ಪುಂಜಾಲಕಟ್ಟೆ | ಬೆಳಿಗ್ಗೆ 7-12 ಗಂಟೆಗಳ ಸಡಿಲಿಕೆ ಮತ್ತು ಅಗತ್ಯ ವಸ್ತುಗಳ ಸಾಗಾಟದ ದುರುಪಯೋಗ | ಟೆಂಪೋ, ಆಟೋ ಮತ್ತು 12 ಬೈಕ್ ವಶ

ಅಗತ್ಯ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು, ಬೇರೆ ಕಡೆಯಿಂದ ತರಕಾರಿ ಮತ್ತು ದಿನಸಿ ತಂದು ಮಾರಲು ಸರಕಾರ ನೀಡಿದ ಅವಕಾಶವನ್ನು ಕೆಲವರು ದುರುಪಯೋಗ ಮಾಡಿಕೊಳ್ಳುವುದು ಕಂಡುಬಂದಿದೆ. ಈಗ ಯಾವುದೋ ಊರಿಗೆ ಹೋಗಬೇಕೆಂದರೆ ಒಂದು ಪಿಕ್ಅಪ್ ಮಾಡಿಕೊಳ್ಳುವುದು, ತರಕಾರಿ ತರಲು ಹೋಗುತ್ತಿದ್ದೇವೆ ಎಂದು ಹೊರಡುವುದು ಮುಂತಾದವು ನಡೆಯುತ್ತಿದೆ. ಜೊತೆಗೆ ಎಂದಿನಂತೆ ಬೈಕಿನಲ್ಲಿ ಸಿಟಿ ರೈಡ್ ಗೆ ಹೊರಡುವವರು.

ಅದಕ್ಕೆ ನೋಡಿ, ನಿಮಗೆ ಈ ಶಿಕ್ಷೆ ಅಂತ ಪುಂಜಾಲಕಟ್ಟೆ ಎಸ್.ಐ.ಸೌಮ್ಯ ಅವರು ಇಂದು ಕಾರ್ಯಚರಣೆಕ್ಕಿಳಿದವರು ಬರೋಬ್ಬರಿ 12 ಬೈಕ್ 1 ಅಟೋ ಹಾಗೂ 1 ಪಿಕಪ್ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಗಳವರೆಗೆ ಅಗತ್ಯ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳಲು ಜಿಲ್ಲಾಡಳಿತ ನೀಡಿದ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುತ್ತೀರಾ ? ವಾಹನ ಜಪ್ತಿ ಆಗುತ್ತದೆ ಹುಷಾರ್ !

Leave A Reply

Your email address will not be published.