ಕುದ್ಮಾರು: ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ

ಬೆಳ್ಳಾರೆ: ದ.ಕ.ಜಿಲ್ಲಾ ಪೊಲೀಸ್, ವೃತ ನಿರೀಕ್ಷಕರ ಕಛೇರಿ ಸುಳ್ಯ, ಬೆಳ್ಳಾರೆ ಪೊಲೀಸ್ ಠಾಣೆ ಇದರ ವತಿಯಿಂದ ಬೆಳಂದೂರು ಗ್ರಾ.ಪಂ.ವ್ಯಾಪ್ತಿಯ ಕುದ್ಮಾರು ಶಾಲೆಯಲ್ಲಿ ಶಾಂತಿ ಸಭೆ ನಡೆಯಿತು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸಭೆಯಲ್ಲಿ ಮಾತನಾಡಿದ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ,ಅವರು ಎಲ್ಲರೂ ರಾಷ್ಟ್ರೀಯ ವಿಚಾರಗಳ ಕಡೆಗೆ ಗಮನಹರಿಸಿ ನಾವೆಲ್ಲರೂ ಭಾರತೀಯರು ಎಂಬ ಭಾವನೆಯಿಂದ ಜೀವಿಸಬೇಕು.ಆ ಧರ್ಮ ಈ ಧರ್ಮವೆಂದು ಪರಸ್ಪರ ಬೇಧಬಾವ ಮಾಡಬಾರದು.ಸರ್ವ ಜನಾಂಗದ ಶಾಂತಿಯ ತೋಟದಂತಿರುವ ನಮ್ಮ ದೇಶದ ಘನತೆ ಎತ್ತಿ ಹಿಡಿಯಬೇಕು ಎಂದರು.

ಬೆಳ್ಳಾರೆ ಪೊಲಿಸ್ ಠಾಣಾ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ,ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಎಡೆ ಮಾಡಿಕೊಡಬಾರದು.ಪರಸ್ಪರ ಶಾಂತಿ ಸೌಹಾರ್ಧತೆಯಿಂದ ಜೀವಿಸಬೇಕು.ಅಶಾಂತಿಗೆ ಕಾರಣರಾಗುವವರ ವಿರುದ್ದ ಕಾನೂನು ಕ್ರಮ ಜರಗಿಸಲಾಗುವುದು ಎಂದರು.

ತಾ.ಪಂ.ಉಪಾಧ್ಯಕ್ಷೆ ಲಲಿತಾ ಈಶ್ವರ್,ಕೂರ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಕೂರ,ಸ್ಕಂದ ಶ್ರೀ ಯುವಕ‌ ಮಂಡಲದ ಅಧ್ಯಕ್ಷ ದೇವರಾಜ ನೂಜಿ,ತಿರಂಗಾ‌ ವಾರಿಯರ್ ಅಧ್ಯಕ್ಷ ಲೋಹಿತ್ ಮೊದಲಾದವರಿದ್ದರು.

Leave a Reply

error: Content is protected !!
Scroll to Top
%d bloggers like this: