ನಿಜವಾಗುತ್ತಾ ಅಭಿಗ್ಯ ನುಡಿದ ಭವಿಷ್ಯ | 2019 ರ ಆಗಸ್ಟ್ ನಲ್ಲಿ ಭವಿಷ್ಯ ನುಡಿದಿದ್ದ ಬಾಲಕ !

ಕೋರೋನಾ ವ್ಯಾಧಿ ಇಡೀ ಪ್ರಪಂಚವನ್ನು ಆಕ್ರಮಿಸಿ ಕಾಡುವುದನ್ನು ಯಾರಾದರೂ ಮೊದಲೇ ಊಹಿಸಿದ್ದರಾ ? ಈ ಬಗ್ಗೆ ಯಾರಾದರೂ ಭವಿಷ್ಯವಾಣಿ ನುಡಿದ್ದಿದ್ದರಾ ? ಹೌದು. ಹಾಗಂತ ಒಬ್ಬರು ಭವಿಷ್ಯ ನುಡಿದಿದ್ದಾರೆ.

ಈ ನವೆಂಬರ್ 2019 ಕ್ಕೆ ಜಗತ್ತಿಗೆ ಮಹಾ ಕಂಟಕ ವೊಂದು ಬರಲಿದೆ. ದೊಡ್ಡ ರೋಗವೊಂದು ಜಗತ್ತನ್ನು ಆವರಿಸಲಿದ್ದು ಅದು ಈ ಜಗತ್ತನ್ನು 9 ತಿಂಗಳುಗಳ ಕಾಲ ಆಳಲಿದೆ. ಏಪ್ರಿಲ್ 2020 ರ ನಂತರ ಆ ರೋಗ ಕಮ್ಮಿಯಾಗಿ ಆ ಜಗತ್ತು ದೊಡ್ಡ ಕಂಟಕದಿಂದ ಪಾಲಾಗಲಿದೆ.

ಇಂಥ ಭವಿಷ್ಯ ನುಡಿದ ವ್ಯಕ್ತಿ ಯಾವುದೋ ಊರಿನ ಭವಿಷ್ಯಕಾರನಲ್ಲ. ನಮ್ಮ ಟಿವಿಯಲ್ಲಿ ಬರುವ ಗುರೂಜಿಯಲ್ಲ. ಮಠಗಳ ಸನ್ಯಾಸಿಯಲ್ಲ. ಕೋಡಿ ಮಠವಲ್ಲ.
ಈ ಭವಿಷ್ಯವನ್ನು ನುಡಿದವನು ಅಭಿಜ್ಞಾ ಆನಂದ್ ಎಂಬ 14 ವರ್ಷ ವಯಸ್ಸಿನ ಹುಡುಗ !

ಕೋರೋನಾ ರೋಗ ಕಾಡುವ ಬಗ್ಗೆ ಆತ 2019 ರ ಆಗಸ್ಟ್ 22 ರಂದೇ ತನ್ನ ಯು ಟ್ಯೂಬ್ ನಲ್ಲಿ ಹೇಳಿದ್ದಾನೆ. ಅದರಂತೆಯೇ ನವೆಂಬರ್ ನಲ್ಲಿ ಚೀನಾದ ವುಹಾನ್ ನಗರದಲ್ಲಿ ಶುರುವಾದ ಮೃತ್ಯುಮಾರಿ ಈಗ ದೇಶ ದೇಶಗಳಿಗೆ ವಿದೇಶ ಪ್ರವಾಸ ಕೈಗೊಂಡು ಕೋರೋನಾ ಕಾಡುತ್ತಿದೆ.

ಈ ಪುಟಾಣಿ ಭವಿಷ್ಯಕಾರ ಹೇಳಿದಂತೆಯೇ ಜಗತ್ತಿಗೆ ರೋಗ ಪ್ರಾಪ್ತಿ ಯಾಗಿದೆ. ಈ ರೋಗ ಮುಕ್ತಿಯ ದಿನವನ್ನು ಕೂಡಾ ಆತ ತನ್ನ ಭವಿಷ್ಯ ವಾಣಿಯಲ್ಲಿ ಹೇಳಿಕೊಂಡಿದ್ದಾನೆ. ಅದರ ಪ್ರಕಾರ ಮೇ 29 ಅಂತ್ಯದೊಳಗೆ ಜಗತ್ತು ಈ ಕಂಟಕದಿಂದ ಪಾರಾಗುತ್ತದೆ.

ಕೋರೋನಾ ವೈರಸ್ ಅನ್ನುವುದು ಒಂದು ವಿಶ್ವಯುದ್ಧ. ಇದು ಮಾನವತೆಯ ಮತ್ತು ರೋಗದ ನಡುವಿನ ಕದನ. ಯುದ್ಧದಲ್ಲಿ ದೇಶ ದೇಶಗಳು ಭಾಗವಹಿಸಿದ್ದವೋ ಇಲ್ಲವೋ ಗೊತ್ತಿಲ್ಲ : ಆದರೆ ಇದೊಂದು ಯುದ್ಧ ಎಂಬುದು ಖಚಿತ ಎಂದು ಈತನ ಅಭಿಪ್ರಾಯ.

ಮೈಸೂರಿನಲ್ಲಿ ನೆಲೆಸಿರುವ ಅಭಿಗ್ಯಾ ಆನಂದ್ ವಿಶ್ವದ ಕಿರಿಯ ಜ್ಯೋತಿಷಿ, ವಾಸ್ತು ವಾಸ್ತುಶಿಲ್ಪಿ ಮತ್ತು ಚಿನ್ನದ ಬೆಲೆ ವಿಶ್ಲೇಷಕ. ಅವರಿಗೆ ಗ್ಲೋಬಲ್ ಚೈಲ್ಡ್ ಪ್ರಾಡಿಜಿ ಪ್ರಶಸ್ತಿಯನ್ನೂ ನೀಡಲಾಗಿದೆ. ಇದನ್ನು ವಿಶ್ವದ ಅಗ್ರ ನೂರು ಮಕ್ಕಳ ಪ್ರಾಡಿಜಿಗಳಿಗೆ ( ಅದ್ಭುತ ಬುದ್ದಿಮತ್ತೆಯ ಬಾಲ ಪ್ರತಿಭೆ ) ಮಾತ್ರ ನೀಡಲಾಗುತ್ತದೆ. ಆತ ತಮ್ಮ ಸ್ನಾತಕೋತ್ತರ ಪದವಿ (ಆಯುರ್ವೇದ ಮೈಕ್ರೋಬಯಾಲಜಿ) ಯನ್ನು ಪೂರ್ಣಗೊಳಿಸಿದ ಅತ್ಯಂತ ಕಿರಿಯ, ಮತ್ತು ತಮ್ಮ ಪದವಿ (ವಾಸ್ತು ಶಾಸ್ತ್ರ) ಪೂರ್ಣಗೊಳಿಸಿದ ಕಿರಿಯ. ಆತ ಮತ್ತು ಆತನ ಸಹೋದರಿ 700 ಕ್ಕೂ ಹೆಚ್ಚು ವೀಡಿಯೊಗಳನ್ನು ಹೊಂದಿರುವ ಚಾನಲ್ ಅನ್ನು ಹೊಂದಿದ್ದಾರೆ. ಜ್ಯೋತಿಷ್ಯ, ವಾಸ್ತು ಶಾಸ್ತ್ರ ಮತ್ತು ಆಯುರ್ವೇದದ 300 ಕ್ಕೂ ಹೆಚ್ಚು ವೀಡಿಯೊಗಳನ್ನು ಅದು ಒಳಗೊಂಡಿದೆ. ಆತ ಪ್ರಾಧ್ಯಾಪಕರಾಗಿ ಕಲಿಸಲು ಅರ್ಹರಾಗಿರುವ ಹಂತದವರೆಗೆ ಸಂಸ್ಕೃತವನ್ನು ಅಧ್ಯಯನ ಮಾಡಿದ್ದಾನೆ. ಆತ ತಮ್ಮ ಸಾಹಿತ್ಯ ಕೋರ್ಸ್ ಅನ್ನು (ಸಾಹಿತ್ಯ ಮತ್ತು ಮುಂಗಡ ವ್ಯಾಕರಣ) ಕರ್ನಾಟಕ ಸರ್ಕಾರದಿಂದ ಪೂರ್ಣಗೊಳಿಸಿದ್ದಾನೆ. ಆತ ಶೃಂಗೇರಿಯಲ್ಲಿನ ಸುರಸರಸ್ವತಿ ಸಭಾದಿಂದ ತಮ್ಮ ಪ್ರವೇಶಾ (ಸ್ನಾತಕೋತ್ತರ ಸಮಾನ) ವನ್ನು ಪೂರ್ಣಗೊಳಿಸಿದ್ದಾನೆ. ಆತನನ್ನು ವಾಸ್ತು ಮತ್ತು ಜ್ಯೋತಿಷ್ಯ ಕುರಿತು ವಿಶ್ವದಾದ್ಯಂತದ ನೂರಾರು ಗ್ರಾಹಕರು ಸಂಪರ್ಕಿಸಿ ಸಲಹೆ ಪಡೆದಿದ್ದಾರೆ. ಆತ ವಾಸ್ತು ಶಾಸ್ತ್ರದ ಪ್ರಕಾರ ಕಾರ್ಖಾನೆಗಳು, ಕಟ್ಟಡಗಳು, ಕಚೇರಿ ಸ್ಥಳಗಳು ಮತ್ತು ವಸತಿ ಮನೆಗಳನ್ನು ವಿನ್ಯಾಸಗೊಳಿಸಿದ್ದಾರೆ.

