ಬೆಳ್ತಂಗಡಿ ಕಾಂಗ್ರೇಸ್ ಕಿಸಾನ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಮೋದ್ ಕುಮಾರ್ ರೈ

ಬೆಳ್ತಂಗಡಿ: ತಾಲೂಕಿನ ಹಿರಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಬೆಳ್ತಂಗಡಿ ತಾಲೂಕು ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ರೆಖ್ಯಾ ಪ್ರಮೋದ್ ಕುಮಾರ್ ರೈ ಅವರು ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಶ್ರೀ ಸಚ್ಚಿನ್ ಮೀಗಾ ಇವರಿಗೆ ತನ್ನ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಈ ಮೂಲಕ ಬೆಳ್ತಂಗಡಿ ಕಾಂಗ್ರೇಸಿನಲ್ಲಿ ಯಾವುದೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತು ಆಗಿದೆ. ಮನೆಯೊಂದು ಮೂರು ಬಾಗಿಲು ಎಂಬಂತೆ ಆಯ್ತೆ ಬೆಳ್ತಂಗಡಿ ಕಾಂಗ್ರೆಸ್ ಸ್ಥಿತಿ ಎಂದು ಜನರು ಮಾತಾಡುತ್ತಿದ್ದಾರೆ.

ಕಾಂಗ್ರೆಸ್ ನಲ್ಲಿ ಇನ್ನೂ ಹಲವು ಹಿರಿಯ ಮುಖಂಡರುಗಳಿಂದ ರಾಜೀನಾಮೆಗೆ ನಿರ್ಧಾರ ಆಗಿದೆ ಎನ್ನಲಾಗಿದೆ. ಈಗ ಡೋಲಾಯಮಾನ ಸ್ಥಿತಿಯಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಇದ್ದು ಇಲ್ಲಿ ಹಿರಿಯರ ಮತ್ತು ಕಿರಿಯರ ಸಮನ್ವಯತೆ ಎದ್ದು ಕಾಣುತ್ತಿದೆ. ಭುಗಿಲೆದ್ದ ಅಸಮಾಧಾನಕ್ಕೆ ಕಾರಣ ಅದು ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲವಾದದ್ದು ಎನ್ನುವ ಮಾತು ಕೇಳಿಬರುತ್ತಿದೆ.

ಅಷ್ಟೇ ಅಲ್ಲದೆ, ಶಾಸಕ ಹರೀಶ್ ಪೂಂಜರ ಜನಸ್ಪಂದನೆಯ ಕಾರ್ಯ ವೈಖರಿಗೆ ನೆಲಕಚ್ಚಿತಾ ಬೆಳ್ತಂಗಡಿ ಕಾಂಗ್ರೆಸ್ ಎನ್ನುವ ಪ್ರಶ್ನೆ ಕೂಡಾ ಕರಾವಳಿಯ ರಾಜಕೀಯದ ಅಂಗಳದಲ್ಲಿ ಇವತ್ತು ಬೆಚ್ಚ ಬೆಚ್ಚ ಚರ್ಚೆಯಾಗುತ್ತಿದೆ.

Leave A Reply

Your email address will not be published.