Day: February 22, 2020

ರಿಕ್ಷಾ ಪಲ್ಟಿ ಅಪಘಾತ ದಲ್ಲಿ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ, ಮಗು ಸಾವು

ಬೆಳ್ತಂಗಡಿ : ಇಂದಬೆಟ್ಟು ಗ್ರಾಪಂ ವ್ಯಾಪ್ತಿಯ ಪಡಂಬಿಲ ಪಾಲೆದಬೊಟ್ಟು ಎಂಬಲ್ಲಿ ಅಪೆ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ 25 ಅಡಿ ಆಳಕ್ಕೆ ಉರುಳಿಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟಿದ್ದ ಬೆನ್ನಿಗೇ ಇದೇ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿಯ ಮಗು ನಿನ್ನೆ ಮೃತಪಟ್ಟಿದ್ದಾರೆ . ಸದ್ರಿ ಬಾಣಂತಿ ಮಹಿಳೆ ಇಂದು ಮೃತಪಡುವ ಮೂಲಕ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 4 ಕ್ಕೇರಿದೆ. ಫೆ.17 ರಂದು ನಡೆದಿದ್ದ ಘಟನೆಯಲ್ಲಿ ನಡ ಗ್ರಾಮದ ಕೊಲ್ಲೊಟ್ಟು ನಿವಾಸಿ ದಾವೂದ್ ಸಾಹೇಬ್ ಅವರ …

ರಿಕ್ಷಾ ಪಲ್ಟಿ ಅಪಘಾತ ದಲ್ಲಿ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ, ಮಗು ಸಾವು Read More »

ಮುಕ್ಕೂರು|ಯುವ ಸೇನೆಯಿಂದ ಶ್ರಮದಾನ

ಸುಳ್ಯ: ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಮೊಗೇರ ದೈವಸ್ಥಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಸಾನಿಧ್ಯ ಕ್ಷೇತ್ರವು ಒಂದು ಶತಮಾನದ ಇತಿಹಾಸ ಹೊಂದಿದ್ದು ಅತ್ಯಂತ ಕಾರಣಿಕ ಕ್ಷೇತ್ರವಾಗಿದೆ. ಪ್ರಸ್ತುತ ಈ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಅಂತಿಮ ಹಂತದಲ್ಲಿದ್ದು ಎಪ್ರಿಲ್‌ನಲ್ಲಿ ಪ್ರತಿಷ್ಟಾದಿ ಕಾರ್ಯ ನಡೆಯಲಿದೆ. ಇದರ ಜೀರ್ಣೋದ್ಧಾರ ಸಿದ್ದತಾ ಕೆಲಸ ಕಾರ್ಯಗಳು ನಡೆಯುತಿದ್ದು ಫೆ.22ರಂದು ಯುವ ಸೇನೆ ಮುಕ್ಕೂರು ಇದರ ವತಿಯಿಂದ ಶ್ರಮದಾನ ನಡೆಯಿತು.

ಕುದ್ಮಾರು: ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ

ಬೆಳ್ಳಾರೆ: ದ.ಕ.ಜಿಲ್ಲಾ ಪೊಲೀಸ್, ವೃತ ನಿರೀಕ್ಷಕರ ಕಛೇರಿ ಸುಳ್ಯ, ಬೆಳ್ಳಾರೆ ಪೊಲೀಸ್ ಠಾಣೆ ಇದರ ವತಿಯಿಂದ ಬೆಳಂದೂರು ಗ್ರಾ.ಪಂ.ವ್ಯಾಪ್ತಿಯ ಕುದ್ಮಾರು ಶಾಲೆಯಲ್ಲಿ ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ,ಅವರು ಎಲ್ಲರೂ ರಾಷ್ಟ್ರೀಯ ವಿಚಾರಗಳ ಕಡೆಗೆ ಗಮನಹರಿಸಿ ನಾವೆಲ್ಲರೂ ಭಾರತೀಯರು ಎಂಬ ಭಾವನೆಯಿಂದ ಜೀವಿಸಬೇಕು.ಆ ಧರ್ಮ ಈ ಧರ್ಮವೆಂದು ಪರಸ್ಪರ ಬೇಧಬಾವ ಮಾಡಬಾರದು.ಸರ್ವ ಜನಾಂಗದ ಶಾಂತಿಯ ತೋಟದಂತಿರುವ ನಮ್ಮ ದೇಶದ ಘನತೆ ಎತ್ತಿ ಹಿಡಿಯಬೇಕು ಎಂದರು. ಬೆಳ್ಳಾರೆ ಪೊಲಿಸ್ ಠಾಣಾ ಉಪನಿರೀಕ್ಷಕ …

