ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಹಲವು ಪ್ರಕರಣಗಳ ಆರೋಪಿಗಳು ಪೊಲೀಸ್ ಬೀಸಿದ ಬಲೆಗೆ

ಬೆಳ್ತಂಗಡಿ ವೃತ್ತ ವ್ಯಾಪ್ತಿಯ ವೇಣೂರು ಮತ್ತು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣಗಳು ದಾಖಲಾಗುತ್ತಿದ್ದವು.

ಮೇಲಾಧಿಕಾರಿಗಳ ಆದೇಶದಂತೆ ಇದರ ಪತ್ತೆ ಬಗ್ಗೆ ತಂಡವನ್ನು ರಚಿಸಿ,ತನಿಖಾ ಸಮಯ ದೊರೆತ ಖಚಿತ ಮಾಹಿತಿ ಮೇರೆಗೆ ಶ್ರೀ ಸಂದೇಶ್ ಪಿ.ಜಿ ಸಿಪಿಐ ಬೆಳ್ತಂಗಡಿ ಮತ್ತು ತಂಡ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಪೊಟ್ಟುಕೆರೆ ಎಂಬಲ್ಲಿ ಮಾರುತಿ 800 ಕಾರು ಕೆಎ.19.ಎನ್.8397 ರನ್ನು ತಪಾಸಣೆ ನಡೆಸಿದಾಗ ಕಾರಿನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಿದ್ದರು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕಾರಿನಲ್ಲಿ ಒಟ್ಟುಜನ ಇದ್ದು, ಹೆಸರು ವಿಳಾಸ ಕೇಳಿದಾಗ 1) ಸತೀಶ ಅಲಿಯಾಸ್ ಸ್ಕಾರ್ಪಿಯೋ ಸತೀಶ, ಪ್ರಾಯ 33 ವರ್ಷ, ತಂದೆ: ದಿ. ಶಾಜಿ, ವಾಸ: ಶಾಂತಿ ನಿವಾಸ, ದೇವಿಗುಡಿ ಹತ್ತಿರ, ಮುಂಡಾಜೆ ಗ್ರಾಮ, ಬೆಳ್ತಂಗಡಿ ತಾಲೂಕು 2) ರವಿ ಅಲಿಯಾಸ್ ಪುಟ್ಟು ರವಿ ಅಲಿಯಾಸ್ ಜೀತು, ಪ್ರಾಯ 29 ವರ್ಷ ತಂದೆ ಅಣ್ಣು ಪೂಜಾರಿ, ವಾಸ ವಿ.ಕೆ. ಜೈನ್ ನಿವಾಸದ ಬಳಿ, ಮುಕ್ರುಂಪಾಡಿ, ಅರ್ಯಾಪು ಗ್ರಾಮ, ದರ್ಬೆ ಅಂಚೆ, ಪುತ್ತೂರು ತಾಲೂಕು. 3) ಹರೀಶ್ ಪೂಜಾರಿ, ಪ್ರಾಯ 29 ವರ್ಷ, ತಂದೆ ವಾಸು ಪೂಜಾರಿ, ವಾಸ ಪಾಲ್ದನೆ ಮನೆ, ನೀರುಮಾರ್ಗ, ಕುಡುಪು ಗ್ರಾಮ, ಮಂಗಳೂರು ತಾಲೂಕು ಇವರುಗಳನ್ನು ಬಂಧಿಸಿದ್ದಾರೆ.

l

ಇವರುಗಳು ಕಳವು ಪ್ರಕರಣಗಳಲ್ಲಿ ಹಳೆ ಆರೋಪಿಗಳಾಗಿದ್ದು, ಇವರುಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆ ತಂದು, ತೀರ್ವವಾಗಿ ಬೆಂಡೆತ್ತಿದ್ದಾರೆ. ಆಗ ಅವರುಗಳು ತಾಲೂಕಿನ ತೆಂಕಕಾರಂದೂರು, ಕಾಪಿನಡ್ಕ , ಗಾಂದೀ ನಗರ, ನಿಡ್ಲೆಯ ಬೂಡುಜಾಲು ಮತ್ತು ಚಿಬಿದ್ರೆ , ಹೀಗೆ ಒಟ್ಟು ಐದು ಮನೆಗಳ ಕಳ್ಳತನ ಮಾಡಿದ್ದು, ಅಲ್ಲದೇ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಒಂದು ಲ್ಯಾಪ್ ಟ್ಯಾಪ್ ಮತ್ತು ಒಂದು ಮೊಬೈಲ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.

ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಮಣಿಕಂಠ ಅಲಿಯಾಸ್ ಬೀಡಿ ಮಣಿಕಂಠ ತಲೆಮರೆಸಿಕೊಂಡಿರುತ್ತಾನೆ.

ಸದ್ರಿ ಆರೋಪಿಗಳ ವಿರುದ್ದ ಈಗಾಗಲೇ ಪುತ್ತೂರು, ವಿಟ್ಲ, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ನಗರ ಹಾಗೂ ಕಾಸರಗೋಡು, ಭಟ್ಕಳ ಮುಂತಾದ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಹಳೆ ಆರೋಪಿಗಳಾಗಿರುತ್ತಾರೆ.

