ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ಮತ್ತು ದಕ್ಷಿಣ ಕನ್ನಡ ಒಟ್ಟಾರೆ ಇವತ್ತು ಕೂಡ 7-12 ಹೊರತುಪಡಿಸಿ ಸಂಪೂರ್ಣ ಬಂದ್
ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ಎ. 3-4 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಸಂದರ್ಭ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಬಹಳ ಕಟ್ಟುನಿಟ್ಟಿನ ಕ್ರಮ ಕೈಗೊಂಡರು. ಜಿಲ್ಲಾಡಳಿತವು ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕಟ್ಟಾಜ್ಞೆ ವಿಧಿಸಿತ್ತು. ಅದಕ್ಕಾಗೇ ದಕ್ಷಿಣ ಕನ್ನಡದ ಜಿಲ್ಲಾಡಳಿತ ಮತ್ತು ಪೊಲೀಸರು ಮತ್ತಷ್ಟು ಕಠಿಣ ನಿಲುವು ತೆಗೆದುಕೊಂಡಿದ್ದಾರೆ. ಇವತ್ತು ಕೂಡ ಎಲ್ಲೆಡೆ ಪೊಲೀಸರು ಮತ್ತಷ್ಟು ಚುರುಕಾಗಿದ್ದಾರೆ.
ಅದಕ್ಕೆ ಅನುಗುಣವಾಗಿ ಅದೇಶ ಉಲ್ಲಂಘಿಸಿ ಓಡಾಟ ನಡೆಸಿದ ಅನಗತ್ಯವಾಗಿ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ವಾಹನಗಳ ಅನಗತ್ಯ ಸಂಚಾರ ನಿಯಂತ್ರಿಸುವ ಹಿನ್ನಲೆಯಲ್ಲಿ ಖಾಸಗಿ ಕಾರುಗಳನ್ನು ನಿರ್ಬಂಧಿಸಿದೆ. ಆದರೂ ಪೇಟೆಯಲ್ಲಿ ಖಾಸಗಿ ಕಾರುಗಳ ಓಡಾಟಕ್ಕೆ ಮಾತ್ರ ತಡೆ ಕಂಡುಬರಲಿಲ್ಲ. ಪುತ್ತೂರು ನಗರ ಹಾಗೂ ಉಪ್ಪಿನಂಗಡಿಯಲ್ಲಿ ಬೈಕ್ ಸವಾರರ ಓಡಾಟಕ್ಕೆ ಮಿತಿ ಇರಲಿಲ್ಲ. ಬೆಳ್ತಂಗಡಿ, ಸುಳ್ಯ, ಗುರುವಾಯನಕೆರೆ, ಉಜಿರೆ, ಕಡಬ, ಸುಬ್ರಹ್ಮಣ್ಯ, ಪುಂಜಾಲಕಟ್ಟೆ ಮುಂತಾದ ಕಡೆಗಳಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ.
ಇದನ್ನು ಗಮನಿಸಿದ ಪೊಲೀಸ್ ಇಲಾಖೆಯು ಪೇಟೆಯ ಹಲವು ಕಡೆ ಅನಗತ್ಯವಾಗಿ ರಸ್ತೆಗೆ ಬಂದ ಖಾಸಗಿ ವಾಹನಗಳನ್ನು ತಡೆದು ವಾಪಾಸು ಕಳುಹಿಸಿದರು. ಅತೀ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವ ವಸ್ತುಗಳ ಖರೀದಿಗೂ ಅವಕಾಶ ನೀಡಲಿಲ್ಲ. ಇದನ್ನು ಮೀರಿ ನಗರದಲ್ಲಿ ಓಡಾಟ ನಡೆಸುತ್ತಿದ್ದ ಖಾಸಗಿ ಕಾರುಗಳನ್ನು ಹಾಕಿ ತಂಡ ವಶಕ್ಕೆ ಪಡೆದುಕೊಂಡರು.
ಈಗ ಎಲ್ಲಾ ದಿನಬಳಕೆಯ ವಸ್ತುಗಳು, ಒಣ ಮೀನು ಸಹಿತ ಎಲ್ಲಾ ಥರದ ತರಕಾರಿಗಳು ಸೇರಿ ಎಲ್ಲವೂ ಹಳ್ಳಿಯ ಅಂಗಡಿಗಳಲ್ಲಿ ಕೂಡ ದೊರೆಯುತ್ತಿವೆ. ಮನೆ ಪಕ್ಕ ಅಂಗಡಿಗಳು ಇಲ್ಲದ ಜಾಗಗಳೇ ಇಲ್ಲ. ಅವುಗಳಲ್ಲಿ ಸಿಗದ ವಸ್ತುಗಳೇ ಇಲ್ಲ. ಊರಿನ ಹಳ್ಳಿಯ ಅಂಗಡಿಗಳು ಒಂದು ರೀತಿ ಸೂಪರ್ ರ್ಮಾರ್ಕೆಟ್ ಥರ ಇದೆ. ಅಲ್ಲಿ ಎಲ್ಲಾ ರೀತಿಯ ಜೀವನಾವಶ್ಯಕ ವಸ್ತುಗಳು ದೊರೆಯುತ್ತವೆ. ಆದರೂ ನಮ್ಮ ಜನ ಅದರಲ್ಲೂ ಮುಖ್ಯವಾಗಿ ಯುವಜನತೆ ಗಾಡಿ ಸ್ಟಾರ್ಟ್ ಮಾಡಿಕೊಂಡು ಪೇಟೆಯತ್ತ ಮುಖ ಮಾಡುತ್ತಿರುವುದು ದುರಂತವೇ ಸರಿ.