ಆಶಾ ಕಾರ್ಯಕರ್ತೆಯರ ಸೇವೆ ಸ್ಮರಿಸಿ ಸನ್ಮಾನ

ಇದೀಗ ಆಶಾ ಕಾರ್ಯಕರ್ತೆಯರ ಇಷ್ಟು ದಿನದ ತಾಳ್ಮೆಯ ಸದ್ದಿಲ್ಲದೆ ಕೆಲಸಕ್ಕೆ ಗೌರವ ದೊರೆಯುತ್ತಿದೆ.

ವಿಶ್ವವನ್ನೇ ತಲ್ಲಣಿಸಿದ ಕೋವಿಡ್-19 ನಿವಾರಣೆಗಾಗಿ ‘ಫ್ರಂಟ್ ಲೈನ್ ನಲ್ಲಿ’ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ ಬನ್ನೂರು ಗ್ರಾಮದ (ನಗರಸಭೆ) ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು.

ಶ್ರೀಮತಿ ಶಶಿಕಲಾ, ಶ್ರೀಮತಿ ಸುಜಾತ, ಶ್ರೀಮತಿ ಸರಸ್ವತಿ ಅವರ ಮನೆಗೆ ‌ಸ್ಥಳೀಯ ನಗರಸಭಾ ಸದಸ್ಯರು ಹಾಗೂ ಬಿಜೆಪಿ ವಾರ್ಡ್ ಸಮಿತಿಯ ಪದಾಧಿಕಾರಿಗಳು ಬೇಟಿ ನೀಡಿ ಆಶಾ ಕಾರ್ಯಕರ್ತೆಯರ ಕೆಲಸವನ್ನು ಶ್ಲಾಘಿಸಿ ಗೌರವಾರ್ಪಣೆ ಸಲ್ಲಿಸಿದರು.

Leave A Reply

Your email address will not be published.