ಸುಳ್ಯದ ಅಜ್ಜಾವರದ ವಾಸದ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ

ಅಜ್ಜಾವರ ಗ್ರಾಮ ದೊಡ್ಡೇರಿ ಮನೆ ಸರೋಜಿನಿ ಎಂಬವರ  ವಾಸದ ಮನೆಗೆ ಏಪ್ರಿಲ್ 7 ರಂದು ರಾತ್ರಿ ಆಕಸ್ಮಿಕ ಬೆಂಕಿ ತಗುಲಿದೆ. 

ಆಕಸ್ಮಿಕ ಬೆಂಕಿಯಿಂದ ಮನೆಯ ಹಿಂಭಾಗ ಭಾಗಶಃ ಬೆಂಕಿಗೆ ಜಖಂ ಗೊಂಡಿರುತ್ತದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಸರೋಜಿನಿ ಮತ್ತು ಪತಿ ಹಾಗೂ ಇಬ್ಬರು ಮಕ್ಕಳು ಇದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ವಿಷಯ ತಿಳಿದ ಸುಳ್ಯ ತಹಸಿಲ್ದಾರ್ ಅನಂತ ಶಂಕರ್, ಸುಳ್ಯ ತಾಲೂಕು ಕಂದಾಯ ನಿರೀಕ್ಷಕರಾದ ಬಿ ಕೊರಗಪ್ಪ ಹೆಗ್ಡೆ, ಅಜ್ಜಾವರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಶರತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.

ಈ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪದ ಅಡಿಯಲ್ಲಿ ಕಡತಗಳ ಪರಿಶೀಲನೆ ನಡೆಸಿ ಸಹಾಯಧನ ತರಿಸುವಲ್ಲಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆಯನ್ನು ನೀಡಿರುತ್ತಾರೆ.
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆ ವತಿಯಿಂದ ಸಂತ್ರಸ್ತರಿಗೆ 50 ಕೆಜಿ ಅಕ್ಕಿಯನ್ನು ವಿತರಿಸಲಾಗಿದೆ ಎಂದು ತಿಳಿದುಬಂದಿದೆ.

ವರದಿ – ಹಸೈನಾರ್ ಜಯನಗರ

Leave A Reply

Your email address will not be published.