ಪುತ್ತೂರು | ಗ್ಯಾಸ್ ಸಿಲಿಂಡರ್ ಸಾಗಾಟ ಲಾರಿಯ ಮೇಲೆ ಉರುಳಿದ ಮರ,ವಿದ್ಯುತ್ ಕಂಬಗಳು ಧರೆಗೆ
ಪುತ್ತೂರು : ಪುತ್ತೂರು ತಾಲೂಕಿನ ಬೆದ್ರಾಳ ನರಿಮೊಗರು ಮುಂತಾದ ಸ್ಥಳಗಳಲ್ಲಿ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದೆ. ಹೆಚ್ಚಿನ ಕಡೆ ವಿದ್ಯುತ್ ಕಂಬಗಳು ಧರೆಗುರುಳಿವೆ.
ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬೆದ್ರಾಳದಲ್ಲಿ ಲಾರಿ ಮೇಲೆ ಮರವೊಂದು ಬಿದ್ದು ಲಾರಿ ಪೂರ್ಣ ಜಖಂ ಗೊಂಡಿದೆ.
ಅಡುಗೆ ಅನಿಲ ಹೇರಿ ಕೊಂಡು ಹೋಗುತ್ತಿದ್ದ ಲಾರಿಯ ಮೇಲೆ ಬೆದ್ರಾಳ ಸಮೀಪ ಮರ ಬಿದ್ದಿದೆ. ಘಟನೆಯಿಂದ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ರಸ್ತೆಯುದ್ದಕ್ಕೂ ಹಲವು ವಿದ್ಯುತ್ ಕಂಬಗಳು ಉರುಳಿಬಿದ್ದಿದೆ.
ಅಲ್ಲದೆ ಹಲವೆಡೆ ಮನೆಯ ಹಂಚು, ಶೀಟ್ ಗಳು ಹಾರಿ ಹೋಗಿದೆ. ಅಡಿಕೆ, ತೆಂಗಿನ ಮರ ಸಹಿತ ಕೃಷಿ ಗಾಳಿಯ ಹೊಡೆತಕ್ಕೆ ಧರಶಾಹಿಯಾಗಿದೆ.
ಇದರಿಂದಾಗಿ ತಾಲೂಕಿನಾದ್ಯಂತ ವಿದ್ಯುತ್ ಸ್ಥಗಿತವಾಗಿದೆ.