ಮರೆಯಬಹುದೇ ಕಾಲೇಜು ಜೀವನ ?

ರಕ್ತ ಸಂಬಂಧಗಳ ಮೀರಿದ ಬಂಧವಿದು.. ಯಾವ ಬಿಂದುವಿನಲ್ಲಿ ಸಂಧಿಸುವುದು.. ಎನ್ನುವಂತೆ ನದಿಗಳು ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿ,ಬೆಟ್ಟ ಗುಡ್ಡಗಳ ಮೂಲಕ ಹರಿದು ,ಕೊನೆಗೆ ಸಮುದ್ರವನ್ನು ತಲುಪುತ್ತದೆ. ಅದೇ ರೀತಿ ನಾವೆಲ್ಲ ಬೇರೆ ಬೇರೆ ಕಡೆಗಳಿಂದ ಬಂದು ಕಾಲೇಜ್ ಎನ್ನುವ ಬಿಂದುವಿನಲ್ಲಿ ಸೇರುತ್ತೇವೆ.

ಕಾಲೇಜಿನ ಮೊದಲ ದಿನ ಕಾಲೇಜಿನ ಗೇಟಿನ ಒಳಗೆ ಎತ್ತ ನೋಡಿದರೂ ವಿದ್ಯಾರ್ಥಿಗಳು ಮಾತ್ರ ಕಾಣುತ್ತಿದ್ದರು ಆದರೆ ಅಲ್ಲೇ ಇದ್ದ ನನಗೆ ಯಾರೊಬ್ಬರ ಪರಿಚಯವಿರಲಿಲ್ಲ . ಅತ್ತಿಗೆ ಯಾರು ನನ್ನ ಹಿಂದಿನಿಂದ ಬಂದು ಕರೆದರು

ನಾನು ತಿರುಗಿ ನೋಡಿದಾಗ ಅದು ನನ್ನ ಹೈಸ್ಕೂಲ್ ಗೆಳೆಯ. ಅವನನ್ನು ನೋಡಿದ ತಕ್ಷಣ ನನಗಂತೂ ಆನೆಬಲ ಬಂದಂತಾಯಿತು .ಹೀಗೆ ಮಾತನಾಡುತ್ತಾ ಮುಂದೆ ಹೋದಾಗ ಅವನು ಮತ್ತು ನಾನು ಪದವಿಯಲ್ಲಿ ಒಂದೇ ವಿಷಯ ಆಯ್ದುಕೊಂಡಿದ್ದೇವೆ ಅಂತ ಗೊತ್ತಾಯ್ತು.

ಇದನ್ನು ಕೇಳಿ ಖುಷಿಪಟ್ಟೆ ಅಷ್ಟಿಷ್ಟಲ್ಲ. ಅಷ್ಟು ದೊಡ್ಡ ಕಾಲೇಜಿನಲ್ಲಿ ನಮ್ಮ ತರಗತಿ ಯಾವುದೆಂದು ಹುಡುಕುವುದೇ ದೊಡ್ಡ ಕೆಲಸವಾಯಿತು, ಅಂತು ಇಂತು ಎರಡನೇ ಮಹಡಿಯಲ್ಲಿದ್ದ ನಮ್ಮ ತರಗತಿಯಾನ್ನು ಹುಡುಕಿದೆವು.

ನಾವು ತರಗತಿಗೆ ಬರುವ ಮೊದಲೇ ಉಳಿದವರೆಲ್ಲ ತರಗತಿಗೆ ಬಂದಿದ್ದರು. ತರಗತಿಯ ಒಳಗೆ ಹೋದ ನನಗೆ ಅಲ್ಲಿ ಕುಳಿತಿದ್ದ ಯಾರೊಬ್ಬರ ಮುಖಪರಿಚಯ ಇರಲಿಲ್ಲ. ಹೇಗಪ್ಪ ಇವರ ಜೊತೆ ಮಾತನಾಡಲಿ, ಎಂದು ಯೋಚಿಸಲಾರಂಭಿಸಿದೆ .

ಆದರೆ ನಾನು ಮಾತನಾಡಿಸುವ ಮೊದಲೇ ಅವರೇ ಹಾಯ್ ಬ್ರೋ ಅಂತ ಮಾತನಾಡಿಸಲು ಆರಂಭಿಸಿದರೆ, ಇನ್ನು ಕೆಲವರು ಏನಪ್ಪಾ ನಿನ್ ಹೆಸರು ಅಂತ ಮಾತನಾಡಲಾರಂಭಿಸಿದರು. ಹೀಗೆ ತರಗತಿಯ ಮೊದಲ ಬೆಂಚಿನಲ್ಲಿ ಕುಳಿತ ನನಗೆ ನನ್ನ ತರಗತಿಯಲ್ಲಿ ಒಬ್ಬ ಛಾಯಾಗ್ರಾಹಕ, ಒಬ್ಬ ಹಾಡುಗಾರ, ಒಬ್ಬ ಯಕ್ಷಗಾನ ಕಲಾವಿದ, ಒಬ್ಬ ಚಿತ್ರಗಾರ, ಒಬ್ಬಳು ನಿರೂಪಕಿ, ಒಬ್ಬ ಸ್ಕ್ರಿಪ್ಟ್ ರೈಟರ್ ಅನ್ನು ಕಂಡೆ.ಇವರ ಜೊತೆಗೆ ಇನ್ನೂ ಹಲವು ಪ್ರತಿಭೆಗಳು ಇದ್ದವು.