ಮೇಲಿನ ಆರೋಪಿತರುಗಳಿಂದ , ಎರಡು ಕರಿಮಣೆ ಸರಗಳು, ಒಂದು ಹವಳದ ಕನಕ ಮಾಲೆ ಸರ, ಒಂದು ಸರ, ಎರಡು ಜೊತೆ ಜುಮ್ಕಿ ಸಹಿತ ಬೆಂಡೋಲೆಗಳು, ಒಂದು ಜೊತೆ ಜುಮ್ಕಿ, ಏಳು ಉಂಗುರಗಳು, ಈ ಚಿನ್ನದ ಒಟ್ಟು ತೂಕ 115 ಗ್ರಾಂ ಆಗಿದ್ದು, ಅಂದಾಜು ಮೌಲ್ಯ 4.50.000 ರೂಪಾಯಿಯಾಗಿದ್ದು, ಅಲ್ಲದೇ ಎರಡು ಜೊತೆ ಬೆಳ್ಳಿಯ ಕಾಲು ಚೈನ್ಗಳು , ಒಂದು ಬೆಳ್ಳಿಯ ಚೈನ್ ಇವುಗಳ ಒಟ್ಟು ತೂಕ 61 ಗ್ರಾಂ ಆಗಿದ್ದು, ಇದರ ಅಂದಾಜು ಮೌಲ್ಯ 4000 ರೂಪಾಯಿ ಆಗಿದೆ.

ಲ್ಯಾಪ್ ಟಾಪ್ ಮತ್ತು ಮೊಬೈಲ್ ಅಂದಾಜು ಮೌಲ್ಯ 21,000 ರೂಪಾಯಿ ಆಗಿದ್ದು, ಅಲ್ಲದೇ ಕೃತ್ಯಕ್ಕೆ ಉಪಯೋಗಿಸಿದ ಹೋಂಡಾ ಕಂಪೆನಿಯ ಟ್ವಿಸ್ಟರ್ ಬೈಕ್ ಕೆಎ 21 ಎಲ್ 1137, ಮತ್ತು ಸುಜುಕಿ ಕಂಪೆನಿಯ ಅಪ್ಪಾಚಿ ಬೈಕ್ ಕೆಎ 20 ಇಸಿ 9378 ಹಾಗೂ ಮಾರುತಿ 800 ಕಾರು, ನಾಲ್ಕು ಮೊಬೈಲ್ ಗಳನ್ನು ವಶಪಡಿಕೊಳ್ಳಲಾಗಿದೆ.

ಇವುಗಳ ಒಟ್ಟು ಮೌಲ್ಯ 75000 ರೂಪಾಯಿಗಳಾಗಿದ್ದು, ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 5,50,000 ಆಗಿರುತ್ತದೆ.

ಸದ್ರಿ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ದ.ಕ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀ ಬಿ.ಎಂ.ಲಕ್ಷ್ಮೀಪ್ರಸಾದ್ ಐ.ಪಿ.ಎಸ್‌ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಡಾ|ವಿಕ್ರಮ್‌ ಅಮಾಟೆ ರವರ ಮಾರ್ಗದರ್ಶನದಂತೆ, ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವೆಲೈಂಟೈನ್ ಡಿ ಸೋಜಾ ಮತ್ತು ಬೆರಳು ಮುದ್ರೆ ವಿಭಾಗದ ಉಪಾಧೀಕ್ಷಕರಾದ ಶ್ರೀ ಎ.ಸಿ ಗೌರೀಶ್ ರವರ ನಿರ್ದೇಶನದಂತೆ, ಪ್ರಕರಣದ ತನಿಖಾಧಿಕಾರಿ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಸಂದೇಶ್‌ ಪಿ.ಜಿ , ಗುಪ್ತ ವಾರ್ತೆ ವಿಭಾಗದ ನಿರೀಕ್ಷಕರಾದ ಶ್ರೀ ರವಿ ಬಿ.ಎಸ್ ಮತ್ತು ವೇಣೂರು ಪೊಲೀಸ್ ಠಾಣಾ ಪಿಎಸ್‌‌ಐ ಶ್ರೀ ಲೋಲಾಕ್ಷ, ಪತ್ತೆ ತಂಡದಲ್ಲಿ ದೇವಪ್ಪ .ಎಂಕೆ, ಬೆನ್ನಿಚ್ಚನ್, ರಾಜೇಶ್,ಎನ್ ಹರೀಶ್ ನಾಯ್ಕ , ಪ್ರಮೋದ್ ನಾಯ್ಕ, ಇಬ್ರಾಹಿಂ ಗರ್ಡಾಡಿ , ಪ್ರಶಾಂತ್ ಜೊತೆಗೆ ಬೆಳ್ತಂಗಡಿ ವೃತ್ತ ಕಛೇರಿಯ ವೆಂಕಟೇಶ್ ನಾಯ್ಕ, ಮಹಮ್ಮದ್ ಆಸೀಫ್ ಹಾಗೂ ಗಣಕ ಯಂತ್ರ ವಿಭಾಗದ ದಿವಾಕರ , ಸಂಪತ್ ಭಾಗವಹಿಸಿರುತ್ತಾರೆ.

error: Content is protected !!
Scroll to Top
%d bloggers like this: