ಧರ್ಮಸ್ಥಳದ ಗ್ರಾಮ ಪಂಚಾಯತ್ ಸದಸ್ಯ ಸೇರಿ ಒಟ್ಟು ಐದು ಜನ ಹಿಂದೂ ನಾಯಕರುಗಳ ಮೇಲೆ ಕೇಸು !

ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಕಾರಣದಿಂದ ಐದು ಜನ ಹಿಂದೂ ನಾಯಕರ ಮೇಲೆ ಧರ್ಮಸ್ಥಳ, ಬೆಳ್ತಂಗಡಿ ಪುಂಜಾಲಕಟ್ಟೆ ಮತ್ತು ವೇಣೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಧರ್ಮಸ್ಥಳದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸೇರಿ ಇಬ್ಬರ ಮೇಲೆ, ಬೆಳ್ತಂಗಡಿ ಪುಂಜಾಲಕಟ್ಟೆ ಮತ್ತು ವೇಣೂರು ಠಾಣೆಗಳಲ್ಲಿ ತಲಾ ಒಬ್ಬ ಮೇಲೆ ಕೇಸು ಬಿದ್ದಿವೆ.


Ad Widget

ಇದರ ಬಗ್ಗೆ ಕಾನೂನು ತನ್ನದೇ ಆದ ಕೆಲಸಗಳನ್ನು ಮಾಡಲಿದೆ. ಇವತ್ತಿನ ಪ್ರಶ್ನೆ ಅದಲ್ಲ. ನಾವಿವತ್ತು ಇಲ್ಲಿ ಹೇಳುತ್ತಿರುವುದು ಇಂತಹಾ ಘಟನೆ ನಡೆಯಲು ಕಾರಣವಾದ ಹಿನ್ನೆಲೆಯ ಬಗ್ಗೆ.

Ad Widget

Ad Widget

Ad Widget

ಮೊನ್ನೆ ಮುಖ್ಯಮಂತ್ರಿ ಯಡಿಯರಪ್ಪನವರು ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ ಸಂದರ್ಭ, ಮುಸ್ಲಿಂ ಸಮುದಾಯದ ಮೇಲೆ ಆಪಾದನೆ ಮಾಡಿದರೆ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಹಾಗೆ ಹೇಳಿ ಎರಡೇ ದಿನಕ್ಕೆ ಹಿಂದೂಗಳ ಮೇಲೆ ಒಂದರ ಮೇಲೊಂದು ಕೇಸುಗಳು ಬೀಳುತ್ತಿವೆ.

ರಾಜ್ಯದಲ್ಲಿ ಮತ್ತು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ಯ ಸತ್ತು ಮಲಗಿದೆಯಾ ಎಂದು ಜನರು ಕೇಳುವಂತಾಗಿದೆ. ಮುಸ್ಲಿಂ ಸಮುದಾಯದ ಸಣ್ಣ ಮನಸ್ಸಿನ ವ್ಯಕ್ತಿಗಳು ಹೀಗೆ ಸಣ್ಣಪುಟ್ಟ ಸಂಗತಿಗಳಿಗೂ ಪದೇ ಪದೇ ಪೊಲೀಸ್ ಠಾಣೆಗಳಿಗೆ ಎಡ ತಾಕುತ್ತಿರುವುದು ಹಿಂದೂ ಸಂಘಟನೆಗಳ ಬಲ ಕುಗ್ಗಿಸಲು ಎಂದು ಹೇಳಲಾಗುತ್ತಿದೆ.

