Day: March 30, 2020

ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಗೆ ಲಾಕ್ ಡೌನ್ ಅನ್ವಯಿಸಲ್ಲ | ಸರಳವಾಗಿ ಜಾತ್ರೋತ್ಸವ

ಗೊನೆ ಮುಹೂರ್ತ : ಏಪ್ರಿಲ್ 1 ರಂದು || ಧ್ವಜಾರೋಹಣ / ಜಾತ್ರೋತ್ಸವ ಪ್ರಾರಂಭ : ಏಪ್ರಿಲ್ 10 ಕ್ಕೆ ಲಾಕ್ ಡೌನ್ ಆಗಿ ದೇಶ ಸ್ಥಬ್ದವಾಗಿದ್ದರೂ ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯು ಶಾಸ್ತ್ರೋಕ್ತವಾಗಿಯೇ ನಡೆಯಲಿದೆ. ಆ ಮೂಲಕ ಜಾತ್ರೆ ನಡೆಯುತ್ತಾ ಇಲ್ಲವಾ ಎಂದು ಭಕ್ತರಲ್ಲಿದ್ದ ಅನಿಶ್ಚಿತತೆ ಕೊನೆಯಾಗಿದೆ. ಆದರೆ ಎಂದಿನ ಜನ, ಗೌಜಿ, ಅಬ್ಬರ, ಜಾತ್ರೆ, ಸಂತೆ ಇಲ್ಲದೆ ಸರಳವಾಗಿ ನಡೆಸಲು ಉದ್ದೇಶಿಸಲಾಗಿದೆ. ತಂತ್ರಿಗಳು, ದೇವಾಲಯದ ಅರ್ಚಕರು, ಮತ್ತು ಆಯ್ದ ನೌಕರರು ಮತ್ತು ಆಯ್ದ …

ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಗೆ ಲಾಕ್ ಡೌನ್ ಅನ್ವಯಿಸಲ್ಲ | ಸರಳವಾಗಿ ಜಾತ್ರೋತ್ಸವ Read More »

ಕೊರೋನಾ ವೈರಸ್ ಹಿನ್ನೆಲೆ | ಬೆಳಂದೂರು ಗ್ರಾ.ಪಂ, ಕಾರ್ಯಪಡೆಯ ಮೂಲಕ ಪರವೂರಿನಿಂದ ಬಂದವರ ಮನೆಗೆ ಭೇಟಿ

ಕಾಣಿಯೂರು: ಮಹಾಮಾರಿ ಕೊರೋನಾ ವೈರಸ್‌ನ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಈ ಬಗ್ಗೆ ಜನರಲ್ಲಿ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿಕೊಂಡು ಪಂಚಾಯತ್ ವ್ಯಾಪ್ತಿಯಲ್ಲಿ ದೂರದ ಊರುಗಳಿಂದ ಬಂದವರ ಮೇಲೆ ನಿಗಾ ಇಡುವ ಕಾರ್ಯದ ಉದ್ದೇಶದಿಂದ ಅವರ ಮನೆಗಳಿಗೆ ಭೇಟಿ ಮತ್ತು ಮಾಹಿತಿ ಸಂಗ್ರಹ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾ.30ರಂದು ನಡೆಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. …

ಕೊರೋನಾ ವೈರಸ್ ಹಿನ್ನೆಲೆ | ಬೆಳಂದೂರು ಗ್ರಾ.ಪಂ, ಕಾರ್ಯಪಡೆಯ ಮೂಲಕ ಪರವೂರಿನಿಂದ ಬಂದವರ ಮನೆಗೆ ಭೇಟಿ Read More »

ಬಿರು ಬಿಸಿಲಿಗೆ ಕೊರೊನಾ ಜಾಗೃತಿ ಮೂಡಿಸೋ ಆಶಾ ಕಾರ್ಯಕರ್ತರಿಗೆ ವಾಹನ ಸೌಕರ್ಯ ನೀಡುವಂತಾಗಲಿ

ಶಾಸಕರೇ, ಅಧಿಕಾರಿಗಳೇ, ಒಂದಷ್ಟು ಕರುಣೆ ತೋರಿಸಿ. ಆಶಾ ಕಾರ್ಯಕರ್ತೆಯರಿಗೂ ನಡೆದರೆ ಸುಸ್ತಾಗುತ್ತದೆ. ಬಿಸಿಲಿಗೆ ಅವರೂ ದಣಿಯುತ್ತಾರೆ. ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಮತ್ತು ಮನೆಯವರ ಅವಹೇಳನಕ್ಕೆ ಅವರಿಗೂ ನೋವಾಗುತ್ತದೆ….! ದಕ್ಷಿಣ ಕನ್ನಡ : ದೇಶಾದ್ಯಂತ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಡಿ ಕರ್ತವ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ಸ್ಥಳಿಯಾಡಳಿತ ವಾಹನ ಸೌಕರ್ಯ ಮಾಡಿಕೊಡಬೇಕಿದೆ. ಆಶಾ ಕಾರ್ಯಕರ್ತೆಯರು ಕೊರೊನಾ ವೈರಸ್ ನ ಕುರಿತಾಗಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ‌ ಮಾಡುತ್ತಿದ್ದಾರೆ. …

