ರಾಜ್ಯಾದ್ಯಂತ ಹಂಚಿಕೆಯಾಗುತ್ತಿದೆ ‘ಮಹಾ’ಪ್ರಸಾದ: ದ.ಕ. 6 ಹಾಗೂ ಉಡುಪಿ 27 ಕೊರೊನಾ ಪಾಸಿಟಿವ್

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು ಒಟ್ಟು 6 ಕೊರೊನಾ ಕೇಸ್ ಪತ್ತೆಯಾಗಿದೆ.ಅದರಲ್ಲಿ 61 ವರ್ಷದ ಗಂಡು, 62 ವರ್ಷದ ಹೆಣ್ಣು, 50 ವರ್ಷದ ಗಂಡು, 25 ವರ್ಷದ ಗಂಡು, 36 ವರ್ಷದ ಗಂಡು ಹಾಗೂ 18 ವರ್ಷದ ಹೆಣ್ಣಿನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಉಡುಪಿಯಲ್ಲಿಂದು ಬರೋಬ್ಬರಿ 27 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಬಹುತೇಕ ಮಹಾರಾಷ್ಟ್ರ ಲಿಂಕ್ ಇರುವುದೇ ಆಗಿದೆ.
ಇಂದು ರಾಜ್ಯದಲ್ಲಿ ಒಟ್ಟು 75 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2493ಕ್ಕೆ ಏರಿಕೆಯಾಗಿದೆ.

Leave A Reply

Your email address will not be published.