ಕುದ್ಮಾರು: ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ Read More »

ವಿಟ್ಲದಲ್ಲಿ ವಿರಾಟ್ ಹಿಂದೂ ಸಮಾವೇಶ: ಸಾಧ್ವಿ ಪ್ರಜ್ಞಾ ಸಿಂಗ್ ಅವರಿಗೆ ಆಮಂತ್ರಣ

ಪುತ್ತೂರು: ವಿಟ್ಲದಲ್ಲಿ ಮಾ.15ರಂದು ನಡೆಯಲಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಭೋಪಾಲ್ ನಲ್ಲಿ ಅವರ ಕಚೇರಿಗೆ ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿದರು. ಆಮಂತ್ರಣವನ್ನು ಸಂತೋಷದಿಂದ ಸ್ವೀಕರಿಸಿದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಲು ವಿಟ್ಲ ಖಂಡದ ವತಿಯಿಂದ ವಿಟ್ಲ ಬಜರಂಗದಳದ ಸಂಚಾಲಕರಾದ ಅಕ್ಷಯ್ ರಜಪೂತ್ ಕಲ್ಲಡ್ಕ ಅವರೊಂದಿಗೆ ಗಣೇಶ ಅಡ್ಯನಡ್ಕ …

ವಿಟ್ಲದಲ್ಲಿ ವಿರಾಟ್ ಹಿಂದೂ ಸಮಾವೇಶ: ಸಾಧ್ವಿ ಪ್ರಜ್ಞಾ ಸಿಂಗ್ ಅವರಿಗೆ ಆಮಂತ್ರಣ Read More »

ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

ಸುಳ್ಯ: ಬೈಕ್ ನಲ್ಲಿ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯದಿಂದ ವರದಿಯಾಗಿದೆ. ಫೆ.19 ರಂದು ಗುತ್ತಿಗಾರಿನಲ್ಲಿ ಬೈಕ್ ನಲ್ಲಿ ಬಿದ್ದು ತಲೆಗೆ ಗಂಬೀರ ಗಾಯವಾಗಿದ್ದ ಅಮರಮೂಡ್ನೂರು ಗ್ರಾಮದ ನಿವಾಸಿ ಆನಂದ ಬೊಮ್ಮಾರು, ಪೊನ್ನೂರು ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎನ್ನಲಾಗಿದೆ.

ಮುರುಳ್ಯ ಕುಕ್ಕಟ್ಟೆ | ರಸ್ತೆಗೆ ಅಡ್ಡ ಬಂದ ನಾಯಿ | ಬೈಕ್ ಪಲ್ಟಿಯಾಗಿ ದಂಪತಿಗೆ ಗಾಯ

ಸುಳ್ಯ: ನಿಂತಿಕಲ್ಲು-ಕಾಣಿಯೂರು-ಪುತ್ತೂರು ರಸ್ತೆಯ ಎಣ್ಮೂರು ಗ್ರಾಮದ ಮುರುಳ್ಯ ಸಮಹಾದಿ ಸಮೀಪದ ಕುಕ್ಕಟೆ ಎಂಬಲ್ಲಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ನಾಯಿಗೆ ಡಿಕ್ಕಿ ಹೊಡೆದು ಬೈಕ್ ನಲ್ಲಿ ಹೋಗುತ್ತಿದ್ದ ದಂಪತಿಗೆ ಗಾಯಗೊಂಡ ಘಟನೆ ಫೆ.22ರಂದು ಸಂಜೆ ನಡೆದಿದೆ. ಐನೆಕಿದುನಲ್ಲಿ ತಮ್ಮ ತೋಟದ ಕೆಲಸ ಮುಗಿಸಿ ಪುತ್ತೂರಿನ ಮನೆಗೆ ಹೋಗುತ್ತಿದ್ದ ಜಯಂತ್-ಪದ್ಮಾ ದಂಪತಿಗಳ ಬೈಕ್ ನಾಯಿ ರಸ್ತೆಗೆ ಅಡ್ಡ ಬಂದ ಪಲ್ಟಿಯಾಗಿ ಗಾಯವಾಗಿದೆ.

ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಹಲವು ಪ್ರಕರಣಗಳ ಆರೋಪಿಗಳು ಪೊಲೀಸ್ ಬೀಸಿದ ಬಲೆಗೆ

ಬೆಳ್ತಂಗಡಿ ವೃತ್ತ ವ್ಯಾಪ್ತಿಯ ವೇಣೂರು ಮತ್ತು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣಗಳು ದಾಖಲಾಗುತ್ತಿದ್ದವು. ಮೇಲಾಧಿಕಾರಿಗಳ ಆದೇಶದಂತೆ ಇದರ ಪತ್ತೆ ಬಗ್ಗೆ ತಂಡವನ್ನು ರಚಿಸಿ,ತನಿಖಾ ಸಮಯ ದೊರೆತ ಖಚಿತ ಮಾಹಿತಿ ಮೇರೆಗೆ ಶ್ರೀ ಸಂದೇಶ್ ಪಿ.ಜಿ ಸಿಪಿಐ ಬೆಳ್ತಂಗಡಿ ಮತ್ತು ತಂಡ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಪೊಟ್ಟುಕೆರೆ ಎಂಬಲ್ಲಿ ಮಾರುತಿ 800 ಕಾರು ಕೆಎ.19.ಎನ್.8397 ರನ್ನು ತಪಾಸಣೆ ನಡೆಸಿದಾಗ ಕಾರಿನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಿದ್ದರು. ಕಾರಿನಲ್ಲಿ ಒಟ್ಟುಜನ ಇದ್ದು, …

ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಹಲವು ಪ್ರಕರಣಗಳ ಆರೋಪಿಗಳು ಪೊಲೀಸ್ ಬೀಸಿದ ಬಲೆಗೆ Read More »

‘ಆಯುರ್ವೇದಿಕ್ ಡ್ರಿಂಕ್ಸ್’ ನೀರಾ ಬೆಂಗಳೂರಿಗರ ಚಪಲದ ಬಾಯಿಯ ಜನಕ್ಕೆ ಮುದ ನೀಡಲಿದೆ : ಬಡವರ ಬಾಜೆಲ್ ಗೆ ಇನ್ನು ಸಖತ್ ಡಿಮಾಂಡ್ !

ಒಂದು ಕಡೆ ಕರಾವಳಿಯ ಕಂಬಳದ ಕಂಪು ದೇಶ-ವಿದೇಶಗಳಲ್ಲಿ ಹರಡುತ್ತಿದ್ದರೆ, ಮತ್ತೊಂದು ಕಡೆ ನಮ್ಮ ಕರಾವಳಿ ಮತ್ತು ಮಲೆನಾಡಿನ ಬಡವರ ಬಾಜೆಲ್,  ಬೆಂಗಳೂರಿನ ಚಪಲದ ಬಾಯಿಯ, ಸದಾ ದುಗುಡದಿಂದ  ಓಡಾಡುವ ಜನರ ಮನಸ್ಸಿಗೆ ಒಂದಿಷ್ಟು ಮುದನೀಡಲು ಬರುತ್ತಿದೆ. ತೆಂಗು ಬೆಳೆಯ ಪರ್ಯಾಯ ಉತ್ಪನ್ನವಾದ, ಈ  ‘ಆಯುರ್ವೇದಿಕ್ ಡ್ರಿಂಕ್ಸ್ ‘ ನೀರಾ ( ಅಥವಾ ಶೇಂದಿಯು ) ಒಂದು ಕಾಲದಲ್ಲಿ ಇತರ ಆಲ್ಕೊಹಾಲಿಕ್ ಮಾದರಿಯ ತರವೇ ರೆಗ್ಯುಲೇಶನ್ ಗೆ ಒಳಪಟ್ಟಿತ್ತು. ಆದರೆ ಸಾರೆಕೊಪ್ಪ ಬಂಗಾರಪ್ಪನವರು ನೀರಾವನ್ನು ಇತರ ಮಾದರಿಯ ಡ್ರಿಂಕ್ಸ್ ಗಳಿಂದ ಪ್ರತ್ಯೇಕಿಸಿ, …