ಬಿರು ಬಿಸಿಲಿಗೆ ಕೊರೊನಾ ಜಾಗೃತಿ ಮೂಡಿಸೋ ಆಶಾ ಕಾರ್ಯಕರ್ತರಿಗೆ ವಾಹನ ಸೌಕರ್ಯ ನೀಡುವಂತಾಗಲಿ Read More »

ಸವಣೂರು | ಹೋಂ ಕ್ವಾರಂಟೈನ್‌ಗೆ ಸೂಚಿಸಿದವರ ಮನೆಗೆ ಇಲಾಖೆ ಭೇಟಿ, ಮನೆಯಲ್ಲಿರದೇ ಇರುವುದು ಪತ್ತೆ

ಇದು ಯಾವ ಥರದ ಸರಕಾರ ? ಯಾಕೆ ಹೊಂ ಕ್ವಾರಂಟೈನ್ ಜನರ ಮೇಲೆ ಇಷ್ಟು ಮಟ್ಟದ ತಾಳ್ಮೆ ಎಂದು ಅರ್ಥ ಆಗುತ್ತಿಲ್ಲ. ದೇಶವೆಲ್ಲ ಹೊತ್ತಿ ಉರಿಯುತ್ತಿದೆ. ಹೋಂ ಕ್ವಾರಂಟೈನ್ ವ್ಯಕ್ತಿಗಳು ಊರೂರು ಬೀದಿನಾಯಿಯಂತೆ ಬಲಿ ಬರ್ತಾ ಇದ್ದಾರೆ. ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಅವರ ಹಿಂದೆ ಭಿಕ್ಷುಕರ ಥರ ಓಡಾಡುವುದೇ ಆಗಿದೆ. ಸ್ಟಾಪ್ ದಿಸ್ ಬ್ಲಡಿ ಪ್ರೋಸೆಸ್. ಮಾತು ಕೇಳದೆ ಸೋಂಕು ಹರಡುವ ಇಂತಹಾ ವ್ಯಕ್ತಿಗಳನ್ನು ಸರಕಾರ ಕನಿಕರ ತೋರದೆ ಶೂಟ್ ಮಾಡಿ. ಇಲ್ಲಾಂದ್ರೆ ನಾಯಿಯನ್ನು ಕಟ್ಟಿ ಹಾಕಿದ …

ಸವಣೂರು | ಹೋಂ ಕ್ವಾರಂಟೈನ್‌ಗೆ ಸೂಚಿಸಿದವರ ಮನೆಗೆ ಇಲಾಖೆ ಭೇಟಿ, ಮನೆಯಲ್ಲಿರದೇ ಇರುವುದು ಪತ್ತೆ Read More »

ಇಂದು ಸಂಜೆಯಿಂದಲೇ ದಕ್ಷಿಣ ಕನ್ನಡದಲ್ಲಿ ಹಾಲು ಖರೀದಿ ಪುನರಾರಂಭ

ಮಾ.30 : ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡದಲ್ಲಿ ಹಾಲು ಖರೀದಿ ಸ್ಥಗಿತವಾಗಿತ್ತು. ಆದರೆ ಇವತ್ತು ಸಂಜೆಯಿಂದ ಹಾಲು ಖರೀದಿಯನ್ನು ಪುನರಾರಂಭಿಸಲಾಗುವುದೆಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ತಿಳಿಸಿದೆ. ಮಾರ್ಚ್ 28 ರಂದು ರವಿರಾಜ ಹೆಗ್ಡೆ, ಅಧ್ಯಕ್ಷರು ದ.ಕ.ಹಾಲು ಒಕ್ಕೂಟ ಹಾಲು ಖರೀದಿ ಪುನರಾರಂಭಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಮೊನ್ನೆ ನಿಲ್ಲಿಸಿದ್ದ ಹಾಲು ಖರೀದಿಯನ್ನು ಇವತ್ತು ಪುನರ್ ಪ್ರಾರಂಭಿಸಲಾಗುವುದು ಎಂದು ಹಾಲು ಒಕ್ಕೂಟ ತಿಳಿಸಿದೆ. ಈ ಹಿಂದೆ ನಾಳೆಯಿಂದ ಹಾಲು ಖರೀದಿ …

