ಎಲ್ಲಾ ರೈತರಿಗೆ ತಲಾ 5 ಸಾವಿರ ರೂಪಾಯಿ ಮತ್ತು ಕ್ಷೌರಿಕರಿಗೆ ಮತ್ತು ಆಟೋ ಚಾಲಕರಿಗೆ ಹಣ ಪಡೆಯಲು ವಿಧಿಸಿದ್ದ ಷರತ್ತು ವಾಪಾಸ್- ರಾಜ್ಯ ಸರಕಾರ ನಿರ್ಧಾರ
ರಾಜ್ಯದ ಜನರಿಗೆ ಕೋವಿಡ್ ಪರಿಹಾರವಾಗಿ ಪರಿಹಾರ ನೀಡುವ ಕುರಿತು ಸರ್ಕಾರ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪರಿಹಾರ ಹಂಚಿಕೆ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ. ಎಲ್ಲ ರೈತರಿಗೆ ತಲಾ 5 ಸಾವಿರ ರೂಪಾಯಿ ಮತ್ತು ಕ್ಷೌರಿಕರಿಗೆ ಮತ್ತು ಆಟೋ ಚಾಲಕರಿಗೆ ಹಣ ಪಡೆಯಲು ವಿಧಿಸಿದ್ದ ಷರತ್ತುಗಳನ್ನು ಹಿಂಪಡೆದಿರುವುದಾಗಿ ಹೇಳಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಈ ಕುರಿತಾದ ಮಾಹಿತಿಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.
ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರ, ಗುಜರಾತ್, ಮಧ್ಯ ಪ್ರದೇಶ, ತಮಿಳುನಾಡು ಮತ್ತು ರಾಜಸ್ಥಾನದಿಂದ ಕರ್ನಾಟಕಕ್ಕೆ ಬರುವವರಿಗೆ ಇನ್ನೂ 15 ದಿನಗಳ ಕಾಲ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ರಾಜ್ಯದ ಜನರಿಗೆ ಕೋವಿಡ್ ಪರಿಹಾರವಾಗಿ ಇತ್ತೀಚೆಗೆ ಘೋಷಿಸಿದ್ದ ಅನುದಾನ ಹಂಚಿಕೆ ಕುರಿತು ಸಚಿವರು ಮಾಹಿತಿ ನೀಡಿದರು.
ಈವರೆಗೆ ಯಾರಿಗೂ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲವೆಂಬ ಆರೋಪಗಳು ಕೇಳಿಬಂದ ಹಿನ್ನೆಲೆ ಸಚಿವರು ಪ್ರತಿಕ್ರಿಯಿಸಿ, ಈ ಪರಿಹಾರ ಪಡೆಯಲು ಹೇರಿದ್ದ ನಿಯಮಗಳನ್ನು ಹಿಂಪಡೆಯಲಾಗಿದೆ ಎಂದರು.
*ಎಲ್ಲ ರೈತರಿಗೆ 5 ಸಾವಿರ ರೂಪಾಯಿ ಪರಿಹಾರ.
*ಸಲೂನ್, ಆಟೋ ಚಾಲಕರಿಗೆ ಪರಿಹಾರ ನೀಡುವುದಕ್ಕೆ ಹಾಕಿದ್ದ ಷರತ್ತುಗಳು ರದ್ದು
*ಪಿಎಸ್ಐ ನೇಮಕಾತಿಗೆ ವಯೋಮಿತಿ ಹೆಚ್ಚಳ
ಸಾಮಾನ್ಯ ವರ್ಗಕ್ಕೆ 28 ರಿಂದ 30 ವರ್ಷಎಸ್ಸಿ/ಎಸ್ಟಿಗೆ 30 ರಿಂದ 32 ವರ್ಷ ವಯೋಮಿತಿ ನಿಗದಿಮುಂದಿನ ಒಂದು ಬಾರಿಯ ನೇಮಕಾತಿಗೆ ಮಾತ್ರ ಈ ಅವಕಾಶ
* ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಔಷಧಿ ಉಗ್ರಾಣ ನಿರ್ಮಾಣಕ್ಕೆ 18 ಕೋಟಿ ರೂ
*ಅನುದಾನ ಕಾರ್ಮಿಕರ ಹೆಚ್ಚುವರಿ ಕೆಲಸದ ಅವಧಿ ಆದೇಶ ವಾಪಸ್