ಉಳುಕಿದ ಕಾಲಿನಿಂದಲೇ ಕ್ಷೇತ್ರ ಸುತ್ತಿ ಜನಸ್ಪಂದನೆ | ಕರ್ತವ್ಯ ಪ್ರಜ್ಞೆ ಮೆರೆದ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ರೆಕ್ಯ ಗ್ರಾಮದಲ್ಲಿ, ಗ್ರಾಮ ಸಮಿತಿಯ ಸಭೆಯಲ್ಲಿ ಭಾಗವಹಿಸಿ ವಾಪಸ್ಸು ಬರುವಾಗ ಮೆಟ್ಟಲೊಂದರಲ್ಲಿ ಎಡವಿ ಬಿದ್ದಿದ್ದರು.

ಘಟನೆ ಮೇ 16 ರಂದು ನಡೆದಿದ್ದು, ಅವರ ಎಡಗಾಲು ಅಡಿ ಮಗುಚಿಕೊಂಡು ಜೋರಾಗಿ ಉಳಿಕಿದ್ದು, ಡಾಕ್ಟರರು ಕಡ್ಡಾಯ ನಾಲ್ಕು ದಿನಗಳ ವಿಶ್ರಾಂತಿಗೆ ಸೂಚಿಸಿದ್ದರು. ಆದರೆ ಹರೀಶ್ ಪೂಂಜಾ ಅವರು ಆ ನಂತರ ಕೂಡಾ ವಿಶ್ರಾಂತಿ ಪಡೆಯದೆ ಎಂದಿನಂತೆ ಬಿಡುವಿಲ್ಲದ ಜನ ಸ್ಪಂದನೆಯಲ್ಲಿ ನಿರತರಾಗಿದ್ದಾರೆ. ಕುಂಟುತ್ತಲೇ ಬೆಳ್ತಂಗಡಿ ಯಾದ್ಯಂತ ಸುತ್ತುತ್ತಿದ್ದಾರೆ.

ನಿನ್ನೆ ಚಾರ್ಮಾಡಿ ಘಾಟಿಯ ಹೇರ್ ಪಿನ್ ತಿರುವುಗಳಲ್ಲಿ ತಿರುಗಾಡಿ ಅಲ್ಲಿನ ಮಂಗಗಳ ಹಿಂಡಿಗೆ ಆಹಾರ ತಿನ್ನಿಸಿ, ದಿನವೂ ಅವುಗಳಿಗೆ ಆಹಾರ ಸರಬರಾಜು ಮಾಡುವ ವ್ಯವಸ್ಥೆ ಮಾಡಿ ಬಂದಿದ್ದರು.

ಶಾಸಕ ಪೂಂಜಾ ಅವರ ಆಪ್ತರು ಕೂಡ ವಿಶ್ರಾಂತಿಗೆ ಸಲಹೆ ನೀಡಿದ್ದರೂ ಹರೀಶ್ ಅವರು ಮಾತ್ರ ಸದಾ ಬ್ಯುಸಿ.

Comments are closed.