ಮೇ 7ರಂದು ವಿಮಾನ ಹಾರಾಟ: ಭಾರತೀಯರು ಮರಳಿ ಗೂಡಿಗೆ

ಕೇಂದ್ರ ಸರ್ಕಾರವು ವಿದೇಶದಲ್ಲಿರುವ ಭಾರತೀಯರನ್ನು ಈಗಾಗಲೇ ಸುರಕ್ಷಿತವಾಗಿ ಕರೆ ತರುವ ಸಿದ್ಧತೆ ಮಾಡಿದ್ದು, ಮೇ 7ರಿಂದ 13ರವರೆಗೆ ಮೊದಲ ಹಂತದ ಏರ್ ಲಿಪ್ಟ್. ಈ ಹಂತದಲ್ಲಿ 14300 ಭಾರತೀಯರು ವಾಪಾಸಾಗಲಿದ್ದಾರೆ. 64 ವಿಮಾನಗಳು ವಿದೇಶಕ್ಕೆ ತೆರಳಲಿದೆ. ಮೊದಲ ದಿನ 2300 ಭಾರತೀಯರು ಬರಲಿದ್ದಾರೆ. 2ನೇ ದಿನ 2050,ಮೂರನೇ ದಿನ 2050 ಭಾರತೀಯರು ಸ್ವದೇಶಕ್ಕೆ ತಲುಪಲಿದ್ದಾರೆ..ಹೀಗೆ ಹಂತ ಹಂತವಾಗಿ ಭಾರತೀಯರು ಆಗಮಿಸಲಿದ್ದಾರೆ .ಆದರೆ ನಿಯಮದ ಪ್ರಕಾರ ಕ್ವಾರಂಟೈನ್ ಸಿದ್ಧವಾಗಿದ್ದು ಕ್ವಾರಂಟೈನ್ ಕಡ್ಡಾಯವಾಗಿದೆ.

ತಾಯ್ನಾಡಿಗೆ ಮರಳಲು ನಿಯಮಗಳು ಏನೇನು?

1.ತಾಯ್ನಾಡಿಗೆ ಕರೆ ತರಲು ವಿಮಾನ ಹಾಗೂ ನೌಕಾ ಹಡಗುಗಳ ಸಿದ್ಧತೆಯಾಗಿದ್ದು.,ಇದಕ್ಕೆ ತಗಲುವ ವೆಚ್ಚಗಳನ್ನು ಪ್ರಯಾಣಿಕರೇ ಭರಿಸಬೇಕು.
2.ಪ್ರಯಾಣಿಕರ ವೈದ್ಯಕೀಯ ತಪಾಸಣೆ ವೇಳೆ ಕೊರೋನ ವೈರಸ್ ಯಾವುದೇ ಲಕ್ಷಣ ಕಂಡುಬರದೇ ಇದ್ದರೆ ಮಾತ್ರ ಆಗಮನಕ್ಕೆ ಅವಕಾಶ
3.ಆರೋಗ್ಯ ಸಚಿವಾಲಯ ಮತ್ತು ವಿಮಾನಯಾನದ ಮಾರ್ಗಸೂಚಿಗಳನ್ನು ಪಾಲಿಸಬೇಕು.
4.ಭಾರತಕ್ಕೆ ಬರುವ ಮುನ್ನ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು.
5.ಭಾರತಕ್ಕೆ ತಲುಪಿದ ತಕ್ಷಣ ಆರೋಗ್ಯಸೇತು ಅಪ್ಲಿಕೇಷನ್ ನಲ್ಲಿ ಹೆಸರು ನೋಂದಾಯಿಸಬೇಕು.
6.ಪ್ರತಿ ಪ್ರಯಾಣಿಕನೂ ಸ್ಕ್ರೀನಿಂಗ್ ಗೆ ಒಳಗಾಗಬೇಕು.
7.14 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯವಾಗಿದೆ.
8.14 ದಿನದ ಕ್ವಾರಂಟೈನ್ ನಂತರ ಕೋವಿಡ್-19 ಪರೀಕ್ಷೆ ಒಳಗಾಗುವುದು.
ಈ ಅಷ್ಟ ಮಾರ್ಗಸೂಚಿಯನ್ನು ಅನುಸರಿಸಿ ಭಾರತೀಯರು ಭಾರತಕ್ಕೆ ವಾಪಾಸಾಗಲಿದ್ದಾರೆ.

Leave A Reply

Your email address will not be published.