ಜಿ.ಪಂ.ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು ಇನ್ನಿಲ್ಲ

ಭಾರತೀಯ ಜನತಾ ಪಾರ್ಟಿಯ ಪುತ್ತೂರು ಮಂಡಲದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯ ಕೇಶವ ಬಜತ್ತೂರು ಮೇ.28 ರಂದು ನಿಧನರಾದರು.

ಕೆಲ ಸಮಯಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.ಮೃತರು ಪತ್ನಿ, ಪುತ್ರ,ಪುತ್ರಿಯನ್ನು ಅಗಲಿದ್ದಾರೆ.

ಭರವಸೆಯ ರಾಜಕಾರಣಿಯಾಗಿದ್ದ, ಸ್ಪಷ್ಠ ಹಾಗೂ ದೃಢ ನಿಲುವಿನಿಂದ ಸಮಸ್ಯೆಗೆ ಎದೆಯೊಡ್ಡುತ್ತಿದ್ದ , ಜನರ ಭಾವನೆಗೆ ಸ್ಪಂದಿಸುವ ತುಡಿತವನ್ನಿಟ್ಟುಕೊಂಡಿದ್ದ ಯುವ ರಾಜಕಾರಣಿ, ಗ್ರಾಮ ಪಂಚಾಯತ್ ಸದಸ್ಯನಾಗಿ ,ಗ್ರಾಮ ಅಧ್ಯಕ್ಷನಾಗಿ, ಜಿಪಂ ಸದಸ್ಯನಾಗಿ ಉತ್ತಮ ಕಾರ್ಯಗಳನ್ನು ಮಾಡಿ ಗಮನ ಸೆಳೆದವರು.

ಕಳೆದ ಲೋಕಸಭಾ ಚುನಾವಣೆಯ ಕಾಲಘಟ್ಟದಲ್ಲಿಯೂ ಪಾದರಸದಂತೆ ಓಡಾಡಿಕೊಂಡಿದ್ದವರು ಬಳಿಕದ ದಿನಗಳಲ್ಲಿ ಕಾಣಿಸಿಕೊಳ್ಳದ ಅವರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು.

ಸಮಾಜದ ಹಿತಕ್ಕಾಗಿ ಸ್ವ ಹಿತವನ್ನು ಕಡೆಗಣಿಸುತ್ತಿದ್ದ , ನಿಷ್ಟುರ ನುಡಿ, ಪ್ರಖರ ವಾದಗಳಿಂದ ಜನ ಸಾಮಾನ್ಯರ ಸಮಸ್ಯೆಗಳಿಗೆ ದ್ವನಿಯಾಗುತ್ತಿದ್ದ, ಸಂಕಷ್ಠದ ಸಮಯದಲ್ಲಿ ಪಲಾಯನವಾದಿಯಾಗದೆ ಕೆಚ್ಚೆದೆಯಿಂದ ಸಮಸ್ಯೆಯನ್ನು ಎದುರಿಸುತ್ತಿದ್ದ ಅವರ ಕಾರ್ಯಶೈಲಿ ಮಾದರಿಯಾಗಿತ್ತು.

Leave A Reply

Your email address will not be published.