ಕಾನೂನು ಉಲ್ಲಂಘಿಸಿ ಮಸೀದಿಯಲ್ಲಿ ಪ್ರಾರ್ಥನೆ, ಗುಂಪುಗೂಡಿದ ಜನ : 6 ಬೈಕ್ ವಶ

ಏಪ್ರಿಲ್,4 : ಮತ್ತೆ ಕೆಲವು ವ್ಯಕ್ತಿಗಳು ಕಾನೂನು ಉಲ್ಲಂಘಿಸಿ ಗುಂಪುಗೂಡಿ ಪ್ರಾರ್ಥನೆ ಸಲ್ಲಿಸುವ ಘಟನೆ ನಡೆದಿದೆ. ದೇವರ ನಂಬಿಕೆ ಇರುವುದು ಇವರಿಗೆ ಮಾತ್ರವೇ ಅಥವಾ ಕಾನೂನು ಉಲ್ಲಂಘಿಸುವುದು ಇವರ ಜನ್ಮಸಿದ್ಧ ಹಕ್ಕಾ, ಇವರು ಹುಟ್ಟಿದ್ದೆ ಕಾನೂನನ್ನು ಉಲ್ಲಂಘಿಸಲಾ ಎಂಬುದು ಜನರ ಪ್ರಶ್ನೆಯಾಗಿದೆ.

ಇದು ನಡೆದದ್ದು ತಲಪಾಡಿಯ ಜುಮ್ಮಾ ಮಸೀದಿ ಆವರಣದಲ್ಲಿ.

ದಿನಾಂಕ  2.4.2020 ರಂದು ಬಂಟ್ವಾಳ ನಗರ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ಕೋವಿಡ್ -19 ಕೋರೋನ ಕಾಯಿಲೆಯ ನಿಮಿತ್ತ ಈಗಾಗಲೇ ಅದೇಶಿಸಲಾಗಿರುವ ಬಂದ್‌ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ ಸಾರ್ವಜನಿಕರನ್ನು ರಕ್ಷಿಸುವ ಉದ್ದೇಶದಿಂದ ಠಾಣಾ ಸರಹದ್ದಿನಲ್ಲಿ  ಮೈಕ್ ಮೂಲಕ  ತಿಳುವಳಿಕೆ ಮೂಡಿಸುತ್ತಾ ರೌಂಡ್ಸ್  ಮಾಡುತ್ತಿದ್ದಾಗ ಸಂಜೆ 6.00 ಗಂಟೆಗೆ ಬಿ ಮೂಡ ಗ್ರಾಮದ ತಲಪಾಡಿ ಜುಮ್ಮಾ ಮಸೀದಿಯ ತಲುಪಿದಾಗ ಮಸೀದಿಯ ಹೊರಗೆ ಖಾಲಿ ಸ್ಥಳದಲ್ಲಿ  ಹಲವು ಮೋಟಾರ್ ಸೈಕಲುಗಳನ್ನು ನಿಲ್ಲಿಸಿದ್ದರು.

ಗುಂಪಾಗಿ ಬೈಕು ನಿಲ್ಲಿಸಿ ಅದರಲ್ಲಿ  6 ರಿಂದ 8 ಜನ ಯುವಕರು ಪ್ರಾಣಕ್ಕೆ ಅಪಾಯಕಾರಿಯಾದ  ಕೋರೊನ ರೋಗದ  ಸೋಂಕನ್ನು ಹರಡುವ  ಸಂಭವ ಇದ್ದರೂ ನಿರ್ಲಕ್ಷತನದಿಂದ ಉದ್ದೇಶಪೂರ್ವಕವಾಗಿ ಗುಂಪು ಕೂಡಿಕೊಂಡು ಕುಳಿತು ಮಾತನಾಡುತ್ತಿದ್ದು ಇಲಾಖಾ ವಾಹನವನ್ನು ಕಂಡು ಮೋಟಾರ್ ಸೈಕಲುಗಳನ್ನು ಬಿಟ್ಟು ತಾರಾ ಮಾರಾ ಓಡಿ ಹೋಗಿರುತ್ತಾರೆ. 

ಪೊಲೀಸರು ಸ್ಥಳದಲ್ಲಿದ್ದ 6 ಮೋಟಾರ್ ಸೈಕಲುಗಳನ್ನು ವಶಕ್ಕೆ ಪಡೆದು ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.

Leave A Reply

Your email address will not be published.