ದಕ್ಷಿಣ ಕನ್ನಡ ಪೊಲೀಸರ ವಿನೂತನ ಕಾರ್ಯಕ್ರಮ | ಜಿಲ್ಲೆಯ ಎಲ್ಲಾ 37,579 ವಯೋವೃದ್ಧರ ಮತ್ತು ಒಬ್ಬಂಟಿಯಾಗಿ ವಾಸಿಸುವ ಮಹಿಳೆಯರ ಬಗ್ಗೆ ಕಾಳಜಿ
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಮ್ಮ ಎಂದಿನ ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯೆಯೂ ವಿನೂತನ ಕಾರ್ಯವೊoದಕ್ಕೆ ಕೈ ಹಾಕಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಮತ್ತು ಒಬ್ಬಂಟಿಯಾಗಿ ವಾಸಿಸುತ್ತಿರುವ ಮಹಿಳೆಯರ ಸಂಪರ್ಕವನ್ನು ಸಾಧಿಸಿ ಅವರಿಗೆ ಕೊರೋನಾ ರೋಗದ ಕುರಿತಾದ ಮಾಹಿತಿ ಮಾರ್ಗದರ್ಶನವನ್ನು ನೀಡುವ ಯೋಜನೆ ದಕ್ಷಿಣಕನ್ನಡ ಪೊಲೀಸರದ್ದು.
ಅದರ ಜೊತೆಗೆ ಅವರ ಕುಂದುಕೊರತೆಗಳನ್ನು ಆಲಿಸಿ ಅವರ ಬೇಕು ಬೇಡಗಳನ್ನು ಈಡೇರಿಸುವ ನಿಟ್ಟಿನಲ್ಲಿಯೂ ಈ ಸರ್ವೆ ಸಹಾಯಕಾರಿ.
ದಕ್ಷಿಣ ಕನ್ನಡದಲ್ಲಿ ಒಟ್ಟು 37579 ವಯೋವೃದ್ಧರೂ, 268 ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರು ಇದ್ದಾರೆ. ಈಗಾಗಲೇ ಒಬ್ಬಂಟಿಯಾಗಿ ವಾಸಿಸುತ್ತಿರುವ ಈ ತನಕ ಎಲ್ಲಾ 268 ಒಂಟಿ ಮಹಿಳೆಯರನ್ನೂ ಮಾತನಾಡಿಸಿಯಾಗಿದೆ.
ಇಲ್ಲಿಯತನಕ 3571 ವೃದ್ಧರನ್ನು ಸಂಪರ್ಕಿಸಿದ್ದು, ಉಳಿದವರನ್ನು ಸಂಪರ್ಕಿಸುವ ಕಾರ್ಯ ಪ್ರಗತಿಯಲ್ಲಿದೆ. ಹಾಗೆ ಸಂಪರ್ಕಿಸುವ ಸಂದರ್ಭದಲ್ಲಿ ಏನಾದರೂ ಕುಂದು ಕೊರತೆ ಉಂಟಾದರೆ ಅದನ್ನು ತಕ್ಷಣಕ್ಕೆ ಸರಿಪಡಿಸುವತ್ತಲೂ ಗಮನಹರಿಸಲಾಗುತ್ತದೆ.
ದ.ಕ ಪೊಲೀಸರ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ಕೇಳಿಬಂದಿದೆ.