ನಿರಂತರವಾಗಿ ನಾಯಿ ಬೊಗಳಿತ್ತು ಅಂತ ನಾಯಿಗೆ ಗುಂಡು ಹಾರಿಸಿದ | ನಾಯಿ ಸಾಯಲಿಲ್ಲ, ಆತ ಸತ್ತ !
ಪಟನಾ : ಮನುಷ್ಯನಿಗೆ ದುರಹಂಕಾರ ಬಂದರೆ, ಅದು ಆತನನ್ನು ಯಾವೆಲ್ಲ ರೀತಿ ವರ್ತಿಸುವಂತೆ ಮಾಡಬಹುದು ಎಂಬುದಕ್ಕೆ ಮತ್ತು ಅದಕ್ಕೆ ಮನುಷ್ಯ ಹೇಗೆಲ್ಲಾ ತಾನು ಊಹಿಸದ ರೀತಿಯಲ್ಲಿ ಶಿಕ್ಷೆಗೆ ಒಳಗಾಗಬಹುದು ಅನ್ನುವುದಕ್ಕೆ ಪಾಟ್ನಾದಲ್ಲಿ ನಡೆದ ಈ ಘಟನೆಯೇ ಸಾಕ್ಷಿ.
ಆತನ ನೆರೆಮನೆಯ ನಾಯಿಯ ನಿರಂತರವಾಗಿ ಬೊಗಳುತ್ತಿತ್ತು. ನಾಯಿಯ ಬೊಗಳುವಿಕೆಯಿಂದ ತಾಳ್ಮೆ ಕಳೆದುಕೊಂಡ ಗೋಪಾಲ್ ರಾಂ ಅದನ್ನು ಕೊಲ್ಲಲು ಮೂರು ಸುತ್ತು ಗುಂಡು ಹಾರಿಸಿದ. ಆದರೆ, ನಾಯಿ ಸಾಯಲಿಲ್ಲ. ಬದಲಿಗೆ ಒಂದು ಗುಂಡು ಅಲ್ಲೇ ಇದ್ದ 10 ವರ್ಷದ ನಾಯಿಯ ಮಾಲೀಕ ವಿನೋದ್ ರಾಮ್ನ ಪುತ್ರಿ ಭೂಮಿಕಾ ಕುಮಾರಿಯ ಕೈಗೆ ತಗುಲಿತು.
ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಗುಂಡು ಹಾರಿಸಿದ ವ್ಯಕ್ತಿಯನ್ನು ಹಿಡಿದು ಮನಸೋ ಇಚ್ಛೆ ಥಳಿಸಿದರು. ಆಗ ಗಂಭೀರವಾಗಿ ಗಾಯಗೊಂಡ ವಿನೋದ್ ರಾಮ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಿಹಾರದ ರೊಹಟಾಸ್ ಜಿಲ್ಲೆಯ ಬೇಲದಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಈ ಬಗ್ಗೆ ದರಿಹಾತ್ ಪೊಲೀಸ್ ಠಾಣೆಯಲ್ಲಿ ಎರಡೆರಡು ಪ್ರತ್ಯೇಕ ದೂರು ದಾಖಲಾಗಿದೆ. ಪೊಲೀಸರಿಗೆ ಹೇಳಿಕೆ ನೀಡಿರುವ ವಿನೋದ್ ರಾಮ್, ಆತನ ಪುತ್ರಿಯ ಮೇಲೆ ಗುಂಡಿನ ದಾಳಿ ನಡೆಸಿದ ಎಂಬ ಕಾರಣಕ್ಕಾಗಿ ಗ್ರಾಮಸ್ಥರು ಗೋಪಾಲ್ ರಾಮ್ನನ್ನು ಥಳಿಸಿದರು. ಕೊಲ್ಲುವ ಉದ್ದೇಶ ಇರಲಿಲ್ಲ. ಆದರೆ, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟ ಎಂದಿದ್ದಾರೆ. ಮತ್ತೊಂದು ಎಫ್ಐಆರ್ನಲ್ಲಿ ಸಾರ್ವಜನಿಕವಾಗಿ ಗುಂಡಿನ ದಾಳಿ ನಡೆಸಿದ ಗೋಪಾಲ್ ರಾಮ್ ಸಾರ್ವಜನಿಕರ ಜೀವವನ್ನು ಅಪಾಯಕ್ಕೆ ಒಡ್ಡಿರುವ ಕಾರಣದಿಂದ ಆರೋಪಿಸಲಾಗಿದೆ.
ನಾಯಿ ಬೊಗಳಿದರೆ, ಸಣ್ಣ ಕಲ್ಲಲ್ಲಿ ಆಗುವ ಕೆಲಸವನ್ನು ಗುಂಡಿನಿಂದ ಬಗೆಹರಿಸಲು ಹೋದ ದುರಹಂಕಾರಿ, ಸ್ವತಃ ಬೇರೊಂದು ರೀತಿಯಲ್ಲಿ ಬಲಿಯಾದದ್ದು ದುರಂತ ಹೌದು, ಪಾಠವೂ ದಿಟ.