ಸುಳ್ಯ | ಪಿಎಂ ನಿಧಿಗೆ ಒಂದು ಲಕ್ಷ ನೀಡಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ
ಸುಳ್ಯ : ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸುತ್ತಿರುವ ಭಾರತದಲ್ಲಿ ಆರೋಗ್ಯ ರಕ್ಷಣೆಯ ಸವಾಲನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿರುವ ಪಿ.ಎಂ. ಕೇರ್ಸ್ ನಿಧಿಗೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಎರಡು ತಿಂಗಳ ಪೆನ್ಶನ್ ವೇತನವನ್ನು ನೀಡುವ ಮೂಲಕ ತನ್ನ ವಾರ್ಷಿಕ ಆದಾಯದ 15% ಮೊತ್ತವನ್ನು ಸಲ್ಲಿಸಿರುವುದಾಗಿ ದಾಮ್ಲೆಯವರು ತಿಳಿಸಿದ್ದಾರೆ. ಸುಳ್ಯದ ಸ್ಟೇಟ್ ಬೇಂಕ್ ಆಫ್ ಇಂಡಿಯಾ ಶಾಖೆಯ ಮೂಲಕ ಈ ಮೊತ್ತವನ್ನು ಕಳಿಸಲಾಗಿದೆ.
ದಿನೇ ದಿನೇ ವಿಸ್ತರಿಸುತ್ತಿರುವ ಪಿಡುಗನ್ನು ನಿವಾರಿಸಲು ತಗಲುವ ಅಪಾರ ಖರ್ಚು ವೆಚ್ಚಗಳಿಗಾಗಿ ಸರಕಾರಕ್ಕೆ ಇಂತಹ ಸಹಕಾರ ಮಾಡುವುದು ನಾಗರಿಕರ ಹೊಣೆ ಎಂಬುದಾಗಿ ದಾಮ್ಲೆಯವರು ಹೇಳಿದ್ದಾರೆ.