ಹೋಂ ಕ್ವಾರಂಟೈನ್ ಧಿಕ್ಕರಿಸಿದ ಆರೋಪ | ಕಲ್ಲೇರಿಯ ಕೊರೊನಾ ಪೀಡಿತನ ಮೇಲೆ ಪೊಲೀಸ್ ದೂರು ದಾಖಲು

ಉಪ್ಪಿನಂಗಡಿ : ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ಕೊಟ್ಟಿದ್ದರೂ ಇದನ್ನು ಕಲ್ಲೇರಿ ಜನತಾ ಕಾಲನಿಯ ಕೊರೊನಾ ಸೋಂಕಿತ ವ್ಯಕ್ತಿಯು ಧಿಕ್ಕರಿಸಿದ್ದಾರೆ. ಆದ್ದರಿಂದ ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಕರಾಯ ಗ್ರಾಮದ ಕಲ್ಲೇರಿ ಜನತಾ ಕಾಲನಿಯ ಮೇಲೆ ಈ ದೂರು ದಾಖಲಾಗಿದೆ.

ಈತ ಮಾ.21 ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದ. ಅಲ್ಲಿ ಆತನನ್ನು ಪರೀಕ್ಷೆಗೊಳಪಡಿಸಿ ಆತನಿಗೆ ಸ್ಟಾಂಪಿಂಗ್ ಹಾಕಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿತ್ತು. ಆದರೆ ಆತ ಆ ಸೂಚನೆಯನ್ನು ಧಿಕ್ಕರಿಸಿ ಮನೆಯವರಿಗೆ ಹಾಗೂ ನೆರೆಕರೆಯಲ್ಲಿ ತಿರುಗಾಡಿ, ಅಲ್ಲಿಯೂ ಕೊರೊನಾ ಹರಡುವಂತೆ ಮಾಡಿದ್ದಾರೆ. ಆದ್ದರಿಂದ ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸಿಯವರು ದೂರಿನಲ್ಲಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಗಲ್ಫ್ ರಾಷ್ಟಗಳಿಂದ ಬಂದವರೇ ಈ ಸಾವಿನ ಸಾಂಪಲ್ ತಂದವರು. ತಂದದ್ದು ಸರಿ, ಪಾಪ, ಅದರಲ್ಲಿ ಅವರೇನೂ ಮಾಡುವಂತಿಲ್ಲ. ಅವರಿಗೂ ಆ ದೇಶದಲ್ಲಿ ಯಾರೋ ಅಂಟಿಸಿ ಕಳಿಸಿದ್ದು. ಅದಕ್ಕೆ ಯಾರನ್ನೂ ದೂರಬಾರದು. ಇಲ್ಲಿ ಬಂದ ಮೇಲೆ ಭಾರತವೆಂಬ ತಾಳ್ಮೆಯ ದೇಶ, ಇಂತಹ ಶಂಕಿತ -ಸೋಂಕಿತರನ್ನು ಇನ್ನಿಲ್ಲದ ಕೇರ್ ತಗೊಂಡು ” ನೋಡ್ರಪ್ಪಾ, ಯಾರಿಗೂ ಸೋಂಕು ಹರಡೋದು ಬೇಡ. ನಿಮಗೆ ರೋಗ ಇದೆಯೋ ಇಲ್ಲವೋ ಅಂತ ಇನ್ನು ಜಾಸ್ತಿ ಅಂದರೆ 14 ದಿನದಲ್ಲಿ ಗೊತ್ತಾಗುತ್ತದೆ. ಅಲ್ಲಿಯ ತನಕ ಮನೇಲೆ ಇರಿ. ಮನೇಲೂ ಯಾರಿಗೂ ರೋಗ ಹರಡಬೇಡಿ. ದಯವಿಟ್ಟು “. ಅಂತ ಹೇಳಿ, ಅವರಿಗೆ ಮಾಸ್ಕು ಅದು ಇದು ಅಂತ ಎಲ್ಲ ಕೊಟ್ಟು, ವಿಟಮಿನ್ ಟ್ಯಾಬ್ಲೆಟ್ ಕಟ್ಟಿಕೊಟ್ಟು, ಜೂಸ್ ಕೂಡ ಕುಡಿಸಿ ಮನೆಗೆ ಡ್ರಾಪ್ ಕೂಡ ಮಾಡಿತು ನಮ್ಮಸರಕಾರ. ಒಟ್ಟಾರೆ ಅವರನ್ನು ಅಮ್ಮನಂತೆ ಕೇರ್ ಮಾಡಿತ್ತು. ಆದ್ರೆ ಈ ದೇಶ ದ್ರೋಹಿಗಳು, ಹೇಳಿದ ಮಾತು ಕೇಳಿದ್ರಾ ? ಊರೂರು ಸುತ್ತಿದರು. ಊರೆಲ್ಲ ರೋಗ ಮೆತ್ತಿದರು. ತೀರಾ ಕೆಮ್ಮಲು ಆಗುತ್ತಿಲ್ಲ ಅಂದಾಗ. ರೋಗ ಬಂತು ಅಂದಾಗ, ಈಗ ಮತ್ತೆ ಸರಕಾರವನ್ನು ನಾಯಿಗಳ ಥರ ಮೂಸಿಕೊಂಡು ಬರುತ್ತಿದ್ದಾರೆ. ಇಂತವರನ್ನು ಟ್ರೀಟ್ ಮಾಡಬಾರದು. ಏನಾದರೂ ಮಾಡಿಕೊಳ್ಳಲಿ. ಇದು ಇವತ್ತು ನಮ್ಮ ಸುತ್ತಮುತ್ತಲ ಊರಿನ ಜನರು ಮಾತಾಡುತ್ತಿರುವ ರೀತಿ. ಅವರೆಲ್ಲ ಅಷ್ಟರ ಮಟ್ಟಿಗೆ ಇಂತಹ ವಿದ್ರೋಹಿಗಳ ಮೇಲೆ ಬೇಸತ್ತು ಹೋಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಈತನ ಮೇಲೆ ಭಾರತೀಯ ದಂಡ ಸಂಹಿತೆ 269, 270, 271ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.