ಮದ್ಯದ ಮಲ್ಲರಿಗೆ ಮಹಾ ರಿಲೀಫ್ | ಮೇ 4 ರಿಂದ ‘ ಗ್ರೀನ್ ‘ ಲೇಬಲ್ ದೊರೆಯುತ್ತದೆ !

ಪಿಡ್ಕ್ ಇಲ್ಲದೆ ಚಡಪಡಿಸುತ್ತಿದ್ದ ಮದ್ಯದ ಮಲ್ಲರಿಗೆ ಇವತ್ತು ಬಹುದೊಡ್ಡ ದಿನ ! ಸರಕಾರ ಮದ್ಯ ಮಾರಾಟ ಅವಕಾಶ ಕಲ್ಪಿಸುತ್ತಿದ್ದಂತೆ ಮದ್ಯಪ್ರಿಯರ ಮುಖದಲ್ಲಿ ಕಿರುನಗೆ. ಗಂಟಲು ಒಣಗಿಸಿಕೊಂಡು, ಮುಖ ಸಪ್ಪೆ ಮಾಡಿಕೊಂಡು ಓಡಾಡುತ್ತಿದ್ದ ಮಂದಿಯ ಮುಖದಲ್ಲಿ ಮತ್ತೆ ಮೂಡಿದೆ ಮನೋಹರ ಮಂದಹಾಸ !

ಆದರೆ ದಕ್ಷಿಣ ಕನ್ನಡಕ್ಕೆ ಈ ಭಾಗ್ಯವಿಲ್ಲ(!). ದಕ್ಷಿಣ ಕನ್ನಡ ಆರೆಂಜ್ ಝೋನ್ ಗೆ ಬರುವ ಕಾರಣ ಇಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ.

ಮದ್ಯ ಮಾರಾಟವಿಲ್ಲದೆ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಮಟ್ಟದ ಹೊಡೆತವಾಗಿತ್ತು. ಮದ್ಯವಿಲ್ಲದೆ ತುಂಬಾ ದಿನ ಸರಕಾರದ ಖರ್ಚುವೆಚ್ಚಗಳನ್ನು ತೂಗಿಸುವುದು ಕಷ್ಟದ ಕೆಲಸ ಎಂದು ಅರಿತ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಅಲ್ಲದೇ ಬಾರ್ ಮಾಲೀಕರು ಮತ್ತು ಹಲವು ಸಚಿವರುಗಳು ಶಾಸಕರುಗಳು ಮದ್ಯದಂಗಡಿ ತೆರೆಯಲು ಒತ್ತಾಯಿಸಿದ್ದರು. ಮಧ್ಯ ಪ್ರಿಯರಂತೂ ಮೊದಲ ದಿನದಿಂದಲೇ ಒತ್ತಾಯಿಸುತ್ತಲೇ ಇದ್ದಾರೆ.

ನಿಯಮಗಳು

  • ಗ್ರೀನ್ ಝೋನ್ ನಲ್ಲಿ ಮಾತ್ರ ಅವಕಾಶ
  • ಏಕ ಕಾಲಕ್ಕೆ ಐದು ಜನಕ್ಕೆ ಮಾತ್ರ ಅನುಮತಿ
  • ಪಾರ್ಸೆಲ್ ಮಾತ್ರ. ಅಲ್ಲಿಯೇ ಕುಡಿಯುವಂತಿಲ್ಲ
  • ಮದ್ಯ ಕೊಳ್ಳುವಾಗ ಆರು ಅಡಿ ದೂರದಲ್ಲಿ ನಿಲ್ಲಬೇಕು
  • ಹಸಿರು ವಲಯದಲ್ಲಿ ಪಾನ್ ಶಾಪಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

2 Comments
  1. escape roomy lista says

    Great post and right to the point. I am not sure if this is in fact the best place to ask but do you folks have any thoughts on where to
    hire some professional writers? Thx 🙂 Escape roomy lista

  2. SantoO says

    Really fantastic info can be found on website.?

Leave A Reply

Your email address will not be published.