Ahemadabad: ಐಸ್‌ಕ್ರೀಂ ತಿನ್ನುತ್ತಿದ್ದ ಮಹಿಳೆಗೆ ಹಲ್ಲಿ ಬಾಲ ಪತ್ತೆ; ತೀವ್ರ ಹೊಟ್ಟೆನೋವು, ವಾಂತಿಯಿಂದ ಆಸ್ಪತ್ರೆಗೆ ದಾಖಲಾದ ಮಹಿಳೆ

Ahemadabad: ಗುಜರಾತ್‌ನ ಅಹ್ಮದಾಬಾದ್‌ನ ಮಹಿಳೆಯೊಬ್ಬರು ಐಸ್‌ಕ್ರೀಂ ನಲ್ಲಿ ಸಿಕ್ಕ ವಸ್ತುವಿನ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡ ಘಟನೆ ನಡೆದಿದ್ದು, ತೀವ್ರ ಅಸ್ವಸ್ಥಗೊಂಡ ಆಕೆಯನ್ನು ನಂತರ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ.
ಮಹಿಳೆ ಐಸ್‌ಕ್ರೀಂ ಅರ್ಧ ತಿಂದಿದ್ದು, ನಂತರ ಅದರಲ್ಲಿ ಹಲ್ಲಿಯ ಬಾಲ ಕಾಣಸಿಕ್ಕಿದೆ.
ಮಹಿಳೆ ಅಹಮದಾಬಾದ್‌ನ ಮಣಿನಗರ ಪ್ರದೇಶ್ ಮಹಾಲಕ್ಷ್ಮೀ ಕಾರ್ನರ್ ಅಂಗಡಿಯಿಂದ ತನಗೆ ಮತ್ತು ತನ್ನ ಮಕ್ಕಳಿಗೆ ʼಹ್ಯಾವ್ಮೋರ್ʼ ಬ್ರಾಂಡ್‌ನ ನಾಲ್ಕು ಐಸ್‌ಕ್ರೀಂ ಕೋನ್‌ಗಳಲ್ಲ ಖರೀದಿ ಮಾಡಿದ್ದು, ತಿಂದ ನಂತರ ಈ ದುರ್ಘಟನೆ ನಡೆದಿದೆ. ಐಸ್‌ಕ್ರೀಂ ತಿಂದ ಮಹಿಳೆಗೆ ನಂತರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ವಾಂತಿ ಕೂಡಾ ಆಗಿದೆ. ಕೂಡಲೇ ಆಕೆಯನ್ನು ಮನೆಯವರು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ನಾಲ್ಕು ಕೋನ್ ಐಸ್‌ಕ್ರೀಂ ಖರೀದಿ ಮಾಡಲಾಗಿದ್ದು, ಒಂದು ಕೋನ್ ಐಸ್‌ಕ್ರೀಂ ನಲ್ಲಿ ಹಲ್ಲಿಯ ಬಾಲ ದೊರಕಿದೆ. ನಾವು ಕಂಪನಿಯ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ಎಂದು ಸಂತ್ರಸ್ತ ಮಹಿಳೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಈ ವಿಚಾರದ ಕುರಿತು ಮಹಿಳೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಷನ್‌ಗೆ ದೂರು ನೀಡಿದ್ದಾರೆ. ಮಹಾಲಕ್ಷ್ಮೀ ಕಾರ್ನರ್ ಐಸ್‌ಕ್ರೀಂ ಅವರು ಆಹಾರ ಸುರಕ್ಷತಾ ಕಾಯ್ದೆಯಡಿ ಪರವಾನಗಿ ಹೊಂದಿಲ್ಲದ ಕಾರಣ ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಜೊತೆಗೆ ಐಸ್‌ಕ್ರೀಂ ಬ್ರ್ಯಾಂಡ್ ಹ್ಯಾವ್ಮೋರ್ ಮೇಲೆ 50000 ರೂ. ದಂಡ ವಿಧಿಸಲಾಗಿದೆ.
Comments are closed.