ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬಗಳಿಗೆ ಶಾಸಕ ಹರೀಶ್ ಪೂಂಜಾ ಅವರಿಂದ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ : ಈ ಶತಮಾನದ ಮಹಾ ಪೀಡೆ ಥರ ಅಲ್ಲಿನ ಕುಟುಂಬಗಳನ್ನು ಕಾಡುತ್ತಿರುವ ಎಂಡೋಸಲ್ಫಾನ್ ಎಂಬ ಮಹಾಮಾರಿಗೆ  ಕುಟುಂಬಗಳು ಇಡುತ್ತಿರುವ ಕಣ್ಣೀರಿಗೆ ಕೊನೆಮೊದಲಿಲ್ಲ.
ಇಂತಹ ಕುಟುಂಬಗಳನ್ನು ಭೇಟಿಯಾಗಿ ಬೆಳ್ತಂಗಡಿಯ ಶಾಸಕ ಶ್ರೀ ಹರೀಶ್ ಪೂಂಜಾ ಅವರು ಆಹಾರವನ್ನು ವಿತರಿಸಿದರು. ಆರ್ಥಿಕವಾಗಿ ಮತ್ತು ಆರೋಗ್ಯದ ಸಮಸ್ಯೆಯಿಂದ ಜರ್ಜರಿತವಾದ ಕುಟುಂಬಗಳು ಈಗ ಕೋರೋನಾ ಲಾಕ್​​ಡೌನ್​ನಿಂದಾಗಿ ಕೆಲಸವಿಲ್ಲದೆ ತುಂಬ ಸಂಕಷ್ಟದಲ್ಲಿರುವುದನ್ನು ಶಾಸಕರು ಮನಗಂಡರು.

ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಹತ್ಯಡ್ಕ, ನಿಡ್ಲೆ, ಪಟ್ರಮೆ, ರೆಖ್ಯಾ ಗ್ರಾಮಗಳ ಸುಮಾರು 100 ಎಂಡೋಸಲ್ಫಾನ್ ಪೀಡಿತ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್​ಗಳನ್ನು ವಿತರಿಸಿದರು.

Leave A Reply

Your email address will not be published.