ಅದೇ ಅಲ್ಲದೆ ಚಂದ್ರ ಗ್ರಹ ಮತ್ತು ರಾಹುಗಳು ನಕ್ಷೆಯಲ್ಲಿ ನೇರವಾಗಿ ಬರಲಿದ್ದು ಅವುಗಳ ಪ್ರಭಾವ ಭೂಮಿಯ ಮೇಲೆ ಜಾಸ್ತಿ. ಚಂದ್ರ ನೀರಿನ ಗೃಹವಾಗಿದ್ದು , ರಾಹುಲ ಚಾಲಕ ನ ರೀತಿ ಕೆಲಸ ಮಾಡುತ್ತಾನೆ. ಅದೇ ಕಾರಣಕ್ಕೆ ಕೆಮ್ಮು ಮತ್ತು ಸೀನು ಅತಿಯಾಗಿ ಬಾಧಿಸಲಿದೆ. ಮಾರ್ಚ್ 31ಮತ್ತು ಏಪ್ರಿಲ್ 1 ಕ್ರಿಟಿಕಲ್ ದಿನವಾಗಿದ್ದು ಆಗ ಭಾರೀ ಜಾಗ್ರತೆ ಅಗತ್ಯ.

ಮಂಗಳ ಗುರು ಮತ್ತು ಶನಿ ಗ್ರಹಗಳ ತುಂಬಾ ಶಕ್ತಿಯುತ ಗ್ರಹಗಳು ತಮ್ಮ ಪ್ರಭಾವವನ್ನು ತೋರಿಸುತ್ತದೆ. ಸೌರವ್ಯೂಹದಲ್ಲಿ ಗ್ರಹಗಳ ಪ್ರಭಾವ ಜಾಸ್ತಿಯಾಗಿರುತ್ತದೆ. ಈ ಮೂರೂ ಗ್ರಹಗಳು ಮಾರ್ಚ್ 31ರ ಸುಮಾರಿಗೆ ಕಕ್ಷೆಯಲ್ಲಿ ಒಂದೇ ಲೈನ್ ನಲ್ಲಿ ಬರಲಿದ್ದು ಆದಿನ ಅತ್ಯಂತ ಮಹತ್ವದ ದಿನವಾಗಿರುತ್ತದೆ. ಕೋರೋನಾ ರೋಗದ ಭಾದೆಯಲ್ಲಿ ಮಾರ್ಚ್ 31 ಅತ್ಯಂತ ಕಠಿಣತಮ ದಿನವಾಗಿರುತ್ತದೆ. ಅವತ್ತೇ ರೋಗ ಅತ್ಯುನ್ನತ ಮಟ್ಟದಲ್ಲಿರುತ್ತದೆ. ಅದೇ ಕ್ಲೈಮ್ಯಾಕ್ಸ್ ದಿನ !

ಮೇ 29 ರ ನಂತರ ಗ್ರಹಗಳ ನಕ್ಷೆ ಬದಲಾಗಿ ಅವುಗಳ ಪ್ರಭಾವ ಕುಗ್ಗಲಿದೆ. ಜಗತ್ತು ಈ ಸಂಕಟದಿಂದ ಮುಕ್ತವಾಗಲಿದೆ. ಮತ್ತೆ ಮನುಷ್ಯತ್ವ ರೋಗದ ಜಗಳದಲ್ಲಿ ಮನುಷ್ಯ ಮತ್ತೆ ಎದ್ದು ಮಾಮೂಲಿ ಜೀವನಕ್ಕೆ ಮರಳಲಿದ್ದಾನೆ.

ಊರಿಡೀ ಬಲಿ ಬಂದ ಕೋರೋನಾ ಶಂಕಿತ

Leave A Reply

Your email address will not be published.