‘ಆಯುರ್ವೇದಿಕ್ ಡ್ರಿಂಕ್ಸ್’ ನೀರಾ ಬೆಂಗಳೂರಿಗರ ಚಪಲದ ಬಾಯಿಯ ಜನಕ್ಕೆ ಮುದ ನೀಡಲಿದೆ : ಬಡವರ ಬಾಜೆಲ್ ಗೆ ಇನ್ನು ಸಖತ್ ಡಿಮಾಂಡ್ ! Read More »

ಪುತ್ತೂರು ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ : ರಾಷ್ಟ್ರ ದ್ರೋಹಿಗಳ ವಿರುದ್ಧ ಗುಡುಗಿದ ಕಟೀಲ್

ಪುತ್ತೂರು ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೂತನ ಪದಾಧಿಕಾರಿಗಳಿಗೆ ಪಕ್ಷದ ಸಂವಿಧಾನ ಹಾಗೂ ನೀತಿ ,ನಿಯಮಗಳ ಕುರಿತು ಮಾಹಿತಿ ನೀಡಿದರು. ಪುತ್ತೂರಿನ ಸಾಲ್ಮರದ ಕೋಟೇಶ ಹಾಲ್ನಲ್ಲಿ ನಡೆದ ಪದಗ್ರಹಣ ಸಮಾರಂಭಕ್ಕೆ ರಾಜ್ಯ ಬಿಜೆಪಿಯ ಅಧ್ಯಕ್ಷರು ಮಂಗಳೂರಿನ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಇವರು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಹಾಜರಿದ್ದರು. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಉತ್ತಮ …

ಪುತ್ತೂರು ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ : ರಾಷ್ಟ್ರ ದ್ರೋಹಿಗಳ ವಿರುದ್ಧ ಗುಡುಗಿದ ಕಟೀಲ್ Read More »

ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿಗೆ ECOZENITH ಪ್ರಶಸ್ತಿ

ಸವಣೂರು ; ಸೈಂಟ್ ಫಿಲೋಮಿನಾ ಕಾಲೇಜು, ಪುತ್ತೂರಿನಲ್ಲಿ ನಡೆದ ಅಂತರ್‌ಕಾಲೇಜು ಮಟ್ಟದ    Economics Fest Mock Press ನಲ್ಲಿ ಪ್ರಥಮ ಸ್ಥಾನವನ್ನು     ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ. ವಿದ್ಯಾರ್ಥಿಯಾದ ಸಂಪ್ರೀತ್ ಬಿ ಎಸ್ ಪಡೆದಿರುತ್ತಾರೆ. ಇವರನ್ನು ಸಂಸ್ಥೆಯ ಸಂಚಾಲಕರಾದ ಶ್ರೀಯುತ ಕೆ ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿಯಾದ ಇಂಜಿನಿಯರ್ ಅಶ್ವಿನ್ ಎಲ್ ಶೆಟ್ಟಿ, ಹಾಗೂ ಪ್ರಾಂಶುಪಾಲರಾದ ಶ್ರೀಮತಿ ರಾಜಲಕ್ಷ್ಮೀ ಎಸ್ ರೈ ಅಭಿನಂದಿಸಿರುತ್ತಾರೆ.

error: Content is protected !!
Scroll to Top