ಪೋಷಕರಿಲ್ಲದೆ ಏಕಾಂಗಿ ವಿಮಾನ ಪ್ರಯಾಣ ಮಾಡಿ ದೆಹಲಿಯಿಂದ ಬೆಂಗಳೂರಿಗೆ ಬಂದ 5 ವರ್ಷದ ಬಾಲಕ

Share the Article

ಬೆಂಗಳೂರು : ದೆಹಲಿಯಿಂದ ಬೆಂಗಳೂರಿಗೆ ನಿನ್ನೆ ಬಂದ ಮೊದಲ ವಿಮಾನದಲ್ಲಿ ಐದು ವರ್ಷದ ಬಾಲಕ ಏಕಾಂಗಿಯಾಗಿ, ಕುಟುಂಬಸ್ಥರ ಸಹಾಯವಿಲ್ಲದೆ ಪ್ರಯಾಣ ಮಾಡಿ ಬೆಂಗಳೂರಿನಲ್ಲಿರುವ ತನ್ನ ಅಮ್ಮನನ್ನು ಸೇರಿದ್ದಾನೆ.

ಸಾಮಾನ್ಯವಾಗಿ ಮೈನರ್ ಗಳಿಗೆ ಏಕಾಂಗಿ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಆದರೆ, ಈ ಕೋರೋನಾದ ವಿಶೇಷ ಸಂದರ್ಭದಲ್ಲಿ, ಐದು ವರ್ಷದ ವಿವಾಂತ್ ಶರ್ಮಾ ಏಕಾಂಗಿಯಾಗಿ ಪ್ರಯಾಣ ಮಾಡುವ ಅವಕಾಶ ಸಿಕ್ಕಿದೆ. ಬಹುಶಃ ವಿಮಾನದಲ್ಲಿ ಅಧಿಕೃತವಾಗಿ ಪ್ರಯಾಣಿಸಿದ ಮೊದಲ ಕಿರಿಯ ಪ್ರಯಾಣಿಕ ಈತನೇ ಅಂತ ಅನ್ನಿಸುತ್ತಿದೆ.

ವಿವಾಂತ್ ಶರ್ಮಾ ಈ ತನಕ ತನ್ನ ಅಜ್ಜಿ ಮನೆ ದೆಹಲಿಯಲ್ಲಿ ಇದ್ದು, ಲಾಕ್‍ಡೌನ್ ಆಗುವುದಕ್ಕೂ ಮುನ್ನವೇ ವಿವಾಂತ್ ದೆಹಲಿಗೆ ಹೋಗಿದ್ದ. ನಂತರ ಕೊರೊನಾ ಲಾಕ್‍ಡೌನ್ ಆಗಿ ಸುಮಾರು ಮೂರು ತಿಂಗಳು ಅಲ್ಲಿಯೇ ಉಳಿದಿದ್ದ.

ಇಂದು ಮೊದಲ ಬಾರಿಗೆ ದೆಹಲಿಯಿಂದ ಪ್ರಯಾಣಕರನ್ನು ಹೊತ್ತು ವಿಮಾನ ಬೆಂಗಳೂರಿಗೆ ಬಂದಿದ್ದು, ಇದರಲ್ಲಿ ವಿವಾಂತ್ ಕೂಡ ಇತರ ಪ್ರಯಾಣಿಕರ ಜೊತೆ ಒಬ್ಬನೇ ಬಂದಿದ್ದಾನೆ.

Leave A Reply

Your email address will not be published.