ಸಂಪಾಜೆ ಸೊಸೈಟಿ ವತಿಯಿಂದ ಮನೆ ಮನೆಗೆ ಪಡಿತರ ಅಕ್ಕಿ ವಿತರಣೆ

ಸುಳ್ಯ : ಕೋರೋನಾ ವೈರಸ್ ಹಿನ್ನೆಲೆಯಲ್ಲಿ ಸಂಪಾಜೆ ಸೊಸೈಟಿ ವತಿಯಿಂದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರ ನೇತೃತ್ವದಲ್ಲಿ ಸಂಪಾಜೆ ಕಲ್ಲುಗುಂಡಿ ಮುಂತಾದ ಕಡೆಗಳಲ್ಲಿ ಪಡಿತರ ಅಕ್ಕಿಯನ್ನು ಮನೆ ಮನೆಗೆ ವಿತರಿಸುವ ಕಾರ್ಯಕ್ರಮವು ಎ. 4 ರಂದು ನಡೆಯಿತು.

ಸೊಸೈಟಿ ಗೆ ಬಂದು ತೆಗೆದುಕೊಂಡು ಹೋಗುವ ಬದಲು ಮನೆಗೇ ತಲುಪಿಸುತ್ತಿದ್ದಾರೆ. ಜನರು ಸೊಸೈಟಿಗೆ ಬಂದರೆ ಅಲ್ಲಿ ಮತ್ತೆ ಜನಸಂದಣಿ ಆಗುವುದನ್ನು ತಡೆಯಲು ಈ ಈ ರೀತಿ ಮನೆಗೆ ತಲುಪಿಸುತ್ತಿರುವುದು.

ಈ ಸಂದರ್ಭದಲ್ಲಿ ಸಂಪಾಜೆ ಸೊಸೈಟಿಯ ನಿರ್ದೇಶಕರಾದ ಜಗದೀಶ್ವರ ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ನಾಗೇಶ್ ಮತ್ತು ಷಣ್ಮುಖ, ಎಲ್ಲಾ ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.