ಬಿಸಿಲಿನ ತಾಪಕ್ಕೆ ಕಂಗಾಲಾದವರಿಗೆ ಎಸ್.ವೈ.ಎಸ್, ಎಸ್ಸೆಸ್ಸೆಫ್ ವತಿಯಿಂದ ನೀರು ವಿತರಣೆ
ಸುಳ್ಯ ತಾಲೂಕು ಎಸ್.ವೈ.ಎಸ್ ಹಾಗೂ ಎಸ್ಸೆಸ್ಸೆಫ್ ಸಮಿತಿಗಳ ವತಿಯಿಂದ ಲಾಕ್ ಡೌನ್ ಸಮಯಗಳಲ್ಲಿ ರೇಷನ್ ಅಂಗಡಿಗಳ ಮುಂದೆ ಕ್ಯೂ ನಿಂತು, ಬಿಸಿಲಿನ ತಾಪಕ್ಕೆ ಬಾಯಾರಿದವರಿಗೆ ಕುಡಿಯುವ ನೀರು ವಿತರಿಸಲಾಯಿತು.
ಸರಕಾರವು ಪಡಿತರ ವಿತರಣೆ ಆರಂಭಿಸಿದ್ದು, ಅದನ್ನು ಪಡೆಯಲು ಸಿ.ಎ ಬ್ಯಾಂಕ್, ಲ್ಯಾಂಪ್ ಸೊಸೈಟಿ, ಡಿ.ಸಿ.ಸಿ ಬ್ಯಾಂಕ್ ಗಳ ಮುಂದೆ ಹಾಗೂ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದ ಬಿಸಿಲ ಬೇಗೆಗೆ ಬಾಯಾರಿಕೆಯಿಂದ ಕಂಗಾಲಾದವರಿಗೆ ಎಸ್.ವೈ.ಎಸ್ ಇಸಾಬಾ ಟೀಂ ಹಾಗೂ, ಎಸ್ಸೆಸ್ಸೆಫ್ ಕ್ಯೂ ಟೀಂ ಸದಸ್ಯರು ಬಾಟಲಿ ನೀರು ಖರೀದಿಸಿ ಸರ್ವರಿಗೂ ವಿತರಣೆ ಮಾಡಿದರು.

