ಬೆಳ್ತಂಗಡಿ | ಸ್ನಾನಗೃಹಕ್ಕೆ ಬೆಂಕಿ | ಮಹಿಳೆಗೆ ಗಾಯ

ಬೆಳ್ತಂಗಡಿಯ ಜೈನ್ ಪೇಟೆಯ ಬಂಟರ ಭವನದ ಹಿಂಭಾಗದಲ್ಲಿರುವ ಕೃಷ್ಣಪ್ಪ ಮೂಲ್ಯ ಅವರ ಮನೆಯ ಒಂದು ಪಾರ್ಶ್ವದಲ್ಲಿ ಇರುವ ಸ್ನಾನಗೃಹಕ್ಕೆ ಬೆಂಕಿ ಬಿದ್ದು ಮನೆಯೊಡತಿಯ ಕೈಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.

ಮೊನ್ನೆ ಏಪ್ರಿಲ್ 7ರಂದು ಬಿಸಿನೀರಿಗೆಂದು ಬೆಂಕಿ ಹಾಕಿದ್ದರು. ಬಿಸಿನೀರು ಕಾಯಿಸುವ ಒಲೆಯ ಪಕ್ಕದಲ್ಲೇ ತೆಂಗಿನ ಮಡಲು ಮತ್ತಿತರ ಉರುವರು ವಸ್ತುಗಳನ್ನು ಜೋಡಿಸಿಟ್ಟಿದ್ದರು. ಒಲೆಯಿಂದ ಹೊರಬಂದ ಬೆಂಕಿ, ಈ ಉರುವಳುಗಳಿಗೆ ತಗುಲಿ ಸ್ನಾನದ ಮನೆಯ ಮಾಡಿಗೆ ವ್ಯಾಪಿಸಿದೆ.

ಬೆಂಕಿ ತಗುಲಿದ ಸುದ್ದಿ ಕೇಳಿ ಬಂದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಪಂಚಾಯತ್ ಸದಸ್ಯ ಜಯಾನಂದ ಗೌಡ ಮತ್ತು ಗ್ರಾಮ ಕರಣಿಕ ನಾರಾಯಣ ಕುಲಾಲ್ ಅವರು ಆಗಮಿಸಿ ನಷ್ಟದ ಅಂದಾಜು ಮಾಡಿದ್ದಾರೆ.

Leave A Reply

Your email address will not be published.