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಬಂದಾಗ ನಮ್ಮ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮ, ಬ್ರಹ್ಮಕಲಶೋತ್ಸವ, ಪೂಜೆ ಮುಂತಾದ ಎಲ್ಲವನ್ನೂ ಎಲ್ಲರಿಗಿಂತ ಮೊದಲು ಬಿಟ್ಟುಕೊಟ್ಟು ದೇಶದ ಜನರ ಸ್ವಾಸ್ಥ್ಯಕ್ಕಾಗಿ ನಿಯತ್ತಿನಿಂದ ಪ್ರಧಾನಿಯ ನಿರ್ಧಾರಕ್ಕೆ ತಲೆ ಬಗ್ಗಿ ನಿಂತದ್ದು ನಾವು ಹಿಂದೂಗಳು. ನಾವು ಕಾನೂನು ಉಲ್ಲಂಘಿಸಿ ತಬ್ಲಿಘಿಗಳ ಥರ, ಸರಕಾರದ ಕಣ್ಣು ತಪ್ಪಿಸಿ ಸಾವಿರಾರು ಜನರು ವಾರಗಟ್ಟಲೆ ಸಭೆ ನಡೆಸಲಿಲ್ಲ. ನಾವು ನರ್ಸುಗಳು ಮೇಲೆ ಉಗಿಯಲಿಲ್ಲ. ನಾವು ಆಶಾ ಕಾರ್ಯಕರ್ತರ ಮೇಲೆ ಹಲ್ಲೆಗಳನ್ನು ಮಾಡಲಿಲ್ಲ. ವೈದ್ಯರುಗಳನ್ನು ನಾವು ನಿಂದಿಸಲಿಲ್ಲ. ಅಸಭ್ಯ ಅರೆಬೆತ್ತಲೆಯಾಗಿ ನಾವು ಓಡಾಡಲಿಲ್ಲ. ಬಹುಶ: ಅದೇ ನಾವು ಮಾಡಿರುವ ತಪ್ಪೇನೋ ? ಹಾಗೆಂದು ನೋವಿನಿಂದ ಹೇಳುತ್ತಿದ್ದಾರೆ ಹಿಂದೂ ಸಮುದಾಯದ ಹಲವು ಹುಡುಗರು.

” ಹಿಂದೂ ಯುವಕರ ಮೇಲೆ ಕೇಸು ಕೂಡದು” – ಪುತ್ತೂರು ಶಾಸಕ ಸಂಜೀವ ಮಠಂದೂರು

ಇವತ್ತು ಬೆಳಿಗ್ಗೆ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ದೆಹಲಿಯ ನಿಜಾಮುದ್ದೀನ್ ಘಟನೆ ನಡೆದ ಕಾರಣದಿಂದ, ಕೋರೋನಾ ಸೋಂಕು ಹರಡುವ ಸನ್ನಿವೇಶದಲ್ಲಿ ದೇಶವ್ಯಾಪಿಯಾಗಿ ಬಿಸಿ ಬಿಸಿ ಚರ್ಚೆಗಳಾಗಿವೆ. ಅವು ಸೋಶಿಯಲ್ ಮೀಡಿಯಾದಲ್ಲಿ ಬಂದಾಗ ಯುವಕರು ಅದಕ್ಕೆ ಸ್ಪಂದಿಸುವ ಸಂದರ್ಭದಲ್ಲಿ  ಪೊಲೀಸು ಇಲಾಖೆ ಕೇಸುಗಳನ್ನು ಹಾಕುವುದು ಕಂಡುಬಂದಿದೆ. ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದ್ದು ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ವಿನಹಾ ಯಾವುದೇ ಮತೀಯ ಸಂಘಟನೆಗಳನ್ನು ಬೆಂಬಲಿಸಲು ಅಲ್ಲ. ಅದನ್ನು ಪೊಲೀಸರು ಅರ್ಥಮಾಡಿಕೊಳ್ಳಬೇಕು. ಭಿನ್ನಾಭಿಪ್ರಾಯಗಳು ಮೂಡಿದರೆ ಆಗ ಯುವಕರನ್ನು ಸೇರಿಸಿ ಮಾತನಾಡಿ ಬುದ್ಧಿವಾದ ಹೇಳಿ ಕಳಿಸಬೇಕು ಎಂದು ಹೇಳಿದರು.

-ಪುತ್ತೂರು ಶಾಸಕ ಸಂಜೀವ ಮಠಂದೂರು

ಮುಖ್ಯಮಂತ್ರಿ ಯಡಿಯೂರಪ್ಪನವರ ಹೇಳಿಕೆ ಒಂದು ಕಡೆ, ಮತ್ತೊಂದು ಕಡೆ ಸಾಲು ಸಾಲು ಕೇಸುಗಳು ಹಿಂದೂ ನಾಯಕರುಗಳ ಮೇಲೆ ಬೀಳುತ್ತಿರುವುದು ಮತ್ತಷ್ಟು ಬಿಸಿಬಿಸಿ ಚರ್ಚೆಗೆ ದಾರಿ ಮಾಡಿಕೊಟ್ಟಿವೆ. ಸಣ್ಣಪುಟ್ಟ ಹೇಳಿಕೆಗಳನ್ನೆ ಕೋಮು ಪ್ರಚೋದನಕಾರಿ ಎಂದು ನಿರ್ಧರಿಸಿ ಪೊಲೀಸರು ಕೇಸು ದಾಖಲಿಸಿ ಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ.

error: Content is protected !!
Scroll to Top
%d bloggers like this: