ಕೊರೋನಾ ವೈರಸ್ ಹಿನ್ನೆಲೆ | ಬೆಳಂದೂರು ಗ್ರಾ.ಪಂ, ಕಾರ್ಯಪಡೆಯ ಮೂಲಕ ಪರವೂರಿನಿಂದ ಬಂದವರ ಮನೆಗೆ ಭೇಟಿ

Share the Article

ಕಾಣಿಯೂರು: ಮಹಾಮಾರಿ ಕೊರೋನಾ ವೈರಸ್‌ನ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಈ ಬಗ್ಗೆ ಜನರಲ್ಲಿ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿಕೊಂಡು ಪಂಚಾಯತ್ ವ್ಯಾಪ್ತಿಯಲ್ಲಿ ದೂರದ ಊರುಗಳಿಂದ ಬಂದವರ ಮೇಲೆ ನಿಗಾ ಇಡುವ ಕಾರ್ಯದ ಉದ್ದೇಶದಿಂದ ಅವರ ಮನೆಗಳಿಗೆ ಭೇಟಿ ಮತ್ತು ಮಾಹಿತಿ ಸಂಗ್ರಹ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾ.30ರಂದು ನಡೆಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ, ಉಪಾಧ್ಯಕ್ಷ ಹರೀಶ್ ಕೆರೆನಾರು, ಸದಸ್ಯರಾದ ಜಯಂತ ಅಬೀರ, ಮೋಹನ್ ಅಗಳಿ, ಗೌರಿ ಸಂಜೀವ ಉಪಸ್ಥಿತರಿದ್ದರು.

Leave A Reply