ಸುಳ್ಯ : ದೊಡ್ಡೇರಿ ಸಂಪರ್ಕದ ತೂಗುಸೇತುವೆ ಬಂದ್

ಸುಳ್ಯ: ದೇಶಾದ್ಯಂತ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಾಡಲಾಗಿರುವ ಲಾಕ್‌ಡೌನ್ ಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ.

ಹಲವೆಡೆ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಇನ್ನೊಂದು ಭಾಗದಿಂದ ಯಾರೂ ಬರಬಾರದೆಂದು ಇರುವ ಸಂಪರ್ಕ ರಸ್ತೆಗಳನ್ನು ಮುಚ್ಚುತ್ತಿದ್ದಾರೆ.

ಇಂತಹದೇ ವಿದ್ಯಾಮಾನ ಸುಳ್ಯ ತಾಲೂಕಿನ ಪೈಚಾರು ಓಡಬಾಯಿ ತೂಗು ಸೇತುವೆಯ ಮೂಲಕ ದೊಡ್ಡೇರಿ ಸಂಪರ್ಕಿಸುವ ಸ್ಥಳದಲ್ಲಿ ತೂಗುಸೇತುವೆಯ ಪ್ರವೇಶ ದ್ವಾರದ ಬಳಿಯಲ್ಲಿ ಬೇಲಿ ಹಾಕಿ ಬೇರೆ ಗ್ರಾಮದ ವ್ಯಕ್ತಿಗಳು ಪ್ರವೇಶ ಮಾಡದಂತೆ ನಿರ್ಬಂದ ಮಾಡಲಾಗಿದೆ. ಅಲ್ಲದೆ ಈ ಕುರಿತಂತೆ ಸೂಚನಾ ಫಲಕವನ್ನು ಅಳವಡಿಸಿದ್ದಾರೆ.

Leave A Reply

Your email address will not be published.