ಶ್ರಮಿಕ – ಹರೀಶ್ ಪೂಂಜಾ ಅವರ 30K ಆಹಾರ ಯಜ್ಞಕ್ಕೆ ಕ್ಷಣಗಣನೆ !

ಆಹಾರ ಯಜ್ಞಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಲವು ದಿನಗಳ ಪ್ರಯತ್ನ, ಸಾವಿರಾರು ಶ್ರಮಿಕರ ಶ್ರಮ ಮತ್ತು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ರ ಮುತುವರ್ಜಿಯಿಂದ ಕೈಗೊಂಡ ಆಹಾರ ಯಜ್ಞವೊಂದು ಸಾಕಾರಗೊಳ್ಳುವ ಕ್ಷಣ ಸನ್ನಿಹಿತ.

ತಾಲೂಕಿನ ನೂರಲ್ಲ, ಸಾವಿರವಲ್ಲ, ಬರೋಬ್ಬರಿ 30,000 ಮನೆಗಳಿಗೆ ಆಹಾರದ ಕಿಟ್ ದೊರೆಯಲಿದೆ. ಬೆಳ್ತಂಗಡಿ ತಾಲೂಕಿನಲ್ಲಿರುವ ಒಟ್ಟು ಇರುವ 46,000 ರಷ್ಟು ಮನೆಗಳಲ್ಲಿ 30,000 ಮನೆಗಳಿಗೆ ಈ ಆಹಾರದ ಕಿಟ್ ಗಳು ತಲುಪಲಿವೆ. ಅಂದರೆ 65% ನಷ್ಟು ತಾಲೂಕನ್ನು ಇದೊಂದೇ ಕಾರ್ಯಕ್ರಮ ತಲುಪಲಿದೆ !
ಅಂದರೆ, ಹೆಚ್ಚು ಕಮ್ಮಿ ಕ್ಷೇತ್ರದ ಮುಕ್ಕಾಲು ಭಾಗದಷ್ಟು ಜನರು ಸಹಾಯವನ್ನು ಪಡೆದುಕೊಳ್ಳಲಿದ್ದಾರೆ ಎನ್ನುವುದು ಇಲ್ಲಿನ ಹೆಚ್ಚುಗಾರಿಕೆ.

ಕೊರೊನಾ ಹಿನ್ನಲೆ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಬೆಳ್ತಂಗಡಿ ತಾಲೂಕಿನ ರಾಜಕೀಯ, ಧರ್ಮ ರಹಿತವಾಗಿ ಜನರಿಗೆ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಶಾಸಕ ಹರೀಶ್ ಪೂಂಜ ಇವರ ತಂಡ ನೆರವೇರಿಸಲಿದೆ.

ಬೆಳ್ತಂಗಡಿ ತಾಲೂಕಿನ 241 ಬೂತ್​ಗೆ ತಲಾ 100 ಕಿಟ್​ಗಳನ್ನು ನೀಡಲಾಗುತ್ತಿದ್ದು, ಸಂಕಷ್ಟದಲ್ಲಿರುವವರಿಗೆ ವಿತರಿಸಲಾಗುವುದು.
ಶಾಸಕರ ‘ ಶ್ರಮಿಕ ನೆರವು ‘ ಇದರ ವತಿಯಿಂದ ವಿತರಿಸಲು ಆಹಾರದ ಕಿಟ್ ತಯಾರಿಕೆಯ ಕಾರ್ಯವು ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಸಭಾ ಭವನದಲ್ಲಿ ಉದ್ಯಮಿಗಳಾದ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಹಾಗೂ ರಾಜೇಶ್ ಪೈ ಸಂದ್ಯಾ ಟ್ರೇಡರ್ಸ್ ಇವರ ಉಸ್ತುವಾರಿಯಲ್ಲಿ ನಡೆಯುತ್ತಿದೆ. ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರ ಸಹಕಾರದಲ್ಲಿ ಕಿಟ್ ತಯಾರಿಯ ಕೆಲಸ ದೊಡ್ಡಮಟ್ಟದಲ್ಲಿ ತುಂಬಾ ಅಚ್ಚುಕಟ್ಟಾಗಿ ನಡೆಯುತ್ತಿದೆ.

ವಿತರಣಾ ಕಾರ್ಯಕ್ರಮಕ್ಕೆ ಚಾಲನೆ

ನಾಳೆ, ಏಪ್ರಿಲ್ ತಿಂಗಳ 23 ರ ಗುರುವಾರ ಬೆಳಿಗ್ಗೆ 7 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಉಸ್ತುವಾರಿ ಸಚಿವ ಕೋಟ, ಶ್ರೀನಿವಾಸ ಪೂಜಾರಿ, ಅರ್ ಎಸ್ ಎಸ್ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ ಎಸ್, ಮಂಗಳೂರು ವಿಭಾಗ ಕಾರ್ಯವಾಹ, ನಾ. ಸೀತಾರಾಮ್, ಬಿ ಜೆ.ಪಿ ಜಿಲ್ಲಾಧ್ಯಕ್ಷ ಸುದರ್ಶನ್, ಶರತ್ ಕೃಷ್ಣ ಪಡುವೆಟ್ನಾಯ ಮುಂತಾದವರ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಶ್ರಮಿಕರ ಯುವಕರ ತಂಡ ಮನೆ ಮನೆಗೆ ಆಹಾರದ ಕಿಟ್ ಅನ್ನು ವಿತರಿಸಲಿದ್ದಾರೆ.

Leave A Reply

Your email address will not be published.