ಮಂಜುನಾಥನಗರ | ಯುವಕ ಮಂಡಲ, ಸ್ವಸಹಾಯ ಸಂಘದಿಂದ ಅಶಕ್ತರಿಗೆ ನೆರವು

0 11

ಕಡಬ: ಕರೋನಾ ಭೀತಿಯಿಂದ ಲಾಕ್‌ಡೌನ್ ಆಗಿರುವುದರಿಂದ ಕೂಲಿ ಮಾಡಿ ಜೀವನ ನಡೆಸುವ ಬಡ ಜನರ ಸಮಸ್ಯೆಯನ್ನು ‌ಮನಗಂಡು ಅರ್ಹ (ಪಡಿತರ ಚೀಟಿ) ಹೊಂದಿರದ 19 ಮನೆಗಳನ್ನು ಗುರುತಿಸಿ ಪಾಲ್ತಾಡಿ ಗ್ರಾಮದ ವಿವೇಕಾನಂದ ಯುವಕ‌ ಮಂಡಲ ಮಂಜುನಾಥನಗರ ಹಾಗೂ ಶ್ರೀ ಸ್ಕಂದ ಸ್ವಸಹಾಯ ಸಂಘದ ವತಿಯಿಂದ ಆಹಾರ ಸಾಮಾಗ್ರಿಗಳ ಒಂದು‌ ಕಿಟ್ ನ್ನು ನೀಡಲಾಯಿತು.

ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಬಿ.ಕೆ. ,ಮಾಜಿ ಸದಸ್ಯ ಸುಧೀರ್ ಕುಮಾರ್ ರೈ ಕುಂಜಾಡಿ,ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ರೈ ಬೈಲಾಡಿ,ಕಾರ್ಯದರ್ಶಿ ಉದಯ ಬಿ.ಆರ್,ಸದಸ್ಯರಾದ ಸತ್ಯ ಪ್ರಕಾಶ್,ತಾರೇಶ್,ಸಂತೋಷ್,ಹರೀಶ್ ರೈ,ಅಶೋಕ್ ರಕ್ಷಿತ್ ,ಗ್ರಾಮ ಸಹಾಯಕ ಬಾಬು ಬಿ. ಮೊದಲಾದವರಿದ್ದರು.

ಪಡಿತರ ವಿತರಣೆಗೆ ಅಂತರ ಕಾಯ್ದುಕೊಳ್ಳಲು ಸಹಾಯ

ವಿವೇಕಾನಂದ ಯುವಕ ಮಂಡಲದ ಸದಸ್ಯರು ಮಂಜುನಾಥನಗರ ಪಡಿತರ ವಿತರಣೆ ಕೇಂದ್ರದಲ್ಲಿ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಿದರು.

Leave A Reply