ಅವರೆಲ್ಲ ಒಬ್ಬರಿಗಿಂತ ಒಬ್ಬರು ಮೇಲು ಹಾಗೆ ತರಗತಿಯಲ್ಲಿ ಎಲ್ಲರ ಪರಿಚಯವಾಯಿತು ನಂತರದಲ್ಲಿ ವಾಟ್ಸಪ್ ಗ್ರೂಪ್ ಆರಂಭವಾಯಿತು, ವಾಟ್ಸಪ್ ಗ್ರೂಪ್ ಆರಂಭವಾದದ್ದೇ ತಡ ಅಲ್ಲಿಂದ ನಂಬರ್ ತೆಗೆದುಕೊಂಡು ಮೆಸೇಜ್ ಮಾಡಿದ್ದೆ ಮಾಡಿದ್ದು.

ತರಗತಿಯಲ್ಲಿ ಶಿಕ್ಷಕರು ಇಲ್ಲದಿದ್ದಾಗ ಬೆಂಚು ಡೆಸ್ಕುಗಳಮೇಲೆ ಕುಳಿತು ಯಾವುದಾದರೂ ಒಂದು ವಿಷಯದ ಬಗ್ಗೆ ಮಾತನಾಡುತ್ತಾ ಕಾಲಹರಣ ಮಾಡುತ್ತಾ ಅದೆಷ್ಟೋ ಬಾರಿ ಮಾತನಾಡುವಾಗ ಬೊಬ್ಬೆ ಹಾಕಿ ಲೆಕ್ಚರ್ ಕೈಯಿಂದ ಬೈಗಳು ತಿಂದು ಇದೆ.ಹಾಗೆ ಬಹಳಷ್ಟು ಖುಷಿ, ಒಂದಿಷ್ಟು ಜಗಳ ಮಾಡುತ್ತಾ ಕ್ಯಾಂಟೀನ್ ನಲ್ಲಿ ಕೂತು ಪಟ್ಟಾಂಗ ಹೊಡೆಯುತ್ತಾ, ತುಂಬಾ ಮಜಾ ಮಾಡುತ್ತೇವೆ.

ಮಧ್ಯಾಹ್ನದ ವೇಳೆ ಊಟ ಮುಗಿಸಿ ಬಂದು ಕಾಲೇಜಿನ ಕಾರಿಡಾರ್ ನಲ್ಲಿ ನಿಂತು ಮಾತನಾಡುತ್ತಾ, ಆಚೆ ಈಚೆ ಹೋಗುವ ಹುಡುಗಿಯರ ಬಗ್ಗೆ ಕಮೆಂಟ್ ಹೊಡೆಯುತ್ತಾ ಅದೇ ಸಂದರ್ಭದಲ್ಲಿ ಕಾಲೇಜಿನಲ್ಲಿನ ಕೆಲವು ಪ್ರೇಮ ಪಕ್ಷಿಗಳನ್ನು ನೋಡುತ್ತಾ ಅವರ ಚಟುವಟಿಕೆಯನ್ನು ಗಮನಿಸುತ್ತಾ, ನಗುತ್ತ ಖುಷಿಪಡುತ್ತೇವೆ. ಗೆಳೆಯರ ಜೊತೆಗೆ ಸಂತೋಷದ ಕಡಲಲ್ಲಿ ತೇಲಾಡುವ ನಮಗೆ ಶಿಕ್ಷಕರು ಕೊಡುವ ಅಸೈನ್ಮೆಂಟ್ ಗಳು ಪರೀಕ್ಷೆಗಳು ಕಬ್ಬಿಣದ ಕಡಲೆಯಾಗಿದೆ.

ಹೀಗೆ ಗೆಳೆಯರ ಜೊತೆ ಆಟವಾಡುತ್ತಾ ನಮ್ಮೆಲ್ಲ ವಿಷಯಗಳನ್ನು ಗೆಳೆಯರ ಜೊತೆ ಹಂಚಿಕೊಳ್ಳುತ್ತೇವೆ. ಗೆಳೆಯರು ಕೇವಲ ಮೋಜು ಮಸ್ತಿಗೆ ಮಾತ್ರ ನಮ್ಮ ಜೊತೆಗಿರದೆ ನಮಗೆ ಏನೇ ಸಮಸ್ಯೆಯಾದರೂ ಅವರಿಂದ ಆಗುವ ಸಹಾಯ ಮಾಡಿ ನಮ್ಮನ್ನು ಸಮಸ್ಯೆಯಿಂದ ಪಾರು ಮಾಡುತ್ತಾರೆ. ಹಾಗಾಗಿ ಅರಮನೆ ಕಟ್ಟುವ ಸಿರಿತನ ಇಲ್ಲದಿದ್ದರೇನಂತೆ ಕಣ್ಣೀರು ಒರೆಸುವ ಗೆಳೆತನ ಇದ್ದರೆ ಸಾಕು.

ಲೇಖನ- ಸಂದೀಪ್ .ಎಸ್. ಮಂಚಿಕಟ್ಟೆ ,ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು

1 Comment
  1. Lonnie says

    Wow, incredible blog layout! How lengthy have you been running a blog for?
    you made blogging glance easy. The full glance of your web site
    is wonderful, let alone the content material! You can see similar here
    sklep online

Leave A Reply

Your email address will not be published.