ಸುಬ್ರಹ್ಮಣ್ಯ: ಕುಮಾರಧಾರ ನದಿಯಲ್ಲಿ ಶವ ಪತ್ತೆ

ಸುಬ್ರಹ್ಮಣ್ಯ, ಮಾ. 30 : ಸುಬ್ರಹ್ಮಣ್ಯದಲ್ಲಿ ಹರಿಯುತ್ತಿರುವ ಕುಮಾರಧಾರ ನದಿಯಲ್ಲಿ ಅಪರಿಚಿತ ಪುರುಷನೋರ್ವನ ಶವ ಪತ್ತೆಯಾಗಿದೆ.

ಇವತ್ತು ನದಿಯಲ್ಲಿ ಮಧ್ಯಾಹ್ನದ ವೇಳೆ ಶವವೊಂದು ನದಿಯಲ್ಲಿ ತೇಲುತ್ತಾ ಬರುತ್ತಿತ್ತು. ತೇಲುತ್ತಿರುವ ಶವವನ್ನು ಗಮನಿಸಿದ ಸ್ಥಳೀಯರು ಸುಬ್ರಮಣ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿದ್ದಾರೆ. ಶವವನ್ನು ಮೇಲಕ್ಕೆತ್ತುವ ಕಾರ್ಯ ನಡೆಯುತ್ತಿದೆ.

Leave A Reply

Your email address will not be published.