ಮಂಗಳೂರಿನ ಪ್ರಕಾಶ್ ಶೆಟ್ಟಿ ಬಂಜಾರ ಅವರಿಂದ ಆಹಾರ ಸಾಮಾಗ್ರಿ ಮತ್ತು ಕೆಎಂಎಫ್ ವತಿಯಿಂದ ಹಾಲು | ವಿತರಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು

ಏಪ್ರಿಲ್ 4 : ಕೋರೋ ನಾ (ಕೋವಿಡ್-19) ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಲಾಕ್ ಡೌನ್ ಇದರಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಆಹಾರ ವಸ್ತುಗಳು ದೊರೆಯದೆ ಕಷ್ಟಪಡಬಾರದು ಎನ್ನುವ ಉದ್ಧೇಶದಿಂದ ಮಂಗಳೂರಿನ ಪ್ರಕಾಶ್ ಶೆಟ್ಟಿ ಬಂಜಾರ ಅವರು ಸಹಾಯಹಸ್ತ ಚಾಚಿದ್ದಾರೆ.

ಅವರ ಕೊಡುಗೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ಪೌರಕಾರ್ಮಿಕರಿಗೆ ದಿನ ಬಳಕೆ ಆಹಾರ ವಸ್ತುಗಳ ಕಿಟ್ ಗಳನ್ನು ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರವರು ಅವರು ಇಂದು ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್, ತಾಲೂಕು ಪಂಚಾಯತ್ ಸ್ಥಾಯಿ ಅಧ್ಯಕ್ಷರಾದ ಶ್ರೀ ಸಾಜ ರಾಧಾಕೃಷ್ಣ ಆಳ್ವ, ಭಾರತೀಯ ಜನತಾ ಪಾರ್ಟಿ ಮಾಜಿ ಮಂಡಲ ಅಧ್ಯಕ್ಷರಾದ ಶ್ರೀ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭಾ ಸದಸ್ಯರಾದ ಶ್ರೀ ಜೀವಂಧರ್ ಜೈನ್, ಶ್ರೀ ಜಗನ್ನೀವಾಸ ರಾವ್, ಭಾರತೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪುರುಷೋತ್ತಮ ಮುಂಗ್ಲಿಮನೆ, ಶ್ರೀಮತಿ ಜಯಶ್ರೀ ಶೆಟ್ಟಿ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.

ಕೆ.ಎಮ್.ಎಫ್. ವತಿಯಿಂದ ಉಚಿತವಾಗಿ ನೀಡಿದ 500 ಲೀಟರ್ ಹಾಲು

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ದುಡಿಯುತ್ತಿರುವ ನಿರ್ಗತಿಕ ಪೌರಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಕೆ.ಎಮ್.ಎಫ್. ವತಿಯಿಂದ ಉಚಿತವಾಗಿ ನೀಡಿದ 500 ಲೀಟರ್ ಹಾಲನ್ನು ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರವರು ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್, ತಾಲೂಕು ಪಂಚಾಯತ್ ಸ್ಥಾಯಿ ಅಧ್ಯಕ್ಷರಾದ ಶ್ರೀ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯರಾದ ಶ್ರೀ ಜೀವಂಧರ್ ಜೈನ್, ಶ್ರೀ ಜಗನ್ನೀವಾಸ ರಾವ್, ಭಾರತೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪುರುಷೋತ್ತಮ ಮುಂಗ್ಲಿಮನೆ, ಶ್ರೀಮತಿ ಜಯಶ್ರೀ ಶೆಟ್ಟಿ, ಕೆ.ಎಮ್.ಎಫ್. ನಿರ್ದೇಶಕರುಗಳಾದ ಶ್ರೀ ನಾರಾಯಣ ಪ್ರಕಾಶ್, ಶ್ರೀ ಜಯರಾಮ ರೈ ಬಳಜ್ಜ, ಎ.ಪಿ.ಎಂ.ಸಿ. ಅಧ್ಯಕ್ಷರಾದ ಶ್ರೀ ದಿನೇಶ್ ಮೆದು ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.

Leave A Reply

Your email address will not be published.