ಲಾಕ್‌ಡೌನ್ ನಡುವೆಯೇ ಮನೆಯಲ್ಲೇ ದನದ ಮಾಂಸ ದಂಧೆ ! ಮನೆಯೇ ಕಸಾಯಿಖಾನೆ !

ದೇಶವೆಲ್ಲಾ ಕೋರೋನಾ ಸಂಕಷ್ಟದಲ್ಲಿ ಬೆಂದು ಹೋಗುತ್ತಿದೆ. ಎಲ್ಲರು ನಿಯತ್ತಾಗಿ ಲಾಕ್ ಡೌನ್ ಪಾಲಿಸುತ್ತಿದ್ದಾರೆ. ಆದರೆ ಇವರು ಮನೆಯಲ್ಲಿ ದನದ ಮಾಂಸ ಕಡಿಯುತ್ತಿದ್ದಾರೆ. ಇವರು ಮನುಷ್ಯರಾಗಿರೋದಿಕ್ಕೆ ಲಾಯಕ್ಕಿಲ್ಲ. ಇವರಿಗೆ ಸಪರೇಟ್ ಕಾನೂನು ಏನಾದರೂ ಉಂಟಾ ? ಇವತ್ತು ಈ ದನ ಕಡಿಯುವ ವ್ಯಕ್ತಿಗಳು ಎಷ್ಟು ಜನರನ್ನು ಕಾನೂನು ಉಲ್ಲಂಘಿಸಿ ಗುಂಪುಗೂಡಿ ಕೋರೋನಾ ಸೋಂಕು ಹರಡಲು ಕಾರಣ ಆಗಿರಬಹುದು ? ಯಾರ ಬಳಿ ಅದರ ಲೆಕ್ಕ ಇದೆ ? ಯಡಿಯೂರಪ್ಪನವರೇ, ಈಗ ಹೇಳಿ. ಕಾನೂನನ್ನು ಉಲ್ಲಂಘಿಸುವವರು ಯಾರು? ಕರ್ನಾಟಕದಲ್ಲಿ ಮತ್ತೊಂದು ನಿಜಾಮುದ್ದಿನ್ ತರಹದ ಸೋಂಕು ಹರಡುವಿಕೆ ಆಗಬೇಕಾ?

ಬಂಟ್ವಾಳ : ಬಂಟ್ವಾಳ ತಾಲೂಕಿನ ಮಾರ್ನಬೈಲು ಸಮೀಪ ಕಾರಾಜೆ ಎಂಬಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಕಸಾಯಿಖಾನೆಯನ್ನೆ ಸ್ಥಾಪಿಸಿದ್ದರು ಈ ಖದೀಮರು. ಅಲ್ಲಿಗೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣೆ ಎಸ್‌ಐ ಅವಿನಾಶ್‌ ಮತ್ತು ತಂಡ, ಮಾಂಸ ಸಹಿತ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿಯ ವೇಳೆ ಅಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಸುಮಾರು 40 ಕೆಜಿ ಮಾಂಸ, ನಾಲ್ಕು ಬೈಕ್‌, ಒಂದು ಕಾರು ಹಾಗೂ ರಿಕ್ಷಾವನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಮನೆಯೊಂದರಲ್ಲಿ ದನಗಳನ್ನು ತಂದಿಟ್ಟು ಮಾಂಸ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂಟ್ವಾಳ ಪೋಲೀಸರಿಗೆ ಸಿಕ್ಕಿತ್ತು. ಇಂದು ಬುಧವಾರ ಪೊಲೀಸರು ದಾಳಿ ನಡೆಸಿದಾಗ ಮನೆಯ ಶೆಡ್‌ನಲ್ಲಿ ಅಕ್ರಮವಾಗಿ ತಂದ ಗೋವುಗಳನ್ನು ಅನುಮತಿ ರಹಿತವಾಗಿ ಕಡಿದು ಮಾಂಸ ಮಾಡಲಾಗುತ್ತಿತ್ತು. ಈ ಸಂದರ್ಭ ಮಾಂಸ ಕಡಿಯುತ್ತಿದ್ದ ಆರೋಪಿಗಳು ಕಾಲ್ಕಿತ್ತಿದ್ದಾರೆ. 

ಬಂಟ್ವಾಳ ಡಿವೈಎಸ್ಪಿ ವೆಲಂಟೈನ್‌ ಡಿಸೋಜ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್‌ ಸಲಹೆಯಂತೆ ಬಂಟ್ವಾಳ ನಗರ ಪೊಲೀಸ್‌ ಠಾಣೆ ಎಸ್‌ಐ ಅವಿನಾಶ್‌, ಅಪರಾಧ ವಿಭಾಗದ ಎಸ್‌ಐ ಸಂತೋಷ್‌ ಬಿ.ಪಿ. ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ. 

ಕೋರೋನಾ  ಲಾಕ್ ಡೌನ್ ವೇಳೆ ಅಕ್ರಮ ಕಸಾಯಿಕಾನೆ ನಡೆಸುವವರನ್ನು ಶೀಘ್ರವಾಗಿ ಬಂಧಿಸಿ ಅವರ  ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಒತ್ತಾಯ ಮಾಡಿದೆ.

Leave A Reply

Your email address will not be published.