ಹಿಂದೂ ಯುವಕರ ಹಾಗೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಆಗ್ರಹ | ವಿಶ್ವ ಹಿಂದೂ ಪರಿಷತ್ ಪ್ರಮುಖ ಶರಣ್ ಪಂಪ್ ವೆಲ್

ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಸುಖಾಸುಮ್ಮನೆ ದೂರು ದಾಖಲಿಸುತ್ತಿರುವುದನ್ನು ಕಂಡ ವಿಶ್ವ ಹಿಂದೂ ಪರಿಷತ್ ಪ್ರಮುಖ ಶರಣ್ ಪಂಪ್ ವೆಲ್ ಅವರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಇವತ್ತು ಈ ದೇಶದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಯಾವುದೇ ಪ್ರಚಾರವನ್ನು ಬಯಸದೆ ನಿರಂತರವಾಗಿ ಈ ಕೊರೋನ ಮಹಾಮಾರಿ ವಿರುದ್ದ ಕೆಲಸ ಮಾಡುತ್ತಾ ಅಶಕ್ತರಿಗೆ ಸಹಾಯ ಹಸ್ತ ನೀಡುತ್ತಾ ತಮ್ಮ ತಮ್ಮ ಕಾರ್ಯದಲ್ಲಿ  ನಿರತರಾಗಿದ್ದಾರೆ.

ನಮಗೆ ಯಾವುದೇ ಪ್ರಚಾರದ ಅಗತ್ಯ ಇಲ್ಲ ಹಾಗೂ
ಇನ್ನೊಬ್ಬರ ಬಗ್ಗೆ ಅಪಪ್ರಚಾರ ಮಾಡುವ ಅಗತ್ಯವೂ ಇಲ್ಲ.
ಆದರೆ ಹಿಂದೂ ಸಂಘಟನೆಯ ಕಾರ್ಯಕರ್ತರು ಈ ದೇಶದಲ್ಲಿ ಇವತ್ತು ಕೊರೋನದ ವಿರುದ್ಧ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು, ವೈದ್ಯರು, ಪೊಲೀಸ್ ಇಲಾಖೆ ಪರವಾಗಿ ನಿಂತಿದ್ದಾರೆ ಹಾಗೂ ಅವರಿಗೆ ಯಾವ ಸಂದರ್ಭದಲ್ಲಿ ಕೂಡ ಸಹಾಯ ಮಾಡಲು ಸಿದ್ಧರಿದ್ದಾರೆ.

ಇಂಥ ಕಾರ್ಯಕ್ಕೆ ನೀಡುತ್ತಿರುವ ಬೆಂಬಲವನ್ನು ಮುರಿಯಲು ಪಿತೂರಿ ನಡೆಸಿ ಎಲ್ಲಾ ಕಡೆಗಳಲ್ಲಿ ಮತೀಯವಾದಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿರುವ ಸಂದೇಶ ಗಳಿಗೆ ಪೊಲೀಸ್ ಠಾಣೆಗಳಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಸುಖಾಸುಮ್ಮನೆ ದೂರು ದಾಖಲಿಸುತ್ತಿರುವುದನ್ನು ಗಮನಿಸುತ್ತಿದ್ದೇನೆ,ದಯವಿಟ್ಟು ಪೊಲೀಸ್ ಇಲಾಖೆಗಳಲ್ಲಿ ವಿನಂತಿ ಮಾಡುತ್ತಿದ್ದೇವೆ.

ಯಾವುದೇ ನಮ್ಮ ಹಿಂದೂ ಸಂಘಟನೆಯ ಕಾರ್ಯಕರ್ತರು ನಮಗೆ ದೇಶ  ಮೊದಲು, ಜನ್ಮಭೂಮಿ ಈ ತಾಯಿ ನೆಲ ಮೊದಲು ಎಂದು ಕೆಲಸ ಮಾಡುತ್ತಿರುವ ಸಂದರ್ಭ ತಮ್ಮ ನೋವುಗಳನ್ನು, ಭಾವನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಬಿಟ್ಟರೆ ಬೇರೆ ಯಾವುದೇ ಮತೀಯ ದೃಷ್ಟಿಯನ್ನು ಇಟ್ಟುಕೊಂಡು ಕೆಲಸ ಮಾಡಿಲ್ಲ.

ಯಾವುದೇ ಉದ್ದೇಶಪೂರ್ವಕವಾಗಿರುವಂತಹ ಇಂತಹ ದೂರುಗಳಿಗೆ ಅವಕಾಶ ನೀಡದಂತೆ  ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಆಗ್ರಹ ಮಾಡುತ್ತಿದ್ದೇನೆ.

ಶರಣ್ ಪಂಪ್ ವೆಲ್,
ವಿಭಾಗ ಕಾರ್ಯದರ್ಶಿ,
ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ.

Leave A Reply

Your email address will not be published.