ಇಂದು ಸಂಜೆಯಿಂದಲೇ ದಕ್ಷಿಣ ಕನ್ನಡದಲ್ಲಿ ಹಾಲು ಖರೀದಿ ಪುನರಾರಂಭ Read More »

ಸುಬ್ರಹ್ಮಣ್ಯ: ಕುಮಾರಧಾರ ನದಿಯಲ್ಲಿ ಶವ ಪತ್ತೆ

ಸುಬ್ರಹ್ಮಣ್ಯ, ಮಾ. 30 : ಸುಬ್ರಹ್ಮಣ್ಯದಲ್ಲಿ ಹರಿಯುತ್ತಿರುವ ಕುಮಾರಧಾರ ನದಿಯಲ್ಲಿ ಅಪರಿಚಿತ ಪುರುಷನೋರ್ವನ ಶವ ಪತ್ತೆಯಾಗಿದೆ. ಇವತ್ತು ನದಿಯಲ್ಲಿ ಮಧ್ಯಾಹ್ನದ ವೇಳೆ ಶವವೊಂದು ನದಿಯಲ್ಲಿ ತೇಲುತ್ತಾ ಬರುತ್ತಿತ್ತು. ತೇಲುತ್ತಿರುವ ಶವವನ್ನು ಗಮನಿಸಿದ ಸ್ಥಳೀಯರು ಸುಬ್ರಮಣ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿದ್ದಾರೆ. ಶವವನ್ನು ಮೇಲಕ್ಕೆತ್ತುವ ಕಾರ್ಯ ನಡೆಯುತ್ತಿದೆ.

ಪಾಲ್ತಾಡು | ಗುಡ್ಡಕ್ಕೆ ಬೆಂಕಿ ಬಿದ್ದು ಕರಕಲಾದ ಗಿಡಮರಗಳು

ಪುತ್ತೂರು: ಕೊಳ್ತಿಗೆ ಗ್ರಾಮದ ಪಾಲ್ತಾಡು ಸಮೀಪದ ಚೀಪ್ಲಾಜೆ ಎಂಬಲ್ಲಿ ಗುಡ್ಡೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಗಿಡ ಮರಗಳು ಸುಟ್ಟು ಹೋಗಿದೆ. ಆಕಸ್ಮಿಕವಾಗಿ ಈ ಗುಡ್ಡೆಗೆ ಬೆಂಕಿ ಬಿದ್ದಿರಬಹುದು ಅಥವಾ ವಿದ್ಯುತ್ ತಂತಿಗಳಿಗೆ ಮರದ ಗೆಲ್ಲು ತಾಗಿ ಬೆಂಕಿ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಪುತ್ತೂರು ಅಗ್ನಿಶಾಮಕ ದಳ ಆಗಮಿಸಿ ಬೆಂಕಿ‌ ನಂದಿಸುವಲ್ಲಿ ಯಶಸ್ವಿಯಾಗಿದೆ.ಊರವರು ಸಹಕರಿಸಿದರು. ಸ್ಥಳಕ್ಕೆ ಬೆಳ್ಳಾರೆ ಠಾಣಾ ಪೊಲೀಸರು ಬೇಟಿ ನೀಡಿದರು.

ಹೋಂ ಕ್ವಾರಂಟೈನ್ ಧಿಕ್ಕರಿಸಿದ ಆರೋಪ | ಕಲ್ಲೇರಿಯ ಕೊರೊನಾ ಪೀಡಿತನ ಮೇಲೆ ಪೊಲೀಸ್ ದೂರು ದಾಖಲು

ಉಪ್ಪಿನಂಗಡಿ : ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ಕೊಟ್ಟಿದ್ದರೂ ಇದನ್ನು ಕಲ್ಲೇರಿ ಜನತಾ ಕಾಲನಿಯ ಕೊರೊನಾ ಸೋಂಕಿತ ವ್ಯಕ್ತಿಯು ಧಿಕ್ಕರಿಸಿದ್ದಾರೆ. ಆದ್ದರಿಂದ ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಕರಾಯ ಗ್ರಾಮದ ಕಲ್ಲೇರಿ ಜನತಾ ಕಾಲನಿಯ ಮೇಲೆ ಈ ದೂರು ದಾಖಲಾಗಿದೆ. ಈತ ಮಾ.21 ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದ. ಅಲ್ಲಿ ಆತನನ್ನು ಪರೀಕ್ಷೆಗೊಳಪಡಿಸಿ ಆತನಿಗೆ ಸ್ಟಾಂಪಿಂಗ್ ಹಾಕಿ …

ಹೋಂ ಕ್ವಾರಂಟೈನ್ ಧಿಕ್ಕರಿಸಿದ ಆರೋಪ | ಕಲ್ಲೇರಿಯ ಕೊರೊನಾ ಪೀಡಿತನ ಮೇಲೆ ಪೊಲೀಸ್ ದೂರು ದಾಖಲು Read More »

ಕೊರೋನಾ ಹಟಾವೋಗಾಗಿ ಉಜಿರೆಯ ಬಸ್ ಸ್ಟ್ಯಾಂಡಿನಲ್ಲಿ ಸ್ವತಃ ಕ್ಲೀನಿಂಗ್ ಗೆ ಇಳಿದ ಈ ಪ್ರಭಾವೀ ವ್ಯಕ್ತಿ ಯಾರು ? | Live Updates !

