ದಕ್ಷಿಣ ಕನ್ನಡ ಜಿಲ್ಲಾ ಬಂಟ್ವಾಳ ತಾಲೂಕು ವಾಮದಪದವಿನ ನೂತನ ರಾಮ್ ಸೇನಾ ಛತ್ರಪತಿ ಘಟಕದ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ ಬಂಟ್ವಾಳ ತಾಲೂಕು ವಾಮದಪದವಿನ ನೂತನ ರಾಮ್ ಸೇನಾ ಛತ್ರಪತಿ ಘಟಕವು ಇಂದು ವಾಮದಪದವಿನ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಉದ್ಘಾಟನೆಗೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ರಾಮ್ ಸೇನಾ ಸಂಸ್ಥಾಪಕರಾದ ಶ್ರೀ ಪ್ರಸಾದ್ ಅತ್ತಾವರ್, ರಾಜ್ಯ ಕಾರ್ಯದರ್ಶಿ ಮಂಜುನಾಥ್ ಕುಂದರ್, ದ.ಕ ಜಿಲ್ಲಾಧ್ಯಕ್ಷರು ಕಿರಣ್ ವಿ.ಅಮೀನ್, ಜಿಲ್ಲಾ ಉಪಾಧ್ಯಕ್ಷರಾಗಿರುವ ಹರ್ಷಿತ್ ಪೂಜಾರಿ ಅಡ್ಯಾರ್ ಪದವು ಉಪಸ್ಥಿತರಿದ್ದರು.

ನೂತನ ಘಟಕದ ಗೌರವ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜಯರಾಮ್ ಶೆಟ್ಟಿ ಕಾಪು, ಗೌರವ ಸಲಹೆಗಾರರಾಗಿ ಕಮಲ್ ಶೆಟ್ಟಿ ಬೊಳ್ಳಾಜೆ, ಘಟಕ ಅಧ್ಯಕ್ಷರು ಪದ್ಮನಾಭ ಭಂಡಾರಿ, ಉಪಾಧ್ಯಕ್ಷರು ರೂಪೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಜನೀಶ್ ಬಂಟ್ವಾಳ, ಸಂಘಟನಾ ಕಾರ್ಯದರ್ಶಿ ಲಿಖಿತ್ ಶೆಟ್ಟಿ ಕುಂಡೋಳಿಗುತ್ತು, ಕಾರ್ಯದರ್ಶಿ ಅನಿಲ್ ಶೆಟ್ಟಿ ಹರ್ಕಾಡಿ, ಸಹ ಸಂಘಟನಾ ಕಾರ್ಯದರ್ಶಿ ಶುಭಕರ ಶೆಟ್ಟಿ, ಗೋರಕ್ಷಕ ಸೇನಾ ಸಂಚಾಲಕ ನಿಶಾಂತ್ ಶೆಟ್ಟಿ ಬಾರಕ್ಕಿನೆಡೆ, ಸಹಾ ಸಂಚಾಲಕ ಧರ್ಮರಾಜ್ ಶೆಟ್ಟಿ ಬುಡಂಗಬೆಟ್ಟು, ಸಾಮಾಜಿಕ ಜಾಲತಾಣ ಯಶೋದರ್ ಜೈನ್ ಉಪಸ್ಥಿತರಿದ್ದರು.

ನಾಗರಾಜ್ ಶೆಟ್ಟಿ ಕುಂಜದೊಟ್ಟು ಕಾರ್ಯಕ್ರಮ ನಿರ್ವಹಣೆ ಮಾಡಿ ಯಶಸ್ವಿಗೊಳಿಸಿದರು.

Leave A Reply

Your email address will not be published.