ಕೊರೋನಾ ಹಬ್ಬುವ ಪ್ರಕ್ಷುಬ್ಧ ಕಾಲದಲ್ಲೂ ಅನಗತ್ಯ ಕಾನೂನು | ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತಿಗೂ ಇಲ್ಲ ಬೆಲೆ

ಸುಳ್ಯ : ಅರಂಬೂರು ಎಂಬಲ್ಲಿ ಪಡಿತರ ಅಕ್ಕಿಗಾಗಿ ಸರತಿ ಸಾಲಿನಲ್ಲಿ ನಿಂತಿರವೇಕಾದ ಜನರು ಬಿಸಿಲಿನ ತಾಪಕ್ಕೆ ಸುಸ್ತಾಗಿ ಸ್ಥಳೀಯ ಅಂಗಡಿಯ ನೆರಳನ್ನು ಆಶ್ರಯವಾಗಿ ಪಡೆದು ನಿಂತಿರುವ ಘಟನೆ ಕಂಡು ಬಂದಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸೊಸೈಟಿಯ ವತಿಯಿಂದ ಮಾರ್ಕುಗಳನ್ನು ಮಾಡಿದ್ದರು. ಆ ಮಾರ್ಕ್ ಮಾಡಿರುವ ಸ್ಥಳಗಳಲ್ಲಿ ತಮ್ಮ ತಮ್ಮ ಚೀಲಗಳನ್ನು ಇರಿಸಿ ತಾವುಗಳು ಗುಂಪಾಗಿ ನಿಂತಿರುವ ದೃಶ್ಯ ಕಂಡು ಬರುತ್ತಿತ್ತು. ಇಲ್ಲಿ ಮಾರ್ಕುಗಳು ಕೇವಲ ಬುಕ್ಕಿಂಗ್ ಬಾಕ್ಸ್ ಗಳಷ್ಟೇ ಆಗಿವೆ. ಅಲ್ಲಿ ಜನರು ತಮ್ಮ ಚೀಲ ಇಟ್ಟು ಸೈಡ್ ಗೆ ಹೋಗಿ ನೆರಳಿನ ಆಶ್ರಯ ಪಡೆದು ಹತ್ತಿರ ಹತ್ತಿರ ನಿಂತು ಮಾತಾಡಿಕೊಳ್ಳುತ್ತಿದ್ದಾರೆ.


Ad Widget

ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಜನಪ್ರತಿನಿಧಿಗಳು ಬಡವರ ಬಗ್ಗೆ ಎಷ್ಟೇ ಕಾಳಜಿಯ ಮಾತುಗಳನ್ನು ಆಡಿದರೂ ಸರಿಯಾದ ರೀತಿಯಲ್ಲಿ ಜಾರಿಗೆ ತರುವಲ್ಲಿ ವಿಫಲವಾಗಿರುವುದಕ್ಕೆ ಈ ಒಂದು ದೃಶ್ಯ ಸಾಕ್ಷಿಯಾಗಿದೆ. ಪಡಿತರ ಹಂಚಿಕೆಯ ವಿಷಯದಲ್ಲಿ ಓಟಿಪಿ ಬಗ್ಗೆ ಹಲವಾರು ಗೊಂದಲಗಳು ಉಂಟಾಗಿದ್ದು ಸಾರ್ವಜನಿಕರಿಗೆ ತಲೆನೋವಾಗಿ ಮಾರ್ಪಟ್ಟಿದೆ.

Ad Widget

Ad Widget

Ad Widget

ಒಂದು ಕಡೆಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಓಟಿಪಿ ಅವಶ್ಯಕತೆ ಇಲ್ಲ, ತಂಬಿನ ಅವಶ್ಯಕತೆ ಇಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಂದುವರೆಯಿರಿ. ಜನಸಾಮಾನ್ಯರು ಗಂಟೆಗಟ್ಟಲೆ ಕಾಯುವ ಮತ್ತು ಗುಂಪು ಗೂಡುವುದು ಬೇಡ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅಗತ್ಯ ಎನ್ನುತ್ತಾರೆ. ಪಡಿತರ ಚೀಟಿಯ ಸಂಖ್ಯೆಯನ್ನು ನಮೂದಿಸಿ ಜನರನ್ನು ಗುಂಪು ಗುಂಪಾಗಿ ಸೇರುವುದನ್ನು ತಡೆಗಟ್ಟಿ ಅತಿ ಶೀಘ್ರದಲ್ಲಿ ಪಡಿತರ ಅಕ್ಕಿಯನ್ನು ವಿತರಣೆ ಮಾಡಿ ಮನೆಗೆ ಕಳುಹಿಸಿಕೊಡಬೇಕೆಂದು ಹೇಳಿದ್ದರು.

ಆದರೆ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಸಚಿವರ ಮಾತನ್ನು ಪಾಲಿಸಿದರೆ ಇನ್ನೂ ಕೆಲವೆಡೆ ಸಚಿವರ ಮಾತಿಗೆ ಕಿಂಚಿತ್ತು ಬೆಲೆ ಇಲ್ಲದ ರೀತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವರ್ತಿಸುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಆರೋಗ್ಯ ಹಿತ ಮುಖ್ಯ. ಜನರೇ ಇಲ್ಲದೆ ಹೋದರೆ ಮುಂದೆ ತಂಬ್ ಒತ್ತೋರು ಯಾರೂ ? ಇವತ್ತಿನ ಅಗತ್ಯ ಕೋರೋನಾ ವಿರುದ್ದದ ಹೋರಾಟ. ಅನವಶ್ಯಕ ಕಾನೂನು ಮತ್ತು ಪಾಲಿಸಿಗಳು ಈ ಸಮಯದಲ್ಲಿ ಬೇಡ. ಇದು ಜನರ ಇವತ್ತಿನ ಬೇಡಿಕೆ.

error: Content is protected !!
Scroll to Top
%d bloggers like this: