Airtel: ಏರ್‌ಟೆಲ್‌ನಿಂದ ಸ್ಪ್ಯಾಮ್‌ ಪತ್ತೆ ಮಾಡುವ ಟೆಕ್ನಾಲಜಿ

Share the Article

Airtel: ವಾಟ್ಸಾಪ್, ಟೆಲಿಗ್ರಾಮ್, ಫೇಸ್ಟುಕ್, ಇನ್‌ಸ್ಟಾಗ್ರಾಂ, ಎಸ್‌ಎಂಎಸ್, ಇಮೇಲ್, ಒಟಿಟಿ ಮೂಲಕ ಬರುವ ಸ್ಪ್ಯಾಮ್‌ಗಳನ್ನು ತಕ್ಷಣ ಪತ್ತೆ ಮಾಡುವ ಮತ್ತು ನಿರ್ಬಂಧಿಸುವ ನವೀನ ತಂತ್ರಜ್ಞಾನ ಪರಿಹಾರವನ್ನು ಏರ್‌ಟೆಲ್ ಒದಗಿಸುತ್ತಿದೆ. ಈ ಸುರಕ್ಷಿತ ಸೇವೆಯನ್ನು ಹೆಚ್ಚುವರಿ ಶುಲ್ಕ ವಿಧಿಸದೆ ಎಲ್ಲಾ ಏರ್‌ಟೆಲ್‌ ಮೊಬೈಲ್ ಮತ್ತು ಬ್ರಾಡ್ ಬ್ಯಾಂಡ್‌ ಗ್ರಾಹಕರಿಗೆ ಒದಗಿಸಲಾಗುತ್ತಿದೆ.

ಏರ್ ಟೆಲ್ ಸುಧಾರಿತ ಭದ್ರತಾ ವ್ಯವಸ್ಥೆಯ ಮೂಲಕ ಮೋಸ ಅಥವಾ ನಕಲಿ ಎಂದು ಗುರುತಿಸಲಟ್ಟ ಗುರುತಿಸಲ್ಪಟ್ಟ ಜಾಲತಾಣವನ್ನು ಗ್ರಾಹಕನು ಪ್ರವೇಶಿಸಲು ಬಯಸಿದರೂ ಆ ವೆಬ್ ಪುಟ ಲೋಡ್ ಆಗದೆ ನಿರ್ಬಂಧವಾಗುತ್ತದೆ. ಜತೆಗೆ ನಿರ್ಬಂಧದ ಕಾರಣ ಗ್ರಾಹಕರಿಗೆ ತಿಳಿಯಲಿದೆ ಎಂದು ಭಾರತಿ ಏರ್‌ಟೆಲ್‌ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೋಪಾಲ್‌ ವಿಠ್ಠಲ್‌ ತಿಳಿಸಿದರು.

Comments are closed.