ಬಿರು ಬಿಸಿಲಿಗೆ ಕೊರೊನಾ ಜಾಗೃತಿ ಮೂಡಿಸೋ ಆಶಾ ಕಾರ್ಯಕರ್ತರಿಗೆ ವಾಹನ ಸೌಕರ್ಯ ನೀಡುವಂತಾಗಲಿ

ಶಾಸಕರೇ, ಅಧಿಕಾರಿಗಳೇ, ಒಂದಷ್ಟು ಕರುಣೆ ತೋರಿಸಿ. ಆಶಾ ಕಾರ್ಯಕರ್ತೆಯರಿಗೂ ನಡೆದರೆ ಸುಸ್ತಾಗುತ್ತದೆ. ಬಿಸಿಲಿಗೆ ಅವರೂ ದಣಿಯುತ್ತಾರೆ. ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಮತ್ತು ಮನೆಯವರ ಅವಹೇಳನಕ್ಕೆ ಅವರಿಗೂ ನೋವಾಗುತ್ತದೆ….!

ದಕ್ಷಿಣ ಕನ್ನಡ : ದೇಶಾದ್ಯಂತ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಲಾಗಿದೆ.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಡಿ ಕರ್ತವ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ಸ್ಥಳಿಯಾಡಳಿತ ವಾಹನ ಸೌಕರ್ಯ ಮಾಡಿಕೊಡಬೇಕಿದೆ. ಆಶಾ ಕಾರ್ಯಕರ್ತೆಯರು ಕೊರೊನಾ ವೈರಸ್ ನ ಕುರಿತಾಗಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ‌ ಮಾಡುತ್ತಿದ್ದಾರೆ.

ಈ ಉರಿ ಬಿಸಿಲಿನಲ್ಲೂ ತಮ್ಮ ಕರ್ತವ್ಯವನ್ನು ನಿಷ್ಟೆಯಿಂದ ಮಾಡುತ್ತಿದ್ದಾರೆ. ಕನಿಷ್ಟ ಗೌರವಧನದಲ್ಲಿ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಈಗ ಕೊರೊನಾ ಹೋಂ ಕ್ವಾರಂಟೈನ್ ನಲ್ಲಿರುವವರ ಮಾಹಿತಿಯನ್ನು ಮನೆ ಮನೆ ಬೇಟಿ ನೀಡಿ ನೀಡಬೇಕಾಗಿದೆ.

ಈ ಸಂದರ್ಭದಲ್ಲಿ ಅಂತಹವರ ಮನೆಯಿಂದ ನಿಂದನೆಗಳನ್ನೂ ಕೇಳುವಂತಹ ಪರಿಸ್ಥಿತಿ ಇವರದ್ದು. ಎಲ್ಲಾ ಕಡೆ ನಡೆದುಕೊಂಡೇ ಆಶಾ ಕಾರ್ಯಕರ್ತೆಯರು ಹೋಗುವಂತಾಗಿದೆ. ಇವರಿಗೆ ವಾಹನ ವ್ಯವಸ್ಥೆ ಕಲ್ಪಿಸಿದರೆ ಜಾಗೃತಿ ಕಾರ್ಯಕ್ಕೂ ವೇಗ ದೊರಕುತ್ತದೆ. ಆಶಾ ಕಾರ್ಯಕರ್ತೆಯರ ಸಂಕಷ್ಟವನ್ನು ತಕ್ಕ ಮಟ್ಟಿಗೆ ದೂರ ಮಾಡಬೇಕಿದೆ.

ಎಲ್ಲಾ ಗ್ರಾ.ಪಂ.ಗಳಲ್ಲೂ ಕೊರೊನಾ ಜಾಗೃತಿ ತಡೆ ರಚಿಸಲಾಗಿದೆ. ಆದರೆ ಮನೆ ಮನೆಗೆ ಆರೋಗ್ಯ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಮಾತ್ರ ಹೋಗುತ್ತಿರುವುದು ಕಾಣಸಿಗುತ್ತದೆ. ಈ ಕುರಿತು ಸಂಬಂಧಪಟ್ಟವರು ಗಮನಹರಿಸಬೇಕಿದೆ.

Leave A Reply

Your email address will not be published.