮದ್ಯಮಾರಾಟ ನಿಷೇಧಿಸಲಾಗಿತ್ತು. ಕಳೆದ ಕೆಲದಿನಗಳಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮದ್ಯದಂಗಡಿ ತೆರೆದಿದೆಯಾದರೂ ಕೇರಳ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ. ಆ ಕಾರಣದಿಂದ ಗಡಿಯಲ್ಲಿರುವ ಮದ್ಯಪ್ರಿಯರು ಕರ್ನಾಟಕ ರಾಜ್ಯಕ್ಕೆ ಮದ್ಯಕ್ಕಾಗಿ ಬರಲು ಪ್ರಯತ್ನಿಸಿದ್ದಾರೆ.

ಈ ಸಮಯದಲ್ಲಿ ಅಂತರ್ ರಾಜ್ಯ ಅವಕಾಶ ಇಲ್ಲದ ಕಾರಣ ಪೊಲೀಸರು ಅವರನ್ನು ತಡೆದಿದ್ದು ಇದರಿಂದ ಹತಾಶರಾದ ಕುಡುಕರು ಕೇರಳದ ವಯನಾಡ್ ಜಿಲ್ಲೆಯಿಂದ ಕರ್ನಾಟಕದ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಮೂಲಕ ಹರಿಯುವ ಕಪಿಲ ನದಿಯ ಮೂಲಕ ಈಜಿ ಗಡಿ ದಾಟಿದ್ದಾರೆ.

ಇದನ್ನು ಕಂಡ ಸ್ಥಳೀಯರು ಹಲವು ದಿನಗಳಿಂದ ಕುಡುಕರ ಬಗ್ಗೆ ಕರುಣೆ ತೋರಿ ಸುಮ್ಮನಿದ್ದು ಈಗ ಅವರ ಹಾವಳಿ ಪ್ರಾರಂಭವಾದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಇದೀಗ ಈ ಸುದ್ದಿ ಆತಂಕ ಸೃಷ್ಟಿಸಿದೆ. ಕೇರಳವನ್ನು ಗಡಿಯಾಗಿಸಿ ಕೊಂಡ ನದಿ ಮಾತ್ರವಲ್ಲ, ಪುತ್ತೂರು ಕಾಸರಗೋಡು ಅರಣ್ಯ ಗಡಿ ಕೂಡಾ ಅಪಾಯಕಾರಿ. ನಡೆದೇ ಒಳಬರುವ ಇಂತಹಾ ಜನರನ್ನು ಗುರುತಿಸುವುದು ಪೊಲೀಸರಿಗೆ ಕಷ್ಟ. ಗಡಿಯ ಆಸುಪಾಸಿನ ಜನರು ಜಾಗೃತರಾಗಿದ್ದಾರೆ ಇಂತಹ ಪ್ರಯತ್ನಗಳನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.

Leave A Reply

Your email address will not be published.