ಜಮೀರ್ ಅಹಮದ್ ಕ್ಷೇತ್ರ ಪಾದರಾಯನಪುರದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಕಿತ್ತು ಹಾಕಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ
ಬೆಂಗಳೂರು : ಬೆಂಗಳೂರಿನ ಪಾದರಾಯನಪುರ ಕೊರೋನಾ ಹಾಟ್ ಸ್ಪಾಟ್ ಆಗಿದ್ದು ಸೀಲ್ ಡೌನ್ ಮಾಡಲಾಗಿತ್ತು. ಅಲ್ಲಿನ ನೂರಕ್ಕೂ ಮಿಕ್ಕಿದ ಜನರ ದೊಡ್ಡ ಗುಂಪೊಂದು ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿ ರಸ್ತೆಗಿಳಿದು ಸಿಕ್ಕ ಸಿಕ್ಕಿದ್ದನ್ನೆಲ್ಲಾ ಹೊಡೆದು ದಾಂಧಲೆ ನಡೆಸಿದ್ದಾರೆ.
ಪಾದರಾಯನಪುರದ 58 ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಹೋದ ಸಿಬ್ಬಂದಿ ಹೋಗಿದ್ದರು. ಆ ವೇಳೆ ಕ್ವಾರಂಟೈನ್ ಆಗಲು ತಯಾರಿಲ್ಲದ ಜನರು ದಾಂಧಲೆ ಎಬ್ಬಿಸಿದ್ದಾರೆ.
ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಕ್ಷೇತ್ರದ ಶಾಸಕ ಜಮೀರ್ ಅಹಮದ್ ಬರುವಂತೆ ಒತ್ತಾಯ ಮಾಡಿದ್ದಾರೆ. ನೂರಾರು ಮಂದಿ ಬೀದಿಗಿಳಿದು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಟೆಂಟ್ ಗಳನ್ನು ಧ್ವಂಸಗೊಳಿಸಿದ್ದಾರೆ.
ಕರ್ತವ್ಯ ನಿರತ ಪೊಲೀಸರು ಕಡಿಮೆ ಸಂಖ್ಯೆಯಲ್ಲಿ ದ್ದರು. ಪೊಲೀಸರೂ ಕೆಲಕಾಲ ಅಸಹಾಯಕರಾಗಿ ಇರಬೇಕಾಯಿತು. ಏಕಾಏಕಿ ವಾಹನಗಳ ಸಮೇತ ಬಂದ ದೊಡ್ಡ ಗುಂಪು ಕಟ್ಟಿಕೊಂಡು ಬಂದ ಉದ್ರಿಕ್ತ ಜನರನ್ನು ನೋಡಿ ಕಡಿಮೆ ಸಂಖ್ಯೆಯಲ್ಲಿರುವ ಪೊಲೀಸರು ಅನ್ಯ ಮಾರ್ಗವಿಲ್ಲದೆ ಅಲ್ಲಿಂದ ಕಾಲ್ಕಿಳಬೇಕಾಯಿತು.
ಹೀಗೆ ವಾಹನ ಕಟ್ಟಿಕೊಂಡು ತಂಡೋಪತಂಡವಾಗಿ ಜನರು ಬಂದ ಕಾರಣ ಇದರ ಹಿಂದೆ ಒಂದು ನಾಯಕತ್ವ ಇರುವುದನ್ನು ಪೊಲೀಸರು ಗಮನಿಸಿದ್ದಾರೆ. ಇರ್ಫಾನ್ ಎಂಬ ಸ್ಥಳೀಯ ಪುಡಾರಿ ಮತ್ತು ಪುಂಡ ಒಬ್ಬನು ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾನೆ. ಅಲ್ಲದೆ ಫಿರೋಜಾ ಎಂಬ ಗಾಂಜಾ ಮಾರುವ ಹೆಂಗಸು ಕೂಡಾ ಭಾಗಿಯಾಗಿದ್ದಾಳೆ. ಆಕೆಯನ್ನು ಬಂಧಿಸಲಾಗಿದೆ. ಇರ್ಫಾನ್ ತಲೆಮರೆಸಿಕೊಂಡಿದ್ದು ಪೊಲೀಸರು ಅವನಿಗಾಗಿ ಹುಡುಕಾಟ ನಡೆಸಿದ್ದಾರೆ.
ಅಲ್ಲದೆ ಕ್ವಾರಂಟೈನ್ ಆಗಬೇಕಾಗಿದ್ದ ಎಲ್ಲಾ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ 54 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರ ಹುಡುಕಾಟ ಸಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದ್ರ ಮುಖರ್ಜಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.10 ಕೆ ಎಸ್ ಆರ್ ಪೀ ತುಕಡಿ ನಿಯೋಜನೆ ಆಗಿದೆ. ಇನ್ನೂರಕ್ಕೂ ಮಿಕ್ಕಿ ಪೊಲೀಸ್ ರಾಪಿಡ್ ಆಕ್ಷನ್ ಫೋರ್ಸ್ ಅನ್ನು ನಿಯೋಜಿಸಲಾಗಿದೆ. ದುಷ್ಕರ್ಮಿಗಳ ಮೇಲೆ ನಾಲ್ಕು ಸುಮೋಟೋ ಕೇಸು, ಮತ್ತೊಂದು FIR ಆಗಿದೆ.