ಸವಣೂರು | ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಸಮಾರೋಪ

ಸವಣೂರು:ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ೧೦ ಪ್ರೌಢಶಾಲೆಗಳಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಘಟಕ ಆರಂಭಿಸಲಾಗುವುದು ಎಂದು ಕೆ.ಎಸ್.ಆರ್.ಪಿ.ಡಿವೈಎಸ್ಪಿ ಶರತ್ ಕುಮಾರ್ ಹೇಳಿದರು.

 

ಅವರು ಫೆ.19ರಂದು ಸವಣೂರು ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕರ್ನಾಟಕ ರಾಜ್ಯ ಸರಕಾರ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಇದರ ವತಿಯಿಂದ ನಡೆದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದಲ್ಲಿ ಅಪರಾಧ ತಡೆಗಟ್ಟುವಿಕೆ ಮತ್ತು ನಿಯಂತ್ರಣ,ಸಮುದಾಯ ಪೊಲೀಸಿಂಗ್ ಮತ್ತು ವಿದ್ಯಾರ್ಥಿಗಳು,ರಸ್ತೆ ಸುರಕ್ಷತೆ ಮತ್ತು ಸಂಚಾರ ಅರಿವು,ಸಾಮಾಜಿಕ ದುಷ್ಟತೆ ವಿರುದ್ದ ಹೋರಾಟ,ಮಹಿಳಾ ಮತ್ತು ಮಕ್ಕಳ ಸುರಕ್ಷತೆ,ಭ್ರಷ್ಠಾಚಾರದ ವಿರುದ್ದ ಹೋರಾಟ,ವಿಪತ್ತು ನಿರ್ವಹಣೆ,ಮೌಲ್ಯಗಳು ಮತ್ತು ನೈತಿಕತೆ,ಸಹಿಷ್ಣುತೆ,ತಾಳ್ಮೆ ಅನುಭೂತಿ ಸಹಾನೂಭೂತಿ ಸೇರಿದಂತೆ ಇತರ ೨೦ ಅಂಶಗಳ ಅಧ್ಯಾಯವಿದ್ದು ವಿದ್ಯಾರ್ಥಿಗಳನ್ನು  ಸಶಕ್ತ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಬಳಸಿಕೊಳ್ಳುವಂತಾಗಲು ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.

ಬೆಳ್ಳಾರೆ ಠಾಣಾ ಪಿಎಸೈ ಆಂಜನೇಯ ರೆಡ್ಡಿ ಮಾತನಾಡಿ,ವಿದ್ಯಾರ್ಥಿಗಳು ಶಿಕ್ಷಕರ ಬಗ್ಗೆ ಹಾಗೂ ಹೆತ್ತವರ,ಹಿರಿಯರ ಬಗ್ಗೆ ಗೌರವ ಹೊಂದಿರಬೇಕು.ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಜನೆಗೆ ಹೆಚ್ಚು ಒತ್ತು ನೀಡಬೇಕು.ಶೈಕ್ಷಣಿಕ ಚಟುವಟಿಕೆಯ ಜತೆಗೆ ಮಾನವೀಯ ಮೌಲ್ಯಗಳು,ದೇಶದ ಸುರಕ್ಷತೆ,ಪರಿಸರ ಸಂರಕ್ಷಣೆಯ ಕಾಳಜಿ ವಹಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸವಣೂರು ಕಾಲೇಜಿನ ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ ಅವರು,ವಿದ್ಯಾರ್ಥಿ ಜೀವನದಲ್ಲಿ ದೊರಕುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುಂದುವರಿದಾಗ ಯಶಸ್ಸು ದೊರಕಲು ಸಾಧ್ಯ ಎಂದರು.

ಎಸ್.ಪಿ.ಸಿ.ಯ ತರಬೇತುದಾರ ಬಿನ್ನಿ ಕೆ.ಸಿ ಮಾತನಾಡಿ,ಸಮಾಜದಲ್ಲಿ ಮಕ್ಕಳನ್ನು ಪ್ರಜ್ಞಾವಂತ ನಾಗರಿಕನಾಗಿ ರೂಪುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್( ಎಸ್.ಪಿ.ಸಿ) ಯೋಜನೆಯನ್ನು ನಡೆಸಲಾಗುತ್ತಿದೆ.ಇದರಿಂದಾಗಿ ಮಕ್ಕಳಲ್ಲಿ ದೈರ್ಯ ,ಸಾಹಸ,ಸನ್ನಡತೆ ಸೇರಿದಂತೆ ಕಾನೂನಿನ ಅರಿವನ್ನು ಮೂಡಿಸಲಾಗುತ್ತದೆ.ಸವಣೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ತರಬೇತಿಯನ್ನು ಉತ್ತಮವಾಗಿ ಪಡೆದುಕೊಂಡಿದ್ದಾರೆ ಎಂದರು.

ಸವಣೂರು ಸಿಆರ್‌ಪಿ ವೆಂಕಟೇಶ ಅನಂತಾಡಿ,ಪುತ್ತೂರು ಕೊಂಬೆಟ್ಟು  ಪ್ರೌಢಶಾಲೆಯ ಎಸ್.ಪಿ.ಸಿಯ ನೋಡಲ್ ಅಽಕಾರಿ ಗೀತಾಮಣಿ,ಸವಣೂರು ಪ.ಪೂ.ಕಾಲೇಜಿನ ಪ್ರಾಚಾರ್ಯೆ ಪದ್ಮಾವತಿ ಮಾತನಾಡಿದರು.ಸವಣೂರು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಸ್.ಪಿ.ಸಿಯ ಸಹ ತರಬೇತುದಾರರಾಗಿದ್ದ ಕೊಂಬೆಟ್ಟು  ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಜಾನೆಟ್ ಪಾಯಸ್,ಸವಣೂರು ಪ್ರೌಢಶಾಲೆಯ ಕನ್ನಡ ಪ್ರಾಧ್ಯಾಪಕ ಗಣೇಶ್ ಮರಕಾಲ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಅತಿಥಿಗಳನ್ನು ಗೌರವಿಸಿದರು.

ಪ್ರೌಢಶಾಲಾ ಮುಖ್ಯಸ್ಥ ರಘು ಬಿ.ಆರ್ ಸ್ವಾಗತಿಸಿದರು.ಶಿಕ್ಷಕಿ ರೀನಾ ಎಂ.ಡಿ ವಂದಿಸಿದರು.ಶಿಕ್ಷಕ ಕಿಶನ್ ಬಿ.ವಿ ಕಾರ್ಯಕ್ರಮ ನಿರೂಪಿಸಿದರು.

KSRTC ಯಲ್ಲಿ 3745 ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ | ನಿಮ್ಮೂರ ಹುಡುಗ-ಹುಡುಗಿಯರಿಗೆ ವಿಷಯ ತಲುಪಿಸಿ

Leave A Reply

Your email address will not be published.