ಮುಂದೆ ಓದುವ ಮೊದಲು ಈ ಫೋಟೋದಲ್ಲಿರುವ ಮಾಸ್ಕ್ ಧರಿಸಿದ ವ್ಯಕ್ತಿಯನ್ನು ಗುರುತಿಸಿ. ಕೊರೊನಾ ವೈರಸ್ ಸೋಂಕು ಹರಡುತ್ತಿರುವುದರಿಂದ ಮುಂಜಾಗರೂಕತಾ ಕ್ರಮವಾಗಿ ಬೆಳ್ತಂಗಡಿಯ ವಿವಿಧ ಪೇಟೆಗಳನ್ನು ಸ್ಯಾನಿಟೈಸ್ ಮಾಡಬೇಕು ಎಂಬ ಸಾರ್ವಜನಿಕರು ಆಶಯ ವ್ಯಕ್ತಪಡಿಸಿದ್ದರು.ಅದರಂತೆ ಉಜಿರೆಯ ಉದ್ಯಮಿಗಳಾದ ಲಕ್ಸ್ಮಿ ಗ್ರೂಪ್ಸ್ ನ ಶ್ರೀ ಮೋಹನ್ ಮತ್ತು ಸಂಧ್ಯಾ ಟ್ರೇಡರ್ಸಿನ ಶ್ರೀ ರಾಜೇಶ್ ಪೈ ಅವರ ” ಬದುಕು ಕಟ್ಟೋಣ ಬನ್ನಿ ” ಗುಂಪಿನ ಸ್ವಯಂಸೇವಕರ ಸಹಕಾರದೊಂದಿಗೆ ಸ್ಯಾನಿಟೈಸ್ ಮಾಡುವ ಕೆಲಸವನ್ನು ಸಾಂಕೇತಿಕವಾಗಿ ಆರಂಭಿಸಲಾಯಿತು. ಈ ಚಿತ್ರದಲ್ಲಿರುವ, ಉಜಿರೆಯ ಬಸ್ …

ಕೊರೋನಾ ಹಟಾವೋಗಾಗಿ ಉಜಿರೆಯ ಬಸ್ ಸ್ಟ್ಯಾಂಡಿನಲ್ಲಿ ಸ್ವತಃ ಕ್ಲೀನಿಂಗ್ ಗೆ ಇಳಿದ ಈ ಪ್ರಭಾವೀ ವ್ಯಕ್ತಿ ಯಾರು ? | Live Updates ! Read More »

ಏ.14 ರ ನಂತರ ಲಾಕ್‌ ಡೌನ್ ವಿಸ್ತರಣೆಯ ಉದ್ದೇಶ ಇಲ್ಲ – ರಾಜೀವ್ ಗೌಬ

ಏಪ್ರಿಲ್ 14 ರ ದೇಶಾದ್ಯಂತದ ಲಾಕ್ ಡೌನ್ ಅನ್ನು ಆನಂತ್ರವೂ ಮತ್ತೆ ಮುಂದುವರೆಯಲಿದೆ ಎಂದು ಅನೇಕ ಸುದ್ದಿಗಳು ಹರಿದಾಡುತ್ತಿವೆ. ಆದ್ರೇ ಏಪ್ರಿಲ್ 14ರ ನಂತ್ರದ ಲಾಕ್ ಡೌನ್ ಮುಕ್ತಾಯವಾಗಲಿದೆ. ಲಾಕ್ ಡೌನ್ ವಿಸ್ತರಣೆಯ ಯಾವುದೇ ಉದ್ದೇಶ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂಬುದಾಗಿ ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ಎ.14 ರ ನಂತರ ಲಾಕ್‌ಡೌನ್ ವಿಸ್ತರಣೆ ಮಾಡುವುದಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಕೇಂದ್ರ ಸರಕಾರದ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬ, ನನಗೆ ದೇಶಾದ್ಯಂತ ಏಪ್ರಿಲ್ …

ಏ.14 ರ ನಂತರ ಲಾಕ್‌ ಡೌನ್ ವಿಸ್ತರಣೆಯ ಉದ್ದೇಶ ಇಲ್ಲ – ರಾಜೀವ್ ಗೌಬ Read More »

error: Content is protected !!
Scroll to Top