ಸುಳ್ಯದ ಅಜ್ಜಾವರದ ವ್ಯಕ್ತಿಯ ಸಂಪರ್ಕದಲ್ಲಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ, ಪಿಡಿಓ ಸಹಿತ 44 ಜನರಿಗೆ ಹೋಂ ಕ್ವಾರಂಟೈನ್

ಸುಳ್ಯದ ಅಜ್ಜಾವರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನಲೆಯಲ್ಲಿ ಒಟ್ಟು 44 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಆತನ ಮನೆಯವರ ಸಂಪರ್ಕದಲ್ಲಿದ್ದರೆಂಬ ಕಾರಣಕ್ಕೆ ಗ್ರಾ.ಪಂ. ಅಧ್ಯಕ್ಷೆ, ಪಿ.ಡಿ.ಒ. ಸಹಿತ ಒಟ್ಟು 44 ಮಂದಿಯನ್ನು ಹೋಂ ಕ್ವಾರಂಟೈನ್ ಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸೋಂಕಿತ ವ್ಯಕ್ತಿಯ ಸಹೋದರ ಪಂಚಾಯತ್ ನಲ್ಲಿ ನಡೆದ ಕೊರೊನಾ ರಕ್ಷಣಾ ಕಾರ್ಯಪಡೆಯ ಮೀಟಿಂಗ್ ನಲ್ಲಿ ಭಾಗವಹಿಸಿದ್ದರು. ಆದ್ದರಿಂದ ಸೆಕೆಂಡರಿ ಕಾಂಟಾಕ್ಟ್ ಆಗಿರುವ, ಆ ಸಭೆಯಲ್ಲಿ ಭಾಗವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ, ಪಿ.ಡಿ.ಒ., ಇತರ ಸದಸ್ಯರು ಸೇರಿ ಒಟ್ಟು 44 ಮಂದಿಯನ್ನು ಕ್ವಾರೆಂಟೇನ್ ನಲ್ಲಿ ಇಡಲು ನಿರ್ಧರಿಸಲಾಗಿದೆ.

ಅವರು ಭಾಗವಹಿಸಿದ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷೆ ಮತ್ತು ಪಿಡಿಓ ಹಾಗೂ ಸದಸ್ಯರು ಸಹಿತ, ಒಟ್ಟು 44 ಮಂದಿ ಸೆಕೆಂಡರಿ ಸಂಪರ್ಕದಲ್ಲಿದ್ದ ಕಾರಣ ಹಾಗೂ ಸಭೆಯಲ್ಲಿ ಅವರು ಸಹಿ ಹಾಕಲು ಬಳಸಿದ ಪೆನ್ ಮತ್ತು ಪುಸ್ತಕಗಳು ಪರಸ್ಪರ ವಿನಿಮಯ ವಾದ ಹಿನ್ನೆಲೆಯಲ್ಲಿ ಎಲ್ಲರನ್ನೂ ಮುಂಜಾಗ್ರತಾ ವಾಗಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಹಿನ್ನೆಲೆ : ಮಾ. 17 ರಂದು ದುಬೈಯಿಂದ ಬಂದಿದ್ದ ಅಜ್ಜಾವರ ಗ್ರಾಮದ ಯುವಕನಿಗೂ ಕೊರೋನಾ ಸೋಂಕು ದೃಢವಾಗಿತ್ತು. ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿದ್ದ ಅಜ್ಜಾವರದ ಈ ವ್ಯಕ್ತಿಯನ್ನೂ ನಂತರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

Leave A Reply

Your email address will not be published.