ಪಾದರಾಯನಪುರ ಘಟನೆ | ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತೆ- ನಳಿನ್ ಕುಮಾರ್

ಮಂಗಳೂರು: ಬೆಂಗಳೂರಿನ ಪಾದರಾಯನಪುರದಲ್ಲಿ ಸೀಲ್ ಡೌನ್,ಬ್ಯಾರಿಕೇಡ್ ದ್ವಂಸ ಗೊಳಿಸಿ ಕರ್ತವ್ಯ‌ನಿರತ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬಂದಿಗಳಿಗೆ ಹಲ್ಲೆ ಮಾಡಿದ ಘಟನೆಗೆ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ವೈರಸ್ ಗೆ ಜಾತಿ, ಮತ ಇಲ್ಲ. ಕೋವಿಡ್19 ನಿಯಂತ್ರಣಕ್ಕಾಗಿ ದೇಶದಲ್ಲಿ ದಿಟ್ಟ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಡುವೆ ಪಾದರಾಯನಪುರದಲ್ಲಿ ಆಗಿದ್ದು ರಾಷ್ಟ್ರ ವಿರೋಧಿ ಕೃತ್ಯ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕೊರೊನಾ ಭೀತಿಯ ಕರಿಛಾಯೆಯ ನಡುವೆಯೇ ಇಂತಹ ಘಟನೆ ನಡೆದಿರುವುದು ಖಂಡನಾರ್ಹ.

ತಪ್ಪಿತಸ್ಥರನ್ನು ಬಂಧಿಸಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ನನ್ನ ಒತ್ತಾಯ,ಜನತೆ ಸರಕಾರದ ಜತೆ ಸಹಕರಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

Leave A Reply

Your email address will not be published.